ಮಿ. ಮೋದಿ, ನಿಮ್ಮ ತಾಯಿನ ಭೇಟಿಯಾದ್ರಿ, ನನಗೆ ಯಾಕೆ ಆ ಅವಕಾಶವಿಲ್ಲ: ಮೆಹಬೂಬಾ ಪುತ್ರಿ ಇಲ್ತಿಜ ಪ್ರಶ್ನೆ

ಮಿಸ್ಟರ್ ನರೇಂದ್ರ ಮೋದಿ ನೀವು ನಿಮ್ಮ ತಾಯಿಯನ್ನು ಭೇಟಿಯಾದಿರೀ, ಆದರೆ ನಮಗೆ ಯಾಕೆ ಆ ಅವಕಾಶವಿಲ್ಲ ಎಂದು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ ಇಲ್ತಿಜ ಪ್ರಶ್ನೆ ಮಾಡಿದ್ದಾರೆ.
ಇಲ್ತಿಜ-ಮೆಹಬೂಬಾ ಮುಫ್ತಿ
ಇಲ್ತಿಜ-ಮೆಹಬೂಬಾ ಮುಫ್ತಿ

ಮುಂಬೈ: ಮಿಸ್ಟರ್ ನರೇಂದ್ರ ಮೋದಿ ನೀವು ನಿಮ್ಮ ತಾಯಿಯನ್ನು ಭೇಟಿಯಾದಿರೀ, ಆದರೆ ನಮಗೆ ಯಾಕೆ ಆ ಅವಕಾಶವಿಲ್ಲ ಎಂದು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಪುತ್ರಿ ಇಲ್ತಿಜ ಪ್ರಶ್ನೆ ಮಾಡಿದ್ದಾರೆ. 

ಚಂದ್ರಯಾನ 2 ವಿಫಲವಾದಾಗ ಇಡೀ ಭಾರತವೇ ಶೋಕಿಸಿತ್ತು. ಆದರೆ ಕಾಶ್ಮೀರದ ಈ ದುಃಸ್ಥಿತಿಗೆ ಮರುಗುವವರೇ ಇಲ್ಲ. ಕಾಶ್ಮೀರಿಗರು ಆಘಾತ ಮತ್ತು ದ್ರೋಹದ ಆಳವಾದ ನೋವನ್ನು ಅನುಭವಿಸುತ್ತಿದ್ದಾರೆ ಎಂದರು.

ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ(ಆರ್ಟಿಕಲ್ 370) ರದ್ದುಗೊಳಿಸಿ ನೀವು ಉಂಟು ಮಾಡಿರುವ ನೋವನ್ನು ಹೇಗೆ ಪರಿಹರಿಸುತ್ತೀರಿ. 370ನೇ ವಿಧಿ ರದ್ದತಿ ಬಳಿಕ ನಮ್ಮ ತಾಯಿ ಬಂಧನದಲ್ಲಿದ್ದಾರೆ ಎಂದು ಇಲ್ತಿಜ ಹೇಳಿದ್ದಾರೆ. 

ಆರ್ಟಿಕಲ್ 370 ರದ್ಧತಿಯಿಂದ ಕಾಶ್ಮೀರದ ಅಭಿವೃದ್ಧಿ ಮತ್ತು ಮಹಿಳೆಯರ ವಿಮೋಚನೆಗೆ ನೆರವಾಗುತ್ತದೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ ದೇಶದ ಏಕೈಕ ಮುಸ್ಲಿಂ ಬಹುಸಂಖ್ಯಾತ ರಾಜ್ಯದಲ್ಲಿ ಜನಸಂಖ್ಯೆ ಬದಲಾವಣೆಗೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಇಲ್ತಿಜ ಆರೋಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com