ಬಿಜೆಪಿ-ಶಿವಸೇನೆ ’ಮಹಾ’ ಸೀಟು ಹಂಚಿಕೆ ಭಾರತ-ಪಾಕ್ ವಿಭಜನೆಗಿಂತಲೂ ದೊಡ್ಡದು! 

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ-ಶಿವಸೇನೆ ನಡುವಿನ ಸೀಟು ಹಂಚಿಕೆಯನ್ನು ಶಿವಸೇನೆ ನಾಯಕ ಸಂಜಯ್ ರಾವುತ್ ಭಾರತ-ಪಾಕ್ ವಿಭಜನೆಗೆ ಹೋಲಿಕೆ ಮಾಡಿದ್ದಾರೆ. 
ಬಿಜೆಪಿ-ಶಿವಸೇನೆ ’ಮಹಾ’ ಸೀಟು ಹಂಚಿಕೆ ಭಾರತ-ಪಾಕ್ ವಿಭಜನೆಗಿಂತಲೂ ದೊಡ್ಡದು!
ಬಿಜೆಪಿ-ಶಿವಸೇನೆ ’ಮಹಾ’ ಸೀಟು ಹಂಚಿಕೆ ಭಾರತ-ಪಾಕ್ ವಿಭಜನೆಗಿಂತಲೂ ದೊಡ್ಡದು!

ಮುಂಬೈ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಾಗಿ ಬಿಜೆಪಿ-ಶಿವಸೇನೆ ನಡುವಿನ ಸೀಟು ಹಂಚಿಕೆಯನ್ನು ಶಿವಸೇನೆ ನಾಯಕ ಸಂಜಯ್ ರಾವುತ್ ಭಾರತ-ಪಾಕ್ ವಿಭಜನೆಗೆ ಹೋಲಿಕೆ ಮಾಡಿದ್ದಾರೆ. 

ಮಹಾರಾಷ್ಟ್ರ ದೊಡ್ಡ ರಾಜ್ಯ, 288 ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡುವುದು ಭಾರತ-ಪಾಕಿಸ್ತಾನ ವಿಭಜನೆಗಿಂತಲೂ ದೊಡ್ಡದು, ನಾವು ಸರ್ಕಾರದ ಭಾಗವಾಗಿರುವುದಕ್ಕಿಂತಲೂ ವಿಪಕ್ಷದ ಸ್ಥಾನದಲ್ಲಿ ಕುಳಿತಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತು ಎಂದು ರಾವುತ್ ಹೇಳಿದ್ದಾರೆ. 

ಶೀಘ್ರವೇ ಬಿಜೆಪಿ-ಶಿವಸೇನೆ ಮೈತ್ರಿಯ ನಾಯಕರು ಸೀಟು ಹಂಚಿಕೆ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಲಿದ್ದಾರೆ ಎಂದು ರಾವುತ್ ತಿಳಿಸಿದ್ದಾರೆ. 

ಬಿಜೆಪಿ-ಶಿವಸೇನೆ ಮೈತ್ರಿ ಬಗ್ಗೆ ಆ ಪಕ್ಷದ ನಾಯಕರಿಗೆ ಇರುವ ಕಾಳಜಿಗಿಂತಲೂ ಹೆಚ್ಚು ಕಾಳಜಿ ಮಾಧ್ಯಮಗಳಿಗೆ ಇದೆ. ನಾವು ಸಮಾಧಾನದಿಂದ ಇದ್ದೇವೆ, ಸ್ಥಾನ ಹಂಚಿಕೆ ಕುರಿತು ಉಭಯ ಪಕ್ಷಗಳ ನಾಯಕರೂ ಸಹ ಸಕಾರಾತ್ಮಕ ಮಾತುಕತೆ ನಡೆಸುತ್ತಿದ್ದಾರೆ. ನಿರ್ಧಾರ ಏನೇ ಇದ್ದರೂ ಮಾಧ್ಯಮಗಳಿಗೆ ಶೀಘ್ರವೇ ತಿಳಿಸುವುದಾಗಿ ಸಂಜಯ್ ರಾವುತ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com