ಮುಂಬೈ; ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ವಿಚಾರಣೆಗೆ ಖುದ್ದು ಹಾಜರಾಗದಂತೆ ಶಾಶ್ವತವಾಗಿ ವಿನಾಯ್ತಿ ನೀಡುವಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ಕೋರಿದ್ದಾರೆ.
ಇದೇ ಕೇಸಿಗೆ ಸಂಬಂಧಪಟ್ಟಂತೆ ಜೋಧ್ ಪುರ್ ನ್ಯಾಯಾಲಯ ಮುಂದೆ ಸಲ್ಮಾನ್ ಖಾನ್ ಇಂದು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ತಮಗೆ ಕಳೆದ ವಾರ ದರೋಡೆಕೋರನೊಬ್ಬನಿಂದ ಫೇಸ್ ಬುಕ್ ನಲ್ಲಿ ಜೀವಬೆದರಿಕೆ ಬಂದಿದೆ ಎಂದು ಹೇಳಿ ಸಲ್ಮಾನ್ ಖಾನ್ ಇಂದು ವಿಚಾರಣೆಗೆ ನ್ಯಾಯಾಲಯಕ್ಕೆ ಹಾಜರಾಗಲಿಲ್ಲ.
ಈ ಹಿನ್ನಲೆಯಲ್ಲಿ ನ್ಯಾಯಾಲಯ ಡಿಸೆಂಬರ್ 19ಕ್ಕೆ ವಿಚಾರಣೆಯನ್ನು ಮುಂದೂಡಿದೆ. ಕೆಳ ನ್ಯಾಯಾಲಯ ಈಗಾಗಲೇ ಸಲ್ಮಾನ್ ಖಾನ್ ಅಪರಾಧಿ ಎಂದು ಘೋಷಿಸಿ 5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಸಲ್ಮಾನ್ ಮೇಲ್ಮನವಿ ಸಲ್ಲಿಸಿದ್ದರು.
ಫೇಸ್ ಬುಕ್ ನಲ್ಲಿ ಕಳೆದ ವಾರ ಗ್ಯಾಂಗ್ ಶೂಟರ್ ಎಂಬ ಹೆಸರಿನಿಂದ ಬಿಶ್ನೊಯ್ ಸಮುದಾಯದಿಂದ ಸಲ್ಮಾನ್ ಗೆ ಜೀವಬೆದರಿಕೆಯೊಡ್ಡಲಾಗಿತ್ತು.
1998ರಲ್ಲಿ ಜೋಧ್ ಪುರದಲ್ಲಿ ಸಿನಿಮಾ ಶೂಟಿಂಗ್ ವೇಳೆ ಎರಡು ಕೃಷ್ಣಮೃಗಗಳನ್ನು ಬೇಟೆಯಾಡಿದ ಆರೋಪ ಸಲ್ಮಾನ್ ಖಾನ್ ಮೇಲಿದೆ.
Advertisement