
ನವದೆಹಲಿ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ 51 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಕಾಂಗ್ರೆಸ್ ಭಾನುವಾರ ಬಿಡುಗಡೆ ಮಾಡಿದೆ. ಭಿಕಾರ್ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ಹಾಗೂ ಮಂಗಂಪುರ್ ಕ್ಷೇತ್ರದಿಂದ ಕ್ಷದ ಮುಖ್ಯಸ್ಥ ವಿಜಯ್ ಬಾಲಾಸಾಹೇಬ್ ತೋರತ್ ಅವರನ್ನು ಕಣಕ್ಕಿಳಿಸಲು ಕೈ ಪಾಳಯ ನಿರ್ಧರಿಸಿದೆ.
ಮಾಜಿ ಮುಖ್ಯಮಂತ್ರಿ ವಿಲಾಸ್ ರಾವ್ ದೇಶಮುಖ್ ಅವರ ಪುತ್ರ ಅಮಿತ್ ದೇಶಮುಖ್ ಅವರನ್ನು ಲಾತೂರ್ ಸಿಟಿ ಸ್ಥಾನದಿಂದ ಕಣಕ್ಕಿಳಿಸಲಾಗಿದ್ದು, ಮಾಜಿ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ಪುತ್ರಿ ಪ್ರಣಿತಿ ಸೋಲಾಪುರ ನಗರ ಕೇಂದ್ರ ಸ್ಥಾನದಿಂದ ಸ್ಪರ್ಧಿಸಲಿದ್ದಾರೆ
ಪಕ್ಷದ ಎಸ್‌ಸಿ ವಿಭಾಗದ ಮುಖ್ಯಸ್ಥರಾಗಿರುವ ಪಕ್ಷದ ಹಿರಿಯ ಮುಖಂಡ ನಿತಿನ್ ರೌತ್ ಅವರನ್ನು ನಾಗ್ಪುರ ಉತ್ತರ (ಮೀಸಲು) ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.
ಪಕ್ಷದ ಕೇಂದ್ರ ಚುನಾವಣಾ ಸಮಿತಿಯು ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಹೆಸರುಗಳನ್ನು ಅಂತಿಮಗೊಳಿಸಿದೆ.ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆ ಅಕ್ಟೋಬರ್ 21 ರಂದು ನಡೆಯಲಿದ್ದು, ಅಕ್ಟೋಬರ್ 24 ರಂದು ಫಲಿತಾಂಶ ಹೊರಬರಲಿದೆ.
Advertisement