73ನೇ ಸ್ವಾತಂತ್ರ್ಯ ದಿನಾಚರಣೆ: ಪ್ರಧಾನಿ ನರೇಂದ್ರ ಮೋದಿ ಭಾಷಣದ ಮುಖ್ಯಾಂಶಗಳು 

ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಡಿರುವ ಭಾಷಣದ ಮುಖ್ಯಾಂಶಗಳು ಇಲ್ಲಿವೆ. 
ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನದ ಭಾಷಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
ದೆಹಲಿಯ ಕೆಂಪುಕೋಟೆಯಲ್ಲಿ ಸ್ವಾತಂತ್ರ್ಯ ದಿನದ ಭಾಷಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ
Updated on

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ ದೆಹಲಿಯ ಕೆಂಪುಕೋಟೆಯಲ್ಲಿ 73ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಮಾಡಿರುವ ಭಾಷಣದ ಮುಖ್ಯಾಂಶಗಳು ಇಲ್ಲಿವೆ.


1. ಆಹಾರ ಮತ್ತು ನೀರಿನ ಸಂರಕ್ಷಣೆ: 73ನೇ ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ದೇಶದ ಹಲವು ಕಡೆಗಳಲ್ಲಿ ಜನರು ಪ್ರವಾಹದಿಂದ ತತ್ತರಿಸಿ ಹೋಗಿದ್ದಾರೆ. ಪ್ರವಾಹಪೀಡಿತರ ಸಹಾಯಕ್ಕೆ ನಾವೆಲ್ಲರೂ ಒಟ್ಟಾಗಿ ನಿಂತು ಈ ಸಂದರ್ಭದಲ್ಲಿ ಸಹಾಯ ಮಾಡೋಣ.


2. ಇಂದು ನೀರಿನ ಮಹತ್ವವೇನೆಂದು ದೇಶದ ಜನತೆಗೆ ಸಂಪೂರ್ಣವಾಗಿ ಅರ್ಥವಾಗುವ ಸಂದರ್ಭ ಬಂದಿದೆ. ಇದಕ್ಕಾಗಿ ನಮ್ಮ ಸರ್ಕಾರ ಜಲಶಕ್ತಿ ಸಚಿವಾಲಯವನ್ನು ಸ್ಥಾಪಿಸಿದೆ. ವೈದ್ಯಕೀಯ ವಲಯವನ್ನು ಇನ್ನಷ್ಟು ಜನಸ್ನೇಹಿಯಾಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ. 


3.ಸ್ವಾತಂತ್ರ್ಯ ಸಿಕ್ಕಿ 70 ದಶಕಗಳೇ ಕಳೆದರೂ ಕೂಡ ಇನ್ನೂ ಹಲವು ಕಡೆಗಳಲ್ಲಿ ಜನರಿಗೆ ನೀರಿನ ಸಮಸ್ಯೆಯಿದೆ. ಮುಂದಿನ ವರ್ಷಗಳಲ್ಲಿ ಜಲಜೀವನ ಮಿಷನ್ ನಡಿ ಅಭಿವೃದ್ಧಿ ಕಾರ್ಯಗಳನ್ನು ತ್ವರಿತಗೊಳಿಸಲಾಗುವುದು.


4. ತ್ರಿವಳಿ ತಲಾಖ್: ನಮ್ಮ ದೇಶದ ಇತಿಹಾಸದಲ್ಲಿ ಸತಿ ಪದ್ಧತಿ, ಹೆಣ್ಣು ಭ್ರೂಣಹತ್ಯೆ, ವರದಕ್ಷಿಣೆ ಪಿಡುಗಿನ ವಿರುದ್ಧ ಅನೇಕರು ಹೋರಾಟ ನಡೆಸಿದ್ದಾರೆ. ಹೀಗಿರುವಾಗ ಮುಸ್ಲಿಂ ಮಹಿಳೆಯರನ್ನು ರಕ್ಷಿಸಲು ತ್ರಿವಳಿ ತಲಾಖ್ ನ್ನು ಏಕೆ ನಿಷೇಧಿಸಬಾರದು? ಇದಕ್ಕೆ ರಾಜಕೀಯ ಬಣ್ಣ ಬೆರೆಸುವುದು ಬೇಡ.


5. ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕೋಣ. ನಾವು ಹೋಗುವ ದಾರಿಯಲ್ಲಿ ಹಲವು ಅಡೆತಡೆಗಳಿರಬಹುದು. ಆದರೆ ಅವುಗಳನ್ನು ನಿವಾರಿಸಿ ಮುಂದೆ ಹೋಗಲು ನೋಡೋಣ. ತ್ರಿವಳಿ ತಲಾಖ್ ನಿಂದ ಮುಸ್ಲಿಂ ಮಹಿಳೆಯರು ಎಷ್ಟೊಂದು ತೊಂದರೆ ಅನುಭವಿಸುತ್ತಿದ್ದರು ಎಂದು ಒಂದು ಬಾರಿ ಯೋಚಿಸಿ ನೋಡಿ,  ನಮ್ಮ ಸರ್ಕಾರ ಅದಕ್ಕೆ ಇತಿಶ್ರೀ ಹಾಡಿದೆ. 


6. ಪ್ಲಾಸ್ಟಿಕ್ ಬಳಕೆಗೆ ಮುಕ್ತಿ ಹಾಡಲು ನೋಡೋಣ. ಈ ನಿಟ್ಟಿನಲ್ಲಿ ನಮ್ಮ ತಂಡವನ್ನು ಕೆಲಸಕ್ಕೆ ಸಜ್ಜುಮಾಡಿದ್ದೇವೆ. ಇದಕ್ಕೆ ಅಕ್ಟೋಬರ್ 2 ಗಾಂಧಿ ಜಯಂತಿ ಸಮಯದಲ್ಲಿ ಮಹತ್ವದ ಹೆಜ್ಜೆಯಿಡೋಣ.


7. 100ನೇ ಸ್ವಾತಂತ್ರ್ಯ ದಿನ ಆಚರಿಸುತ್ತಿರುವ ಆಫ್ಘಾನಿಸ್ತಾನೀಯರಿಗೆ ಶುಭಕಾಮನೆಗಳು.


8. ಮುಂದಿನ 5 ವರ್ಷಗಳಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ 100 ಟ್ರಿಲಿಯನ್ ಹೂಡಿಕೆ ಮಾಡುವುದು ನಮ್ಮ ಉದ್ದೇಶವಾಗಿದೆ.


9. ಮುಕ್ತ ವ್ಯಾಪಾರ ನೀತಿಯಡಿ 50 ದೇಶಗಳ ಜೊತೆ ಸುಲಭವಾಗಿ ವಹಿವಾಟು, ಉದ್ಯಮ ನಡೆಸುವುದು ನಮ್ಮ ಉದ್ದೇಶವಾಗಿದೆ.


10. ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವವರ ವಿರುದ್ಧ ಭಾರತ ಹೋರಾಟ ನಡೆಸುತ್ತದೆ. ಭಯೋತ್ಪಾದಕರಿಗೆ ಭಾರತ ಮಾತ್ರವಲ್ಲ ಗುರಿಯಾಗಿರುವ ದೇಶ, ಬಾಂಗ್ಲಾದೇಶ, ಶ್ರೀಲಂಕಾ, ಆಫ್ಘಾನಿಸ್ತಾನಗಳು ಕೂಡ ಗುರಿಯಾಗಿರಿಸಿರುವ ದೇಶಗಳಾಗಿವೆ.


11. ಇಂದು ನಮ್ಮ ದೇಶ ಸೇರಿದಂತೆ ವಿಶ್ವದಲ್ಲಿ ಜನಸಂಖ್ಯಾ ಸ್ಫೋಟವಾಗುತ್ತಿದೆ. ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆ ಬಗ್ಗೆ ನಾವೆಲ್ಲಾ ಇಂದು ಯೋಚಿಸಬೇಕಿದೆ. ನಮ್ಮ ಮಕ್ಕಳ ಆಶೋತ್ತರಗಳನ್ನು ನಮಗೆ ಈಡೇರಿಸಲು ಸಾಧ್ಯವಾಗುವುದೇ ಎಂದು ನಾವೆಲ್ಲರೂ ಯೋಚಿಸಬೇಕು. ಜನಸಂಖ್ಯಾ ಸ್ಫೋಟದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮತ್ತು ಚರ್ಚೆಗಳಾಗಬೇಕಿದೆ.


12. 5 ವರ್ಷಗಳ ಹಿಂದೆ ನಮ್ಮ ದೇಶದ ಜನ ಕೇಳುತ್ತಿದ್ದರು, ದೇಶ ಬದಲಾಗಬಹುದೇ ಅಥವಾ ದೇಶ ಬದಲಾಗುತ್ತದೆಯೇ ಎಂದು, ಇಂದು ಜನರು ಹೇಳುತ್ತಿದ್ದಾರೆ. ಹೌದು ನನ್ನ ದೇಶ ಬದಲಾಗಬಹುದು ಎಂದು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com