ಕೋರ್ಟ್ ತೀರ್ಪಿನಿಂದ ಚಿದಂಬರಂ ಬಂಧನದವರೆಗೆ: 24 ಗಂಟೆಗಳ ಬೆಳವಣಿಗೆಗಳು 

ಮಾಜಿ ಕೇಂದ್ರ ವಿತ್ತ ಮಂತ್ರಿ ಪಿ ಚಿದಂಬರಂ ಅವರನ್ನು ದೆಹಲಿಯ ಜೋರ್ ಬಾಗ್ ನಲ್ಲಿರುವ ಅವರ ನಿವಾಸದಿಂದ ಸಿಬಿಐ ರಾತ್ರಿ ಬಂಧಿಸಿ ಇಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ. 
ಪಿ ಚಿದಂಬರಂ
ಪಿ ಚಿದಂಬರಂ

ನವದೆಹಲಿ: ಮಾಜಿ ಕೇಂದ್ರ ವಿತ್ತ ಮಂತ್ರಿ ಪಿ ಚಿದಂಬರಂ ಅವರನ್ನು ದೆಹಲಿಯ ಜೋರ್ ಬಾಗ್ ನಲ್ಲಿರುವ ಅವರ ನಿವಾಸದಿಂದ ಸಿಬಿಐ ರಾತ್ರಿ ಬಂಧಿಸಿ ಇಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಿದೆ. ಮೊನ್ನೆ ದೆಹಲಿ ಹೈಕೋರ್ಟ್ ಅರ್ಜಿ ತಿರಸ್ಕರಿಸಿದ ನಂತರ ನಿನ್ನೆ ಬಂಧನದವರೆಗೆ ಏನೇನು ಬೆಳವಣಿಗೆಗಳಾದವು ಎಂಬ ಬಗ್ಗೆ ಮಾಹಿತಿ ಇಲ್ಲಿದೆ: 


ಬೆಳಗ್ಗೆ 10.30: ದೆಹಲಿ ಹೈಕೋರ್ಟ್ ನಲ್ಲಿ ತಪ್ಪಿತಸ್ಥ ಎಂದು ತೀರ್ಪು ಹೊರಬರುತ್ತಿದ್ದಂತೆ ಹಿರಿಯ ವಕೀಲ ಕಪಿಲ್ ಸಿಬಲ್ ಮೂಲಕ

ಬಂಧನವನ್ನು ತಪ್ಪಿಸಲು ಸುಪ್ರೀಂ ಕೋರ್ಟ್ ಮೂಲಕ ಪಿ ಚಿದಂಬರಂರಿಂದ ವಿಶೇಷ ವಿಚಾರಣಾ ಅರ್ಜಿ ಸಲ್ಲಿಕೆ.


10.40: ಸುಪ್ರೀಂ ಕೋರ್ಟ್  ಮುಖ್ಯ ನ್ಯಾಯಾಧೀಶ ರಂಜನ್ ಗೊಗೊಯ್ ಅವರೇ ಕೇಸಿನ ವಿಚಾರಣೆ ಬಗ್ಗೆ ತೀರ್ಮಾನಿಸಲಿ ಎಂದು ವಕೀಲ ಕಪಿಲ್ ಸಿಬಲ್ ಗೆ ಹೇಳಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್ ವಿ ರಮಣ.


10.50: ಅಯೋಧ್ಯೆ ಕೇಸಿನ ವಿಚಾರಣೆಯಿರುವುದರಿಂದ ಇಂದು ಚಿದಂಬರಂ ವಿಶೇಷ ಅರ್ಜಿ ವಿಚಾರಣೆ ಸಾಧ್ಯವಿಲ್ಲ ಎಂದು ಶುಕ್ರವಾರ ಅಂದರೆ ನಾಳೆಗೆ ಮುಂದೂಡಿಕೆ.


11 ಗಂಟೆ: ಚಿದಂಬರಂ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿಗೊಳಿಸಿದ ಜಾರಿ ನಿರ್ದೇಶನಾಲಯ


12 ಗಂಟೆ: ಚಿದಂಬರಂ ಸಲ್ಲಿಸಿದ ಅರ್ಜಿಯಲ್ಲಿ ದೋಷವಿದೆ ಎಂದು ಗುರುತಿಸಿದ ರಿಜಿಸ್ಟ್ರಿ


2 ಗಂಟೆ: ತುರ್ತು ವಿಚಾರಣೆ ನಡೆಸುವಂತೆ ಕಪಿಲ್ ಸಿಬಲ್ ನ್ಯಾಯಮೂರ್ತಿ ಎನ್ ವಿ ರಮಣ ಮೇಲೆ ಒತ್ತಡ 


2.20: ಅರ್ಜಿಯಲ್ಲಿ ಲೋಪವಿದೆ ಎಂದು ಮತ್ತೊಮ್ಮೆ ಕರೆದು ಹೇಳಿದ ರಿಜಿಸ್ಟ್ರಿ


2.25 : ಲೋಪದೋಷ ಸರಿಪಡಿಸಿದ ಸಿಬಲ್. ಮುಖ್ಯನ್ಯಾಯಮೂರ್ತಿಗಳಿಗೆ ಅರ್ಜಿ ಕಳುಹಿಸಲು ರಿಜಿಸ್ಟ್ರಾರ್ ಒಪ್ಪಿಗೆ 


ಸಂಜೆ 5 ಗಂಟೆ: ಶುಕ್ರವಾರ ಅರ್ಜಿ ವಿಚಾರಣೆ ಎಂದು ಕಪಿಲ್ ಸಿಬಲ್ ಗೆ ರಿಜಿಸ್ಟ್ರಾರ್ ಮೂಲಕ ಮಾಹಿತಿ


6 ಗಂಟೆ: ಚಿದಂಬರಂ ವಿರುದ್ಧ ಲುಕ್ ಔಟ್ ನೊಟೀಸ್ ಜಾರಿ 


8.10 ರಾತ್ರಿ: ಕಾಂಗ್ರೆಸ್ ಕೇಂದ್ರ ಕಚೇರಿಯಲ್ಲಿ ಚಿದಂಬರಂ ಹಾಜರು, ಮಾಧ್ಯಮಗಳನ್ನುದ್ದೇಶಿಸಿ ಸುದ್ದಿಗೋಷ್ಠಿ


8.30: ಕಾಂಗ್ರೆಸ್ ಕೇಂದ್ರ ಕಚೇರಿಗೆ ಸಿಬಿಐ ತಂಡ ಆಗಮನ


ರಾತ್ರಿ 9 ಗಂಟೆಗೆ: ಚಿದಂಬರಂ ನಿವಾಸಕ್ಕೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಅಧಿಕಾರಿಗಳ ತಂಡ ಆಗಮನ


ರಾತ್ರಿ 10 ಗಂಟೆಗೆ: ಚಿದಂಬರಂ ಅಧಿಕೃತವಾಗಿ ಬಂಧನ


ಬಂಧನದ ನಂತರ ವೈದ್ಯಕೀಯ ತಪಾಸಣೆಗೆ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com