ಪೊಲೀಸರ ಕಾರ್ಯ ಶ್ಲಾಘನೀಯ, ಸೂಕ್ತ ಕಾನೂನು ವ್ಯವಸ್ಥೆ ಮೂಲಕ ಆರೋಪಿಗಳ ಅಂತ್ಯವಾಗಬೇಕಿತ್ತು: ಮಹಿಳಾ ಆಯೋಗ 

ಪಶುವೈದ್ಯೆ ಡಾ ಪ್ರಿಯಾಂಕಾ ರೆಡ್ಡಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬೆಂಕಿ ಹಚ್ಚಿ ಸುಟ್ಟು ಕೊಂದು ಹಾಕಿದ ಆರೋಪಿಗಳನ್ನು ಶುಕ್ರವಾರ ನಸುಕಿನ ಜಾವ ತೆಲಂಗಾಣ ಪೊಲೀಸರು ಎನ್ ಕೌಂಟರ್ ನಲ್ಲಿ ಕೊಂದು ಹಾಕಿರುವ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಪ್ರತಿಕ್ರಿಯೆ ನೀಡಿದ್ದಾರೆ.
ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಕ್ಷೆ ರೇಖಾ ಶರ್ಮ
ರಾಷ್ಟ್ರೀಯ ಮಹಿಳಾ ಆಯೋಗ ಅಧ್ಯಕ್ಷೆ ರೇಖಾ ಶರ್ಮ

ನವದೆಹಲಿ: ಪಶುವೈದ್ಯೆ ಡಾ ಪ್ರಿಯಾಂಕಾ ರೆಡ್ಡಿ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ ಬೆಂಕಿ ಹಚ್ಚಿ ಸುಟ್ಟು ಕೊಂದು ಹಾಕಿದ ಆರೋಪಿಗಳನ್ನು ಶುಕ್ರವಾರ ನಸುಕಿನ ಜಾವ ತೆಲಂಗಾಣ ಪೊಲೀಸರು ಎನ್ ಕೌಂಟರ್ ನಲ್ಲಿ ಕೊಂದು ಹಾಕಿರುವ ಬಗ್ಗೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮ ಪ್ರತಿಕ್ರಿಯೆ ನೀಡಿದ್ದಾರೆ.


ಈ ದೇಶದ ಸಾಮಾನ್ಯ ಪ್ರಜೆಯಾಗಿ ಆರೋಪಿಗಳಿಗೆ ಪೊಲೀಸರು ಈ ರೀತಿಯ ಅಂತ್ಯವನ್ನು ನೀಡಿದ್ದು ಖುಷಿ ನೀಡಿದೆ. ನಾವೆಲ್ಲರೂ ಇದನ್ನೇ ಬಯಸಿದ್ದೆವು. ಆದರೆ ಇದನ್ನು ಸರಿಯಾದ ಕಾನೂನು ವ್ಯವಸ್ಥೆ ಮೂಲಕ ಮಾಡಬೇಕಾಗಿತ್ತು. ಸರಿಯಾದ ಮಾರ್ಗದ ಮೂಲಕ ಪೊಲೀಸರು ಈ ಕ್ರಮ ಕೈಗೊಂಡಿದ್ದರೆ ಉತ್ತಮವಾಗುತ್ತಿತ್ತು ಎಂದಿದ್ದಾರೆ.


ಅತ್ಯಾಚಾರವೆಸಗಿ ಕೊಂದು ಹಾಕಿದ ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕೆಂದು ನಾವು ಆರಂಭದಿಂದಲೂ ಒತ್ತಾಯಿಸುತ್ತಿದ್ದೆವು. ಇಂದು ಆದ ಘಟನೆಯಲ್ಲಿ ಪೊಲೀಸರು ಸರಿಯಾದ ತೀರ್ಮಾನ ತೆಗೆದುಕೊಂಡಿರಬಹುದು. ಈ ಎನ್ ಕೌಂಟರ್ ಎಂತಹ ಪರಿಸ್ಥಿತಿಯಲ್ಲಿ ಆಯಿತು, ಅವರು ಏಕೆ ಎನ್ ಕೌಂಟರ್ ಮಾಡುವ ತೀರ್ಮಾನಕ್ಕೆ ಬಂದರು ಎಂದು ನನಗೆ ಗೊತ್ತಿಲ್ಲ ಎಂದು ರೇಖಾ ಶರ್ಮ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com