ಪೌರತ್ವ ತಿದ್ದುಪಡಿ ಮಸೂದೆಗೆ ಅನುಮೋದನೆ ನೀಡಿದರೆ ಅದಕ್ಕೆ ತಕ್ಕ ಬೆಲೆಯನ್ನು ನಾವು ತೆರಬೇಕಾಗುತ್ತದೆ: ಪಿ ಚಿದಂಬರಂ 

ನಾಗರಿಕ(ತಿದ್ದುಪಡಿ)ಮಸೂದೆ 2019 ನಿಸ್ಸಂಶಯವಾಗಿ ಅಸಂವಿಧಾನಿಕವಾದದ್ದು ಸಂಸತ್ತಿನಲ್ಲಿ ಅದು ಅನುಮೋದನೆಗೊಂಡರೆ ಹೋರಾಟ ಸುಪ್ರೀಂ ಕೋರ್ಟ್ ಗೆ ಹೋಗುತ್ತದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಪಿ ಚಿದಂಬರಂ ಹೇಳಿದ್ದಾರೆ. 
ಪಿ ಚಿದಂಬರಂ
ಪಿ ಚಿದಂಬರಂ

ನವದೆಹಲಿ: ನಾಗರಿಕ(ತಿದ್ದುಪಡಿ)ಮಸೂದೆ 2019 ನಿಸ್ಸಂಶಯವಾಗಿ ಅಸಂವಿಧಾನಿಕವಾದದ್ದು ಸಂಸತ್ತಿನಲ್ಲಿ ಅದು ಅನುಮೋದನೆಗೊಂಡರೆ ಹೋರಾಟ ಸುಪ್ರೀಂ ಕೋರ್ಟ್ ಗೆ ಹೋಗುತ್ತದೆ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಪಿ ಚಿದಂಬರಂ ಹೇಳಿದ್ದಾರೆ.


ನ್ಯಾಯವಾದಿಗಳು ಮತ್ತು ನ್ಯಾಯಾಧೀಶರ ಪರವಾಗಿ ಚುನಾಯಿತ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 


ಸರ್ಕಾರದ ಈ ಉದ್ದೇಶಿತ ತಿದ್ದುಪಡಿ ಮಸೂದೆಯಡಿ 2014, ಡಿಸೆಂಬರ್ 31ರವರೆಗೆ ಧಾರ್ಮಿಕ ಕಿರುಕುಳ ಅನುಭವಿಸಿ ದೇಶ ತೊರೆದು ಭಾರತಕ್ಕೆ ಬಂದ ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದ ಹಿಂದೂ, ಸಿಖ್, ಬೌದ್ಧರು, ಜೈನರು, ಪಾರ್ಸಿಗಳು ಮತ್ತು ಕ್ರಿಸ್ತಿಯನ್ನರು ಭಾರತದ ನಾಗರಿಕತ್ವ ಪಡೆಯಲಿದ್ದಾರೆ. ಅವರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುವುದಿಲ್ಲ.


ತಿದ್ದುಪಡಿ ಮಸೂದೆಗೆ ನಿನ್ನೆ ಲೋಕಸಭೆಯಲ್ಲಿ 311 ಸದಸ್ಯರು ಪರವಾಗಿ ಮತ್ತು 80 ಸದಸ್ಯರು ವಿರುದ್ಧವಾಗಿ ಮತ ಹಾಕಿದ್ದರು.
ನಾಗರಿಕ ತಿದ್ದುಪಡಿ ಮಸೂದೆ ಅಸಂವಿಧಾನಿಕ. ಸಂಸತ್ತಿನಲ್ಲಿ ಅಸಂವಿಧಾನಿಕ ಮಸೂದೆ ಅನುಮೋದನೆಯಾದರೆ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಗೆ ಹೋಗಲಾಗುತ್ತದೆ. ನ್ಯಾಯಾಧೀಶರು ಮತ್ತು ನ್ಯಾಯವಾದಿಗಳ ಪರವಾಗಿ ಚುನಾಯಿತ ಪ್ರತಿನಿಧಿಗಳು ತಮ್ಮ ಜವಾಬ್ದಾರಿಗಳಿಂದ ನುಣುಚಿಕೊಳ್ಳುತ್ತಿದ್ದಾರೆ. 


ದೇಶದ ಜನರು ಮತ್ತು ದೇಶದ ಹಿತಾಸಕ್ತಿಯನ್ನು ಬಲಿಕೊಡುವ ಪಕ್ಷಕ್ಕೆ ಬಹುಮತ ನೀಡಿ ಅಧಿಕಾರ ನೀಡಿದ್ದಕ್ಕೆ ನಾವು ಬೆಲೆ ತೆರಬೇಕಾಗುತ್ತದೆ ಎಂದು ಸಹ ಚಿದಂಬರಂ ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com