ಅಮಿತ್ ಶಾ
ಅಮಿತ್ ಶಾ

ಪೌರತ್ವ ತಿದ್ದುಪಡಿ ಮಸೂದೆ: ರಾಜ್ಯಸಭೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಬಿಜೆಪಿ 

ಹಲವು ವಿರೋಧ ಪಕ್ಷಗಳ ವಿರೋಧದ ನಡುವೆಯೂ ಉದ್ದೇಶಿತ ಪೌರತ್ವ ತಿದ್ದುಪಡಿ ವಿಧೇಯಕ ರಾಜ್ಯಸಭೆಯಲ್ಲಿ ಬುಧವಾರ ಅನುಮೋದನೆಯಾಗಬಹುದು ಎಂದು ಭಾರತೀಯ ಜನತಾ ಪಾರ್ಟಿ ವಿಶ್ವಾಸ ವ್ಯಕ್ತಪಡಿಸಿದೆ. 

ನವದೆಹಲಿ: ಹಲವು ವಿರೋಧ ಪಕ್ಷಗಳ ವಿರೋಧದ ನಡುವೆಯೂ ಉದ್ದೇಶಿತ ಪೌರತ್ವ ತಿದ್ದುಪಡಿ ವಿಧೇಯಕ ರಾಜ್ಯಸಭೆಯಲ್ಲಿ ಬುಧವಾರ ಅನುಮೋದನೆಯಾಗಬಹುದು ಎಂದು ಭಾರತೀಯ ಜನತಾ ಪಾರ್ಟಿ ವಿಶ್ವಾಸ ವ್ಯಕ್ತಪಡಿಸಿದೆ.


245 ಸದಸ್ಯ ಬಲ ಹೊಂದಿರುವ ರಾಜ್ಯಸಭೆಯಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ವಿಧೇಯಕ ಪರ 124ರಿಂದ 130 ಸದಸ್ಯರ ಬೆಂಬಲ ಸಿಗಬಹುದು ಎಂಬ ವಿಶ್ವಾಸವಿದೆ.ಇದುವರೆಗೆ ಮೋದಿ ಸರ್ಕಾರ ಜಾರಿಗೆ ತಂದಿದ್ದ ಮಸೂದೆಗಳಿಗೆ ಬೆಂಬಲ ನೀಡುತ್ತಿದ್ದ ತೆಲಂಗಾಣ ರಾಷ್ಟ್ರ ಸಮಿತಿ ಕೂಡ ಈ ಬಾರಿ ಪೌರತ್ವ ತಿದ್ದುಪಡಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿದೆ.ಶಿವಸೇನೆ ಕೂಡ ಮಸೂದೆಗೆ ಬೆಂಬಲ ನೀಡುವುದು ಸಂಶಯವಾಗಿದೆ.


ರಾಜ್ಯಸಭೆಯಲ್ಲಿ ಬಿಜೆಪಿಯ 83 ಸದಸ್ಯರಿದ್ದಾರೆ. 7 ಮಂದಿ ಸ್ವತಂತ್ರ ಸದಸ್ಯರು ಮತ್ತು ನಾಮಾಂಕಿತ ಸದಸ್ಯರು, ಹಲವು ಸ್ಥಳೀಯ ಪಕ್ಷಗಳ ಸದಸ್ಯರು ಮಸೂದೆ ಪರವಾಗಿ ಮತ ಹಾಕಲಿದ್ದಾರೆ. 


ಮಸೂದೆಯನ್ನು ವಿರೋಧಿಸುತ್ತಿರುವವರಲ್ಲಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಬಹುಜನ ಸಮಾಜ ಪಕ್ಷ, ಸಮಾಜವಾದಿ ಪಕ್ಷ, ಡಿಎಂಕೆ, ರಾಷ್ಟ್ರೀಯ ಜನತಾ ದಳ, ಎಡರಂಗ, ಎನ್ ಸಿಪಿ, ತೆಲಂಗಾಣ ರಾಷ್ಟ್ರ ಸಮಿತಿಯಿಂದ ಕ್ರಮವಾಗಿ 46, 13, 4,9, 5, 4,6, 4 ಮತ್ತು 6 ಮಂದಿ ಸದಸ್ಯರು ಸೇರಿ ಒಟ್ಟು 97 ಮಂದಿ ಸದಸ್ಯರು ವಿರುದ್ಧವಾಗಿ ಮತ ಹಾಕಲಿದ್ದು ಶಿವಸೇನೆ, ಆಮ್ ಆದ್ಮಿ ಪಾರ್ಟಿ ಮತ್ತು ಕೆಲವು ಸಣ್ಣ ಪಕ್ಷಗಳು ವಿರುದ್ಧವಾಗಿ ಮತ ಹಾಕಿದರೆ ಅವರ ಸಂಖ್ಯೆ 110ಕ್ಕೇರುತ್ತದೆ. 

Related Stories

No stories found.

Advertisement

X
Kannada Prabha
www.kannadaprabha.com