ಎನ್ ಆರ್ ಸಿ: ಮುಸ್ಲಿಮೇತರರಿಗೆ ಸಿಗುತ್ತಾ ಭಾರತದ ಪೌರತ್ವ?: ಅಮಿತ್ ಶಾ ಹೇಳಿದ್ದಿಷ್ಟು 

ಎನ್ ಆರ್ ಸಿ ದೇಶದ ಭದ್ರತೆಗೆ ಅತ್ಯಗತ್ಯವಾಗಿದ್ದು ಜಾರಿಗೊಳಿಸುತ್ತೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. 

ಅ.1 ರಂದು ಪಶ್ಚಿಮ ಬಂಗಾಳದಲ್ಲಿ ಎನ್ ಆರ್ ಸಿ ಕುರಿತು ಬಿಜೆಪಿ ಆಯೋಜಿಸಿದ್ದ ಸೆಮಿನಾರ್ ನಲ್ಲಿ ಮಾತನಾಡಿರುವ ಅಮಿತ್ ಶಾ, ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಎನ್ ಆರ್ ಸಿ ಕುರಿತು ಜನರಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. 

ಎನ್ ಆರ್ ಸಿಯನ್ನು ಟಿಎಂಸಿ ಬಂಗಾಳದ ವಿರೋಧಿ ನಡೆ ಎಂದು ಹೇಳುತ್ತಿದ್ದು, ಹಿಂದೂಗಳು ಸೇರಿದಂತೆ 12 ಲಕ್ಷ ಬಂಗಾಳಿ ಮಾತನಾಡುವ ಜನರ ಹೆಸರು ಎನ್ ಆರ್ ಸಿಯ ಅಂತಿಮ ಕರಡು ಪ್ರತಿಯಲ್ಲಿ ನಾಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಟಿಎಂಸಿ  ಎನ್ ಆರ್ ಸಿಯನ್ನು ಬಂಗಾಳ ವಿರೋಧಿ ನಡೆ ಎಂದು ಹೇಳುತ್ತಿದೆ. 

ಎನ್ ಆರ್ ಸಿ ಕುರಿತಂತೆ ಪಶ್ಚಿಮ ಬಂಗಾಳದ ಜನತೆಯನ್ನು ದಾರಿ ತಪ್ಪಿಸಲಾಗುತ್ತಿದೆ. ಊಹಾಪೋಹಗಳ ಬಗ್ಗೆ ಸ್ಪಷ್ಟನೆ ನೀಡುವುದಕ್ಕಾಗಿ ಇಲ್ಲಿಗೆ ಬಂದಿದ್ದೇನೆ, ಎನ್ ಆರ್ ಸಿ ಜಾರಿಯಾದರೆ ಲಕ್ಷಾಂತರ ಹಿಂದೂಗಳು ಪಶ್ಚಿಮ ಬಂಗಾಳ ತೊರೆಯಬೇಕಾಗುತ್ತದೆ ಎಂದು ಹೇಳುತ್ತಿದ್ದಾರೆ. ಇದಕ್ಕಿಂತ ದೊಡ್ಡ ಸುಳ್ಳು ಇರಲಾರದು ಎಂದು ಅಮಿತ್ ಶಾ ಹೇಳಿದ್ದಾರೆ. 

ಎನ್ ಆರ್ ಸಿ ಜಾರಿಗೂ ಮುನ್ನ ಎಲ್ಲಾ ಹಿಂದೂಗಳು, ಬೌದ್ಧರು, ಸಿಖ್, ಜೈನ್ ನಿರಾಶ್ರಿತರು ದೇಶ ತೊರೆಯುವುದು ಅಗತ್ಯವಿಲ್ಲ. ಎನ್ ಆರ್ ಸಿ ಪೂರ್ಣಪ್ರಮಾಣದಲ್ಲಿ ಜಾರಿಯಾಗುವುದಕ್ಕೂ ಮುನ್ನ ಅವರಿಗೆಲ್ಲಾ ಪೌರತ್ವ ದೊರೆಯಲಿದ್ದು, ಭಾರತೀಯ ಪ್ರಜೆಗಳ ಎಲ್ಲಾ ಹಕ್ಕುಗಳೂ ಅವರಿಗೆ ಸಿಗಲಿದೆ ಎಂದು ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com