ಮಹಾಬಲಿಪುರಂನಲ್ಲಿ ಮೋದಿ-ಕ್ಸಿ ಭೇಟಿ: ಚೀನಾ ಅಧ್ಯಕ್ಷರಿಗಾಗಿ ಚೆಟ್ಟಿನಾಡು ವಿಶೇಷ ಖಾದ್ಯ

ಮಹಾಬಲಿಪುರಂ ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಅನೌಪಚಾರಿಕ ಮಾತುಕತೆಗೆ ವೇದಿಕೆ ಸಿದ್ದವಾಗಿದ್ದು ಇಂದು ಮಧ್ಯಾಹ್ನ ಚೀನಾ ಅಧ್ಯಕ್ಷರು ಚೆನ್ನೈಗೆ ಆಗಮಿಸಿದ್ದಾ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೆನ್ನೈ: ಮಹಾಬಲಿಪುರಂ ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಅನೌಪಚಾರಿಕ ಮಾತುಕತೆಗೆ ವೇದಿಕೆ ಸಿದ್ದವಾಗಿದ್ದು ಇಂದು ಮಧ್ಯಾಹ್ನ ಚೀನಾ ಅಧ್ಯಕ್ಷರು ಚೆನ್ನೈಗೆ ಆಗಮಿಸಿದ್ದಾರೆ. ಈ ವೇಳೆ ಜಿನ್‌ಪಿಂಗ್ ಅವರಿಗೆ ಇಂದು ರಾತ್ರಿ ಊಟಕ್ಕಾಗಿ ದಕ್ಷಿಣ ಭಾರತೀಯ ಶೈಲಿಯ ಅಡುಗೆ ತಯಾರಿಸಲಾಗುತ್ತಿದೆ.

ಇಂದು ಸಂಜೆ ಮಹಾಬಲಿಪುರಂನಲ್ಲಿ ಚೀನಾ ಅಧ್ಯಕ್ಷರ ಗೌರವಾರ್ಥ ಪ್ರಧಾನಿ ಮೋದಿ ಆಯೋಜಿಸಿದ್ದ ವಿಶೇಷ ಭೋಜನಕೂಟದಲ್ಲಿ, ಭಾರತದ ವಿವಿಧ ಪಾಕವೈಶಿಷ್ಟ್ಯಗಳಿರಲಿದ್ದು ಕ್ಷಿಣ ಭಾರತದ ವೈವಿಧ್ಯಮಯ  ತಿಂಡಿ ತಿನಿಸುಗಳಿಗೆ ಹೆಚ್ಚಿನ ಪ್ರಾಧಾನ್ಯ ನೀಡಲಾಗುತ್ತಿದೆ.

ತೇಕ್ಕಳಿ ರಸಂ. ಕಡಲೆಕಾಯಿ ಕುರ್ಮಾ, ತಾಜಾ ಮಸಾಲೆ ಸಾಂಬಾರ್, ಹಲ್ವಾ ಸೇರಿದಂತೆ ವಿವಿಧ ಶೈಲಿಯ ತಿನಿಸುಗಳು ಮೆನುವಿನಲ್ಲಿದೆ. ಇದು ದಕ್ಷಿಣ ಭಾರತದ ಪಾಕಶಾಲೆಯ ಸಾಂಪ್ರದಾಯಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುತ್ತದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com