ಕಾಶ್ಮೀರ ವಿಚಾರದಲ್ಲಿ ಪಾಕ್ ಬೆಂಬಲಿಸಿದ ಎರ್ಡೊಗನ್‌, ಟರ್ಕಿ ಪ್ರವಾಸ ರದ್ದುಗೊಳಿಸಿದ ಪ್ರಧಾನಿ ಮೋದಿ

ಟರ್ಕಿ ಅಧ್ಯಕ್ಷ ರಿಸೆಪ್‌ ತಯ್ಯಪಿ ಎರ್ಡೊಗನ್‌ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಬಹಿರಂಗವಾಗಿ ಪ್ರಸ್ತಾಪಿಸಿದ ಮತ್ತು ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ
ರಿಸೆಪ್‌ ತಯ್ಯಪಿ ಎರ್ಡೊಗನ್‌ - ಪ್ರಧಾನಿ ಮೋದಿ
ರಿಸೆಪ್‌ ತಯ್ಯಪಿ ಎರ್ಡೊಗನ್‌ - ಪ್ರಧಾನಿ ಮೋದಿ

ನವದೆಹಲಿ: ಟರ್ಕಿ ಅಧ್ಯಕ್ಷ ರಿಸೆಪ್‌ ತಯ್ಯಪಿ ಎರ್ಡೊಗನ್‌ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕಾಶ್ಮೀರ ವಿಚಾರವನ್ನು ಬಹಿರಂಗವಾಗಿ ಪ್ರಸ್ತಾಪಿಸಿದ ಮತ್ತು ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ತಿಂಗಳಾಂತ್ಯಕ್ಕೆ ನಿಗದಿಯಾಗಿದ್ದ ಎರಡು ದಿನಗಳ ಟರ್ಕಿ ಪ್ರವಾಸವನ್ನು ರದ್ದುಗೊಳಿಸಿದ್ದಾರೆ.

ಪ್ರಧಾನಿ ಮೋದಿ ಅವರು ಅಕ್ಟೋಬರ್ 27 ಮತ್ತು 28ರಂದು ಟರ್ಕಿ ಪ್ರವಾಸ ನಿಗದಿಯಾಗಿತ್ತು. ಮೋದಿ ಅವರು ಸೌದಿಯಿಂದ ಟರ್ಕಿ ರಾಜಧಾನಿ ಅಂಕಾರಾಗೆ ತೆರಳಿ ಮೆಗಾ ಹೂಡಿಕೆ ಸಮಾವೇಶದಲ್ಲಿ ಭಾಗವಹಿಸಬೇಕಿತ್ತು. ಆದರೆ ಪ್ಯಾರಿಸ್ ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಎರ್ಡೊಗನ್‌ ಅವರು ಕಾಶ್ಮೀರ ವಿಚಾರ ಪ್ರಸ್ತಾಪಿಸಿದ್ದಲ್ಲದೆ, ಪಾಕಿಸ್ತಾನವನ್ನು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (ಎಫ್‌ಎಟಿಎಫ್)ನ ಕಪ್ಪುಪಟ್ಟಿಗೆ ಸೇರಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ನಂತರ ಪ್ರಧಾನಿ ಮೋದಿ ತಮ್ಮ ಟರ್ಕಿ ಪ್ರವಾಸ ರದ್ದುಗೊಳಿಸಿದ್ದಾರೆ.

ಮೋದಿ ಅವರು ಟರ್ಕಿ ಪ್ರವಾಸ ರದ್ದುಗೊಳಿಸಿರುವುದರಿಂದ ದೆಹಲಿ ಹಾಗೂ ಅಂಕಾರಾ ನಡುವಿನ ಸಂಬಂಧ ಕುಸಿಯಲಿದೆ. 

ಇನ್ನು ಈ ಕುರಿತು ಯಾವುದೇ ಸ್ಪಷ್ಟ ಉತ್ತರ ನೀಡಲು ನಿರಾಕರಿಸಿರುವ ವಿದೇಶಾಂಗ ಸಚಿವಾಲಯ, ಪ್ರಧಾನಿ ಟರ್ಕಿ ಪ್ರವಾಸ ಇನ್ನೂ ಅಂತಿಮವಾಗಿರಲಿಲ್ಲ. ಹೀಗಾಗಿ ರದ್ದುಗೊಳಿಸುವ ಪ್ರಶ್ನೆಯೇ ಬರುವುದಿಲ್ಲ ಎಂದು ಹೇಳಿದೆ.

ಪ್ರಧಾನಿ ಮೋದಿ ಅವರು 2015ರಲ್ಲಿ ಜಿ20 ಶೃಂಗಸಭೆಯಲ್ಲಿ ಭಾಗವಹಿಸುವುದಕ್ಕಾಗಿ ಟರ್ಕಿ ಪ್ರವಾಸ ಕೈಗೊಂಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com