ನಾವು 50:50 ಸೂತ್ರ ಪಾಲಿಸಿ ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸುತ್ತೇವೆ: ಸಂಜಯ್ ರಾವತ್ 

ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿ ಸರ್ಕಾರ ರಚನೆ ಮಾಡಲಿದ್ದು ಎರಡೂ ಪಕ್ಷಗಳ ನಡುವೆ 50:50 ಸೂತ್ರವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.
ಉದ್ದವ್ ಠಾಕ್ರೆ-ದೇವೇಂದ್ರ ಫಡ್ನವೀಸ್
ಉದ್ದವ್ ಠಾಕ್ರೆ-ದೇವೇಂದ್ರ ಫಡ್ನವೀಸ್

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಒಟ್ಟಾಗಿ ಸರ್ಕಾರ ರಚನೆ ಮಾಡಲಿದ್ದು ಎರಡೂ ಪಕ್ಷಗಳ ನಡುವೆ 50:50 ಸೂತ್ರವನ್ನು ಅಳವಡಿಸಿಕೊಳ್ಳಲಾಗುವುದು ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಹೇಳಿದ್ದಾರೆ.


ಉದ್ದವ್ ಠಾಕ್ರೆಯವರನ್ನು ಇಂದು ಭೇಟಿ ಮಾಡಲಿದ್ದೇನೆ. ನಾವು ಖಂಡಿತವಾಗಿಯೂ ಮೈತ್ರಿ ಮುಂದುವರಿಸಿ ಸರ್ಕಾರ ರಚಿಸುತ್ತೇವೆ ಎಂದರು. ಈ ಬಾರಿ ಮೈತ್ರಿಕೂಟಕ್ಕೆ ಕಳೆದ ವಿಧಾನಸಭೆ ಚುನಾವಣೆಗಿಂತ ಕಡಿಮೆ ಗೆಲುವು ಬಂದಿದೆಯಲ್ಲವೇ ಎಂದು ಕೇಳಿದಾಗ ಈ ಬಾರಿಯ ಫಲಿತಾಂಶ ಅಷ್ಟೇನು ಕೆಟ್ಟದಾಗಿಲ್ಲ. ಆಗಾಗ ಹಾಗೆ ಆಗುತ್ತಿರುತ್ತದೆ ಎಂದರು. 

ಸದ್ಯ ಮಹಾರಾಷ್ಟ್ರದ ಫಲಿತಾಂಶ ನೋಡುವುದಾದರೆ ಬಿಜೆಪಿ ಮತ್ತು ಶಿವಸೇನೆ 165 ಕಾಂಗ್ರೆಸ್ ಮತ್ತು ಎನ್ ಸಿಪಿ 94 ಕ್ಷೇತ್ರಗಳಲ್ಲಿ ಮತ್ತು ಇತರೆ ಪಕ್ಷಗಳು 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com