ಹರ್ಯಾಣದ ನೂತನ ಶಾಸಕರಲ್ಲಿ ಶೇ.93 ರಷ್ಟು ಮಂದಿ ಕೋಟ್ಯಾಧಿಪತಿಗಳು- ಎಡಿಆರ್ ವರದಿ 

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ  90 ಶಾಸಕರ ಪೈಕಿಯಲ್ಲಿ 84 ಮಂದಿ ಕೋಟ್ಯಾಧಿಪತಿಗಳು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ( ಎಡಿಆರ್ ) ವರದಿಯಲ್ಲಿ ಹೇಳಲಾಗಿದೆ.
ದುಷ್ಯಂತ್ ಚೌಟಾಲ ಮತ್ತಿತರ ಶಾಸಕರು
ದುಷ್ಯಂತ್ ಚೌಟಾಲ ಮತ್ತಿತರ ಶಾಸಕರು

ಚಂಡೀಘಡ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಆಯ್ಕೆಯಾಗಿರುವ ನೂತನ  90 ಶಾಸಕರ ಪೈಕಿಯಲ್ಲಿ 84 ಮಂದಿ ಕೋಟ್ಯಾಧಿಪತಿಗಳು ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ( ಎಡಿಆರ್ ) ವರದಿಯಲ್ಲಿ ಹೇಳಲಾಗಿದೆ.

ಇತ್ತೀಚಿಗೆ ಮುಗಿದ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 90 ಶಾಸಕರ ಪೈಕಿ 75 ಶಾಸಕರು 1 ಕೋಟಿಗಿಂತಲೂ ಹೆಚ್ಚಿನ ಮೌಲ್ಯದ ತಮ್ಮ ಆಸ್ತಿಪಾಸ್ತಿಯನ್ನು ಘೋಷಿಸಿಕೊಂಡಿದ್ದು, ಕೋಟ್ಯಾಧಿಪತಿಗಳ ಶಾಸಕರ ಸಂಖ್ಯೆಯಲ್ಲಿ ಶೇಕಡ 10 ರಷ್ಟು ಹೆಚ್ಚಳವಾಗಿದೆ ಎಂದು ಎಡಿಆರ್ ವರದಿಯಲ್ಲಿ ತಿಳಿಸಿದೆ. 

ಎಡಿಆರ್ ವಿಶ್ಲೇಷಣೆ ಪ್ರಕಾರ 40 ಬಿಜೆಪಿ ಶಾಸಕರ ಪೈಕಿ 37 ಹಾಗೂ  31 ಕಾಂಗ್ರೆಸ್ ಶಾಸಕರ ಪೈಕಿಯಲ್ಲಿ 29 ಮಂದಿ ಶಾಸಕರು ಕೋಟ್ಯಾಧಿಪತಿಗಳಾಗಿದ್ದಾರೆ.  ಜೆಜೆಪಿಯ 10 ಶಾಸಕರು 25. 26 ಕೋಟಿ ಮೌಲ್ಯದ ಆಸ್ತಿಪಾಸ್ತಿ ಹೊಂದಿದ್ದಾರೆ. 57 ಶಾಸಕರು 41 ರಿಂದ 50 ವರ್ಷದೊಳಗಿನ ಶಾಸಕರಾಗಿದ್ದರೆ 62 ಶಾಸಕರು ಪದವೀ ಅಥವಾ ಅದಕ್ಕೂ ಮೇಲ್ಪಟ್ಟ ವ್ಯಾಸಂಗ ಮಾಡಿದ್ದಾರೆ.

90 ಶಾಸಕರ ಪೈಕಿ 12 ಮಂದಿ ಶಾಸಕರು ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇವರಲ್ಲಿ ಕಾಂಗ್ರೆಸ್ ಪಕ್ಷದ ನಾಲ್ವರು, ಬಿಜೆಪಿಯ ಇಬ್ಬರು ಹಾಗೂ ಜೆಜೆಪಿಯ ಒಬ್ಬರು ಕ್ರಿಮಿನಲ್ ಕೇಸ್ ಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದಾರೆ ಎಂದು ಎಡಿಆರ್ ವರದಿ ಮಾಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com