ವಾಹನಗಳಿಗೆ ಜಿಎಸ್‏ಟಿ ದರ ಇಳಿಕೆ ನಿರ್ಧಾರ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಬಿಟ್ಟದ್ದು: ಗಡ್ಕರಿ

 ವಾಹನ ಉದ್ಯಮಗಳು ಸಂಕಷ್ಟದಲ್ಲಿರುವ ಈ ಸಮಯದಲ್ಲಿ ವಾಹನಗಳ ಜಿಎಸ್‌ಟಿ ದರವನ್ನು ಕಡಿಮೆ ಮಾಡುವ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಜಿಎಸ್‌ಟಿ ಕೌನ್ಸಿಲ್ ಜೊತೆಗೆ ಹಣಕಾಸು ಸಚಿವಾಲಯ ಚರ್ಚಿಸಬೇಕಿದೆ. ತಾವು ಈಗಾಗಲೇ ಹಣಕಾಸು ಸಚಿವರೊಂದಿಗೆ ಈ ಕುರಿತಂತೆ ಮಾತನಾಡಿದ್ದಾಗಿ  ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

Published: 11th September 2019 06:46 PM  |   Last Updated: 11th September 2019 06:46 PM   |  A+A-


ನಿತಿನ್ ಗಡ್ಕರಿ

Posted By : Raghavendra Adiga
Source : PTI

ನವದೆಹಲಿ: ವಾಹನ ಉದ್ಯಮಗಳು ಸಂಕಷ್ಟದಲ್ಲಿರುವ ಈ ಸಮಯದಲ್ಲಿ ವಾಹನಗಳ ಜಿಎಸ್‌ಟಿ ದರವನ್ನು ಕಡಿಮೆ ಮಾಡುವ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಜಿಎಸ್‌ಟಿ ಕೌನ್ಸಿಲ್ ಜೊತೆಗೆ ಹಣಕಾಸು ಸಚಿವಾಲಯ ಚರ್ಚಿಸಬೇಕಿದೆ. ತಾವು ಈಗಾಗಲೇ ಹಣಕಾಸು ಸಚಿವರೊಂದಿಗೆ ಈ ಕುರಿತಂತೆ ಮಾತನಾಡಿದ್ದಾಗಿ  ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

 ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ಗಡ್ಕರಿ ದ್ವಿಚಕ್ರ ವಾಹನ ಸೇರಿದಂತೆ ಹಳೆ ವಾಹನಗಳನ್ನು ಹೊಸ ವಾಹನಗಳಿಗೆ ಬದಲಿಸಿಕೊಳ್ಳುವ ನೀರ್ತಿಯು ಇದಾಗಲೇ ಚರ್ಚೆಯ ಹಂತದಲ್ಲಿದ್ದು ಶೀಘ್ರವೇ ಜಾರಿಯಾಗಲಿದೆ ಎಂದಿದ್ದಾರೆ.

ಕಳೆದ ವಾರ ಸಿಯಾಮ್ ವಾರ್ಷಿಕ ಸಮಾವೇಶದಲ್ಲಿ ಗಡ್ಕರಿ ವಾಹನಗಳಿಗೆ ಜಿಎಸ್‌ಟಿ ಕಡಿತದ ವಿಷಯವನ್ನು ಪ್ರಸ್ತಾಪಿಸಿ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ 28 ರಿಂದ ಶೇ 18 ಕ್ಕೆಕಡಿತಮಾಡುವುದಕ್ಕೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದ್ದರು.

"ನಾನು ಈಗಾಗಲೇ ಹಣಕಾಸು ಸಚಿವರೊಂದಿಗೆ ಚರ್ಚಿಸಿದ್ದೇನೆ. ಆದರೆ ಅಂತಿಮವಾಗಿ ಹಣಕಾಸು ಸಚಿವಾಲಯ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಅದು ರಾಜ್ಯ ಹಣಕಾಸು ಮಂತ್ರಿಗಳು ಮತ್ತು ಜಿಎಸ್‌ಟಿ ಕೌನ್ಸಿಲ್‌ನ ಸಮಾಲೋಚನೆ ನಡೆಸಬೇಕು." ಎಂದು ಗಡ್ಕರಿ ಹೇಳಿದ್ದಾರೆ. ಅವರು ಹೋಂಡಾ ಮೋಟಾರ್‌ಸೈಕಲ್ ಮತ್ತು ಬಿಎಸ್-VI ಸ್ಕೂಟರ್ ಬಿಡುಗಡೆ ಮಾಡಿ ಮಾತನಾಡುತ್ತಿದ್ದರು.

ಹಳೆ ವಾಹನಗಳನ್ನು ರಸ್ತೆಗಿಳಿಯದಂತೆ ತಡೆದು ಮಾಲಿನ್ಯ ನಿಯಂತ್ರಣ ಮಾಡುವುದಕ್ಕೆ ಮುಂದಾಗಿರುವ ಕೇಂದ್ರ ಸರಾಖ್ರ ದ್ವಿಚಕ್ರ ವಾಹನ ಸೇರಿ ಯಾವ ಹಳೆ ವಾಹನಗಳನ್ನೂ ಹೊಸ ವಾಹನಕ್ಕೆ ಬದಲಿಸುವ ಕ್ರಮವನ್ನು ಜಾರಿಗೆ ತರಲು ಯೋಜಿಸಿದೆ.ಈ ಸಂಬಂಧ ವಿವರೈಸಿದ ಸಚಿವರು ಯೋಜನೆ ಜಾರಿಯ ಕುರಿತಂತೆ ಇನ್ನೂ ವಿವಿಧ ಮಧ್ಯಸ್ಥಗಾರರಿಗೆ ಸಂಬಂಧಿಸಿದ ಸಮಸ್ಯೆ ಇದ್ದು ತಯಾರಕರು ಮತ್ತು ಹಣಕಾಸು ಸಚಿವಾಲಯದ ಸಹಕಾರ ನಮಗೆ ಬೇಕು. ನಾವೀಗಾಗಲೇ ಕರಡು ಪ್ರತಿ ಸಿದ್ದಪಡಿಸಿದ್ದು ಸಚಿವಾಲಯವು ಅದನ್ನು ಆದಷ್ಟು ಬೇಗನೆ ಜಾರಿಗೊಳಿಸಲು ಪ್ರಯತ್ನಿಸುತ್ತಿದೆ ಮತ್ತು ಶೀಘ್ರವಾಗಿ ನಾವಿದನ್ನು ಜಾರಿಮಾಡುತ್ತೇವೆ" ಎಂದಿದ್ದಾರೆ.

ಅಂತಹ ನೀತಿಯು ಹಳೆಯ ದ್ವಿಚಕ್ರ ವಾಹನಗಳನ್ನು ಸಹ ಒಳಗೊಂಡಿರುತ್ತದೆ ಮತ್ತು "ದ್ವಿಚಕ್ರ ವಾಹನ ಉದ್ಯಮವು ಯಾವುದೇ ಸಲಹೆ ಸೂಚನೆ ನೀಡ ಬಯಸಿದಲ್ಲಿ ನಾವದನ್ನು ಮುಕ್ತವಾಗಿ ಕೇಳಲು ಸಿದ್ದರಿದ್ದೇವೆ. " ಎಂದು ಅವರು ಹೇಳಿದರು. ವಾಹನ ಉದ್ಯಮದಲ್ಲಿ ಪ್ರಸ್ತುತ ಇರುವ ತೊಂದರೆಯನ್ನು ಒಪ್ಪಿಕೊಂಡ ಸಚಿವರು, ಬೇಡಿಕೆ ಮತ್ತು ಪೂರೈಕೆ ಸಮಸ್ಯೆಗಳು, ಜಾಗತಿಕ ಆರ್ಥಿಕ ಕುಸಿತ ಅಥವಾ ವ್ಯಾಪಾರ  ಸಮಸ್ಯೆಯಿಂದಾಗಿ ಉಂಟಾಗಿದೆ.ಇದು ಅಲ್ಪಕಾಲದ್ದಾಗಿರಲಿದೆ. . ಆದಾಗ್ಯೂ, ಐದರಿಂದ ಆರು ವರ್ಷಗಳಲ್ಲಿ ಭಾರತವು ವಾಹನಗಳ ಜಾಗತಿಕ ಉತ್ಪಾದನಾ ಕೇಂದ್ರವಾಗಲಿದೆ ಎಂಬ ವಿಶ್ವಾಸವನ್ನು ಅವರು ಹೊಂದಿದ್ದಾರೆ. 

Stay up to date on all the latest ರಾಷ್ಟ್ರೀಯ news with The Kannadaprabha App. Download now
facebook twitter whatsapp