ಐನ್ಸ್ಟೈನ್ ಗುರುತ್ವಾಕರ್ಷಣೆ ಮತ್ತು ಗಣಿತ: ಪಿಯುಶ್ ಗೋಯಲ್ ಸಿದ್ಧಾಂತಕ್ಕೆ ಭಾರೀ ಟ್ವೀಟಾರತಿ!

ಒಂದಕ್ಕೊಂದು ಸಂಬಂಧವಿಲ್ಲದ ವಿಷಯಗಳನ್ನು ಹೊಂದಾಣಿಕೆ ಮಾಡಿ ಮಾತನಾಡಿದಕೆ ಏನಾಗುತ್ತದೆ, ಎಡವಟ್ಟಾಗುತ್ತದೆ. ಇಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಗೆ ಆಗಿದ್ದು ಕೂಡ ಅದೇ.
ಪಿಯೂಷ್ ಗೋಯಲ್
ಪಿಯೂಷ್ ಗೋಯಲ್

ನವದೆಹಲಿ: ಒಂದಕ್ಕೊಂದು ಸಂಬಂಧವಿಲ್ಲದ ವಿಷಯಗಳನ್ನು ಹೊಂದಾಣಿಕೆ ಮಾಡಿ ಮಾತನಾಡಿದಕೆ ಏನಾಗುತ್ತದೆ, ಎಡವಟ್ಟಾಗುತ್ತದೆ. ಇಂದು ಕೇಂದ್ರ ಸಚಿವ ಪಿಯೂಷ್ ಗೋಯಲ್ ಗೆ ಆಗಿದ್ದು ಕೂಡ ಅದೇ.


ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ)ದ ಲೆಕ್ಕಾಚಾರದಲ್ಲಿ ಖ್ಯಾತ ವಿಜ್ಞಾನಿ ಐನ್ಸ್ಟೈನ್ ಗೆ ಗುರುತ್ವಾಕರ್ಷಣೆಯನ್ನು ಕಂಡುಹಿಡಿಯಲು ಗಣಿತ ಎಂದಿಗೂ ಸಹಾಯ ಮಾಡಲಿಲ್ಲ ಎಂದು ಹೇಳುವ ಮೂಲಕ ಕೇಂದ್ರ ವಾಣಿಜ್ಯ ಖಾತೆ ಸಚಿವ ಪಿಯೂಷ್ ಗೋಯಲ್ ನೆಟ್ಟಿಗರ ಟೀಕೆಗೆ ಆಹಾರವಾಗಿದ್ದಾರೆ. 


ಸಚಿವ ಪಿಯೂಷ್ ಗೋಯಲ್ ಇಂದು ದೆಹಲಿಯಲ್ಲಿ ವ್ಯಾಪಾರ ಮಂಡಳಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಧಾನ ಮಂತ್ರಿಯವರು, 2024-2025ಕ್ಕೆ ದೇಶದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ನಷ್ಟು ಏರಿಕೆಯಾಗಬೇಕೆಂದು ಪ್ರಧಾನಿ ಮೋದಿಯವರು ಇಟ್ಟುಕೊಂಡಿರುವ ಗುರಿಯ ಬಗ್ಗೆ ಜನರು ಟಿವಿ ವಾಹಿನಿಗಳನ್ನು ನೋಡಿಕೊಂಡು ಲೆಕ್ಕಾಚಾರ ಹಾಕಬಾರದು ಎಂದರು.


ದೇಶದ ಆರ್ಥಿಕತೆ 5 ಟ್ರಿಲಿಯನ್ ಡಾಲರ್ ಗೆ ಏರಿಕೆಯಾಗಬೇಕೆಂದರೆ ಜಿಡಿಪಿ ಶೇಕಡಾ 12ಕ್ಕೆ ಏರಿಕೆಯಾಗಬೇಕೆಂದು ಸುದ್ದಿವಾಹಿನಿಗಳಲ್ಲಿ ಚರ್ಚೆ ನಡೆಯುತ್ತಿರುತ್ತದೆ. ಇಂದು ದೇಶದ ಆರ್ಥಿಕತೆ ಶೇಕಡಾ 6ರಷ್ಟಿದೆ ಎನ್ನುತ್ತಾರೆ. ಈ ಲೆಕ್ಕಾಚಾರಗಳನ್ನು ನೀವು ಗಂಭೀರವಾಗಿ ತೆಗೆದುಕೊಳ್ಳಬೇಡಿ. ಗಣಿತದಿಂದ ಐನ್ ಸ್ಚೈನ್ ಗೆ ಸಹ ಗುರುತ್ವಾಕರ್ಷಣ ಶಕ್ತಿ ಕಂಡು ಹಿಡಿಯಲು ಸಾಧ್ಯವಾಗಲಿಲ್ಲ ಎಂದರು.


ಅವರು(ಐನ್ ಸ್ಟೈನ್) ರಚನಾತ್ಮಕ ಸೂತ್ರಗಳ ಮೂಲಕ ಮತ್ತು ಹಿಂದಿನ ಜ್ಞಾನದ ಮೂಲಕ ಮಾತ್ರ ಸಂಶೋಧನೆ ನಡೆಸಿದ್ದರೆ ಜಗತ್ತಿನಲ್ಲಿ ಯಾವುದೇ ಆವಿಷ್ಕಾರಗಳು ಇಂದು ನಡೆಯುತ್ತಿರಲಿಲ್ಲ ಎಂಬುದು ನನ್ನ ಭಾವನೆ ಎಂದು ಅವರು ಹೇಳಿದರು.
ಅವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಕೆಲವೇ ಗಂಟೆಗಳಲ್ಲಿ ವೈರಲ್ ಆಗಿದೆ. ಟ್ವೀಟಿಗರು ಸಚಿವ ಪಿಯೂಷ್ ಗೋಯಲ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಐನ್ ಸ್ಟೈನ್ ಗುರುತ್ವಾಕರ್ಷಣ ಶಕ್ತಿಯನ್ನು ಕಂಡುಹಿಡಿದರು. ಪಿಯೂಷ್ ಗೋಯಲ್ ಅವರ ಪ್ರಕಾರ ವಿಜ್ಞಾನ ಮತ್ತು ಇತಿಹಾಸ ವಿಷಯಗಳು ಒಂದೇ ಎಂದ ಹಾಗಾಯಿತು ಎಂದು ಒಬ್ಬರು ಹಾಸ್ಯ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com