ಕೇವಲ ಮನೆ ದೀಪಗಳನ್ನು ಆರಿಸಿ, ಫ್ಯಾನ್, ಎಸಿ, ಕಂಪ್ಯೂಟರ್ ಗಳನ್ನು ಆರಿಸುವುದು ಬೇಡ: ಕೇಂದ್ರ ಸರ್ಕಾರ

ಪ್ರಧಾನಿ ನರೇಂದ್ರ ಮೋದಿ ಅವರ ಮನವಿ ಹಿನ್ನೆಲೆಯಲ್ಲಿ ಏಪ್ರಿಲ್ 5ರಂದು ಭಾನುವಾರ ರಾತ್ರಿ 9 ಗಂಟೆಯಿಂದ 9: 09ರ ನಡುವೆ ಕೇವಲ ಮನೆಯ ದೀಪಗಳನ್ನು ಆರಿಸಿ, ಬೀದಿ ದೀಪಗಳು, ಕಂಪ್ಯೂಟರ್, ಟಿವಿ, ಫ್ಯಾನ್, ರೆಫ್ರಿಜಿರೇಟರ್, ಮನೆಯಲ್ಲಿನ ಎಸಿಗಳನ್ನು ಆರಿಸಬಾರದೆಂದು ಇಂಧನ ಸಚಿವಾಲಯ  ಸ್ಪಷ್ಟಪಡಿಸಿದೆ.   
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ
Updated on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮನವಿ ಹಿನ್ನೆಲೆಯಲ್ಲಿ ಏಪ್ರಿಲ್ 5ರಂದು ಭಾನುವಾರ ರಾತ್ರಿ 9 ಗಂಟೆಯಿಂದ 9: 09ರ ನಡುವೆ ಕೇವಲ ಮನೆಯ ದೀಪಗಳನ್ನು ಆರಿಸಿ, ಬೀದಿ ದೀಪಗಳು, ಕಂಪ್ಯೂಟರ್, ಟಿವಿ, ಫ್ಯಾನ್, ರೆಫ್ರಿಜಿರೇಟರ್, ಮನೆಯಲ್ಲಿನ ಎಸಿಗಳನ್ನು ಆರಿಸಬಾರದೆಂದು ಇಂಧನ ಸಚಿವಾಲಯ  ಸ್ಪಷ್ಟಪಡಿಸಿದೆ.   

ಆಸ್ಪತ್ರೆಗಳು ಮತ್ತು ಸಾರ್ವಜನಿಕ ಉಪಯೋಗದಂತಹ ಇನ್ನಿತರ ಅತ್ಯಾವಶ್ಯಕ ಸೇವೆಗಳು, ಮುನ್ಸಿಪಲ್ ಸೇವೆಗಳು, ಕಚೇರಿಗಳು, ಪೊಲೀಸ್ ಠಾಣೆಗಳು, ಉತ್ಪಾದನಾ ಸೌಲಭ್ಯಗಳು ಮತ್ತಿತರ ಕಡೆಗಳಲ್ಲಿ ದೀಪಗಳನ್ನು ಆರಿಸದಂತೆ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 

ಮನೆಗಳಲ್ಲಿನ ದೀಪಗಳನ್ನು ಮಾತ್ರ ಆರಿಸುವಂತೆ ಕರೆ ನೀಡಲಾಗಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಬೀದಿ  ದೀಪಗಳನ್ನು ಆರಿಸದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಿಗೆ ಸಲಹೆ ನೀಡಲಾಗಿದೆ. 

ಕೊರೋನಾವೈರಸ್ ವಿರುದ್ಧದ ಹೋರಾಟಕ್ಕಾಗಿ ದೇಶವಾಸಿಗಳು ಏಪ್ರಿಲ್ 5 ರಂದು ರಾತ್ರಿ 9 ಗಂಟೆಯಿಂದ 9-09ರವರೆಗೂ ಮನೆಯಲ್ಲಿನ ದೀಪಗಳನ್ನು ಆರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ ಮೂರರಂದು ವಿಡಿಯೋ ಸಂದೇಶದ ಮೂಲಕ ಮನವಿ ಮಾಡಿಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com