ಲಾಕ್ ಡೌನ್ ನಡುವೆ ಡಿಎಚ್ ಎಲ್ ಎಫ್ ಪ್ರವರ್ತಕರಿಗೆ ಪ್ರಯಾಣಕ್ಕೆ ಅನುಮತಿ: ಪ್ರಧಾನ ಕಾರ್ಯದರ್ಶಿಗೆ ರಜೆಯ ಸಜೆ

ಲಾಕ್ ಡೌನ್ ನಡುವೆಯೂ ಡಿಎಚ್ ಎಲ್ ಎಫ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವದವಾನ್ ಅವರನ್ನು ಪ್ರಯಾಣಿಸಲು ಅನುವು ಮಾಡಿಕೊಟ್ಟದ್ದಕ್ಕೆ ಮಹಾರಾಷ್ಟ್ರ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದೆ.
ಲಾಕ್ ಡೌನ್ ನಡುವೆ ಡಿಎಚ್ ಎಲ್ ಎಫ್ ಪ್ರವರ್ತಕರಿಗೆ ಪ್ರಯಾಣಕ್ಕೆ ಅನುಮತಿ: ಪ್ರಧಾನ ಕಾರ್ಯದರ್ಶಿಗೆ ರಜೆಯ ಸಜೆ

ಮುಂಬೈ:ಲಾಕ್ ಡೌನ್ ನಡುವೆಯೂ ಡಿಎಚ್ ಎಲ್ ಎಫ್ ಪ್ರವರ್ತಕರಾದ ಕಪಿಲ್ ಮತ್ತು ಧೀರಜ್ ವದವಾನ್ ಅವರಿಗೆ ಪ್ರಯಾಣಿಸಲು ಅನುವು ಮಾಡಿಕೊಟ್ಟದ್ದಕ್ಕೆ ಮಹಾರಾಷ್ಟ್ರ ಸರ್ಕಾರ ಹಿರಿಯ ಐಎಎಸ್ ಅಧಿಕಾರಿಯನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿದೆ.

ಕೌಟುಂಬಿಕ ತುರ್ತು ಕೆಲಸವಿದೆ ಎಂದು ಹೇಳಿ ವದವಾನ್ ಉದ್ಯಮಿಗಳು ಲಾಕ್ ಡೌನ್ ನಿಯಮಗಳನ್ನು ಮೀರಿ ವಿನಾಯ್ತಿ ನೀಡಿ ಅಧಿಕಾರಿ ಪ್ರಯಾಣ ಮಾಡಲು ಅವಕಾಶ ಕೊಟ್ಟಿದ್ದರು.

ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ ತನಿಖೆ ಮುಗಿಯುವವರೆಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಮಿತಾಬ್ ಗುಪ್ತ ಅವರನ್ನು ತಕ್ಷಣವೇ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಅವರ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅನಿಲ್ ದೇಶ್ ಮುಖ್ ತಿಳಿಸಿದ್ದಾರೆ.

ಲಾಕ್ ಡೌನ್ ಮಧ್ಯೆ ನಿಷೇಧಾಜ್ಞೆ ಉಲ್ಲಂಘಿಸಿದ್ದರಿಂದ ವದವಾನ್ ಸೋದರರನ್ನು ಮಹಾರಾಷ್ಟ್ರದ ಸತಾರಾ ಜಿಲ್ಲೆಯ ಮಹಾಬಲೇಶ್ವರದಲ್ಲಿ ನಿನ್ನೆ ಪೊಲೀಸರು ಬಂಧಿಸಿದ್ದರು. ವದವಾನ್ ಕುಟುಂಬ ಸದಸ್ಯರು ಸೇರಿದಂತೆ 23 ಮಂದಿ ಅವರ ಫಾರ್ಮ್ ಹೌಸ್ ನಲ್ಲಿ ಸೇರಿದ್ದರು ಎಂದು ಪೊಲೀಸರು ತಿಳಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com