ಕರ್ತವ್ಯಕ್ಕೆ ಹಾಜರಾಗಲು 450 ಕಿ.ಮೀ ನಡೆದು ಕ್ರಮಿಸಿದ ಪೊಲೀಸ್ ಪೇದೆ!

ಕೊರೋನಾ ವೈರಸ್ ನಿಂದ ದೇಶಾದ್ಯಂತ ಲಾಕ್ ಡೌನ್ ಇದ್ದು, ಅನೇಕ ಅಧಿಕಾರಿಗಳು, ಸಾರ್ವಜನಿಕ ಕ್ಷೇತ್ರದಲ್ಲಿರುವವರು ತಮ್ಮ ಕರ್ತವ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ. ಅಂತೆಯೇ ಪೊಲೀಸ್ ಪೇದೆಯೊಬ್ಬರು ಕರ್ತವ್ಯಕ್ಕೆ ಹಾಜರಾಗಲು ಕಾನ್ಪುರದಿಂದ ಜಬಲ್ಪುರಕ್ಕೆ 450 ಕಿ.ಮೀ ನಡೆದುಬಂದಿದ್ದಾರೆ. 
ಕರ್ತವ್ಯಕ್ಕೆ ಹಾಜರಾಗಲು 450 ಕಿ.ಮೀ ನಡೆದು ಕ್ರಮಿಸಿದ ಪೊಲೀಸ್ ಪೇದೆ!
ಕರ್ತವ್ಯಕ್ಕೆ ಹಾಜರಾಗಲು 450 ಕಿ.ಮೀ ನಡೆದು ಕ್ರಮಿಸಿದ ಪೊಲೀಸ್ ಪೇದೆ!

ಜಬಲ್ಪುರ: ಕೊರೋನಾ ವೈರಸ್ ನಿಂದ ದೇಶಾದ್ಯಂತ ಲಾಕ್ ಡೌನ್ ಇದ್ದು, ಅನೇಕ ಅಧಿಕಾರಿಗಳು, ಸಾರ್ವಜನಿಕ ಕ್ಷೇತ್ರದಲ್ಲಿರುವವರು ತಮ್ಮ ಕರ್ತವ್ಯಕ್ಕೆ ಆದ್ಯತೆ ನೀಡುತ್ತಿದ್ದಾರೆ. ಅಂತೆಯೇ ಪೊಲೀಸ್ ಪೇದೆಯೊಬ್ಬರು ಕರ್ತವ್ಯಕ್ಕೆ ಹಾಜರಾಗಲು ಕಾನ್ಪುರದಿಂದ ಜಬಲ್ಪುರಕ್ಕೆ 450 ಕಿ.ಮೀ ನಡೆದುಬಂದಿದ್ದಾರೆ. 

ಕಾನ್ಪುರದ ಭೌಟಿ ಪ್ರದೇಶದ ನಿವಾಸಿಯಾಗಿರುವ ಪೊಲೀಸ್ ಪೇದೆ ಆನಂದ್ ಪಾಂಡೆ ಜಬಲ್ ಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಮ್ಮ ಪತ್ನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಫೆ.20 ರಿಂದ ರಜೆಯಲ್ಲಿದ್ದರು. ಲಾಕ್ ಡೌನ್ ಪರಿಣಾಮ ಕಾನ್ಪುರದಲ್ಲೇ ಸಿಲುಕಿಕೊಂಡರು. ಆದರೆ ಕರ್ತವ್ಯಕ್ಕೆ ಹಾಜರಾಗಲು ದೃಢ ನಿರ್ಧಾರ ಮಾಡಿದ ಅವರು, ಕಾನ್ಪುರದಿಂದ ಮಾ.30 ರಂದು ಕಾಲ್ನಡಿಗೆಯಲ್ಲೇ ಜಬಲ್ಪುರಕ್ಕೆ ಪ್ರಯಾಣ ಪ್ರಾರಂಭಿಸುತ್ತಾರೆ. ಈ ಹಂತದಲ್ಲಿ ವಾಹನದಲ್ಲಿ ತೆರಳುತ್ತಿದ್ದ ದಾರಿ ಹೋಕರು ಒಂದಷ್ಟು ಜನ ಅವರಿಗೆ  

ಮೂರು ದಿನಗಳ ಕಾಲ್ನಡಿಗೆಯಲ್ಲಿ ಕಾನ್ಪುರದಿಂದ ಜಬಲ್ಪುರಕ್ಕೆ ತಲುಪಿರುವ ಆನಂದ್ ಪಾಂಡೆ ಅವರ ನಡೆಗೆ ಅವರ ಹಿರಿಯ ಅಧಿಕಾರಿಗಳಾದ ಇನ್ಸ್ ಪೆಕ್ಟರ್ ಎಸ್ ಪಿಎಸ್ ಬಘೇಲ್ ಹಾಗೂ ಸಿಬ್ಬಂದಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಲಾಕ್ ಡೌನ್ ಕರ್ಫ್ಯು ನಡುವೆ ಜಬಲ್ಪುರದ ಘಂಟಾಘರ್ ಚೌಕ್ ನಲ್ಲಿ ಪಾಂಡೆ ಕಾರ್ಯನಿರ್ವಹಿಸುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com