ಮಾಸ್ಕ್ ಮೇಲಲ್ಲ ದೇವರ ಮೇಲೆ ನಂಬಿಕೆ ಇಡಿ ಎಂದಿದ್ದ ಟಿಕ್-ಟಾಕ್ ಸ್ಟಾರ್ ಈಗ ಕೊರೋನಾ ವೈರಸ್ ಐಸೋಲೇಷನ್ ವಾರ್ಡ್ ನಲ್ಲಿ! 

ಕೊರೋನಾ ವೈರಸ್ ನ್ನು ಹಗುರವಾಗಿ ಪರಿಗಣಿಸಿ ನಿರ್ಲಕ್ಷ್ಯ ತೋರಬೇಡಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ ಎಂಬ ಸತತ ಎಚ್ಚರಿಕೆಯ ನಡಿವೆಯೂ ಕೆಲವು ಮಂದಿ ಹಾಸ್ಯ ಮಾಡಿದ್ದರು. ಈಗ ಅದರ ಪರಿಣಾಮ ಎದುರಿಸುತ್ತಿದ್ದಾರೆ. 
ಟಿಕ್-ಟಾಕ್ ಸ್ಟಾರ್ ಈಗ ಕೊರೋನಾ ವೈರಸ್ ಐಸೋಲೇಷನ್ ವಾರ್ಡ್ ನಲ್ಲಿ!
ಟಿಕ್-ಟಾಕ್ ಸ್ಟಾರ್ ಈಗ ಕೊರೋನಾ ವೈರಸ್ ಐಸೋಲೇಷನ್ ವಾರ್ಡ್ ನಲ್ಲಿ!

ಸಾಗರ್: ಕೊರೋನಾ ವೈರಸ್ ನ್ನು ಹಗುರವಾಗಿ ಪರಿಗಣಿಸಿ ನಿರ್ಲಕ್ಷ್ಯ ತೋರಬೇಡಿ, ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಿ ಎಂಬ ಸತತ ಎಚ್ಚರಿಕೆಯ ನಡಿವೆಯೂ ಕೆಲವು ಮಂದಿ ಹಾಸ್ಯ ಮಾಡಿದ್ದರು. ಈಗ ಅದರ ಪರಿಣಾಮ ಎದುರಿಸುತ್ತಿದ್ದಾರೆ. 

ಮಧ್ಯಪ್ರದೇಶದ ಸಾಗರ್ ನ ಟಿಕ್ ಟಾಕ್ ಸ್ಟಾರ್ ಓರ್ವ ಮಾಸ್ಕ್ ಧರಿಸುವುದನ್ನು ಅವಹೇಳನ ಮಾಡಿ, ದೇವರ ಮೇಲೆ ನಂಬಿಕೆ ಇಡಿ ಮಾಸ್ಕ್ ಮೇಲೆ ಅಲ್ಲ ಎಂದು ಹೇಳಿದ್ದ, ಈಗ ಅದೇ ವ್ಯಕ್ತಿಗೆ ಕೊರೋನಾ ವೈರಸ್ ಸೋಂಕು ತಗುಲಿದೆ. 

ಕೊರೋನಾ ವೈರಸ್ ತಗುಲಿರುವ ಈ 25 ವರ್ಷದ ಯುವಕನನ್ನು ಈಗ ಬುಂದೇಲ್ ಖಂಡ್ ನ ಐಸೊಲೇಷನ್ ವಾರ್ಡ್ ನಲ್ಲಿರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 

ಟಿಕ್ ಟಾಕ್ ನಲ್ಲಿ ಮಾಸ್ಕ್ ಧರಿಸುವಂತೆ ಸಲಹೆ ನೀಡಿದ್ದ ವ್ಯಕ್ತಿಗೆ "ದೇವರ ಮೇಲೆ ನಂಬಿಕೆ ಇಡಿ, ತುಂಡು ಬಟ್ಟೆಯ ಮೆಲೆ ಅಲ್ಲ, ಎಂದು ಹೇಳಿ ಮಾಸ್ಕ್ ಧರಿಸುವುದನ್ನು ಅವಹೇಳನ ಮಾಡಿದ್ದ. ಇದಾದ ಬಳಿಕ ಜಬಲ್ಪುರದಲ್ಲಿರುವ ಆತನ ಸಹೋದರಿಯ ಮನೆಗೆ ತೆರಳಿದ್ದ, ಈ ವೇಳೆ ಆತನಿಗೆ ಕೊರೋನಾ ರೋಗ ಲಕ್ಷಣಗಳು ಕಾಣಿಸಿಕೊಂಡಿದೆ. ಪರೀಕ್ಷೆ ನಡೆಸಿದಾಗ ಕೊರೋನಾ ಸೋಂಕು ದೃಢಪಟ್ಟಿದ್ದು ಐಸೊಲೇಷನ್ ವಾರ್ಡ್ ಗೆ ಸ್ಥಳಾಂತರಿಸಲಾಗಿದೆ. 

ಈಗ ವಾರ್ಡ್ ನಿಂದಲೇ ಮತ್ತಷ್ಟು ವಿಡಿಯೋಗಳನ್ನು ಅಪ್ ಲೋಡ್ ಮಾಡಿರುವ ಈ ವ್ಯಕ್ತಿ, ನನಗೆ ಕೊರೋನಾ ಸೋಂಕು ದೃಢಪಟ್ಟಿದ್ದು, ಕೆಲವು ದಿನಗಳು ವಿಡಿಯೋ ಅಪ್ ಲೋಡ್ ಮಾಡಲು ಸಾಧ್ಯವಾಗುವುದಿಲ್ಲ. ದಯವಿಟ್ಟು ನನ್ನನ್ನು ಬೆಂಬಲಿಸುವುದನ್ನು ಮುಂದುವರೆಸಿ, ಪ್ರಾರ್ಥಿಸಿ ಎಂದು ಹೇಳಿದ್ದಾನೆ. ಇದಾದ ಬಳಿಕ ಪೊಲೀಸರು ಆತನ   ಮೊಬೈಲ್ ನ್ನು ಕಿತ್ತಿಟ್ಟುಕೊಂಡಿದ್ದಾರೆ. ಸಾಗರ್ ಜಿಲ್ಲೆಯಲ್ಲಿ ಬೆಳಕಿಗೆ ಬಂದ ಮೊದಲ ಕೊರೋನಾ ಪ್ರಕರಣ ಇದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com