ದೇಶ
ಕೋವಿಡ್ -19; ಕೇಂದ್ರದಿಂದ ವಿದೇಶಿಗರ ವೀಸಾ, ಇ-ವೀಸಾಗಳ ಅವಧಿ ವಿಸ್ತರಣೆ
ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಭಾರತದಲ್ಲಿ ಸಿಲುಕಿರುವ ವಿದೇಶಿ ಪ್ರಜೆಗಳ ನಿಯಮಿತ ವೀಸಾ ಮತ್ತು ಇ-ವೀಸಾಗಳನ್ನು ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ನವದೆಹಲಿ: ಕೊರೋನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಭಾರತದಲ್ಲಿ ಸಿಲುಕಿರುವ ವಿದೇಶಿ ಪ್ರಜೆಗಳ ನಿಯಮಿತ ವೀಸಾ ಮತ್ತು ಇ-ವೀಸಾಗಳನ್ನು ವಿಸ್ತರಿಸುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
ಮಾ. 24ರಂದು ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಅನೇಕ ವಿದೇಶಿ ಪ್ರರಜೆಗಳು ದೇಶದೊಳಗೆಯೇ ಸಿಲುಕಿದ್ದರು.
ದೇಶದಲ್ಲಿ ವಿಧಿಸಿರುವ ಅಂತಾರಾಷ್ಟ್ರೀಯ ಪ್ರಯಾಣ ನಿರ್ಬಂಧದ ಹಿನ್ನೆಲೆಯಲ್ಲಿ ವಿದೇಶಿ ಪ್ರಜೆಗಳ ನಿಯಮಿತ ವೀಸಾ ಮತ್ತು ಇ-ವೀಸಾ ಅನ್ನು ಮುಂದುವರಿಸಲಾಗುವುದು. ಇದು ಫೆ. 1ರ ನಂತರ ಅವಧಿ ಮುಗಿಯುವ ವೀಸಾಗಳ ಅವಧಿಯನ್ನು ಏ. 30ರವರೆಗೆ ಮುಂದುವರಿಸಲಾಗುವುದು ಎಂದು ಗೃಹ ಸಚಿವಾಲಯ ತಿಳಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ