ಡಾ. ಬಿಆರ್ ಅಂಬೇಡ್ಕರ್ ಜಯಂತಿ: ಪ್ರಧಾನಿ, ಸಿಎಂ ಸೇರಿ ಗಣ್ಯರಿಂದ ಸ್ಮರಣೆ

ದೇಶಾದ್ಯಂತ ಮಂಗಳವಾರ ಸಂವಿಧಾನ ಕತೃ ಡಾ ಬಿ ಆರ್ ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಜೀವನ, ಸಾಧನೆಗಳು, ಸಂವಿಧಾನ, ದೇಶಕ್ಕಾಗಿ ಮಾಡಿರುವ ಕೆಲಸಗಳನ್ನು ಜನರು, ರಾಜಕೀಯ ಮುಖಂಡರು ಸ್ಮರಿಸುತ್ತಿದ್ದಾರೆ.
ಡಾ. ಬಿಆರ್ ಅಂಬೇಡ್ಕರ್ ಜಯಂತಿ: ಪ್ರಧಾನಿ, ಸಿಎಂ ಸೇರಿ ಗಣ್ಯರಿಂದ ಸ್ಮರಣೆ

ನವದೆಹಲಿ:ದೇಶಾದ್ಯಂತ ಮಂಗಳವಾರ ಸಂವಿಧಾನ ಕತೃ ಡಾ ಬಿ ಆರ್ ಅಂಬೇಡ್ಕರ್ ಅವರ 129ನೇ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಂಬೇಡ್ಕರ್ ಅವರ ಜೀವನ, ಸಾಧನೆಗಳು, ಸಂವಿಧಾನ, ದೇಶಕ್ಕಾಗಿ ಮಾಡಿರುವ ಕೆಲಸಗಳನ್ನು ಜನರು, ರಾಜಕೀಯ ಮುಖಂಡರು ಸ್ಮರಿಸುತ್ತಿದ್ದಾರೆ.

ಪ್ರಧಾನ ಮಂತ್ರಿ ಇಂದು ದೇಶವನ್ನುದ್ದೇಶಿಸಿ ಮಾತನಾಡುವಾಗ ಆರಂಭದಲ್ಲಿಯೇ ಡಾ ಬಿ ಆರ್ ಅಂಬೇಡ್ಕರ್ ಅವರನ್ನು ಸ್ಮರಿಸಿದರು. ಅಂಬೇಡ್ಕರ್ ಅವರ ಜಯಂತಿ ಅಂಗವಾಗಿ ಎಲ್ಲಾ ದೇಶವಾಸಿಗಳ ಪರವಾಗಿ ಶ್ರದ್ಧಾಂಜಲಿ ಎಂದಿದ್ದಾರೆ. ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಡಿದ, ಸಂವಿಧಾನದ ಮೂಲಕ ಪ್ರಜಾಪ್ರಭುತ್ವಕ್ಕೆ ಮೂರ್ತ ರೂಪ ನೀಡಿದ ಭಾರತ ರತ್ನ, ದಿವಂಗತ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮದಿನದಂದು ಆ ಮಹಾ ಮೇರುವಿಗೆ ನಮನಗಳು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಡಾ.ಬಾಬಾಸಾಹೇಬ್ ಅಂಬೇಡ್ಕರ್ ಚಿಂತನೆಗಳು ಮಾತ್ರ ಕತ್ತಲು ಕವಿದಂತಿರುವ ಇಂದಿನ ಭಾರತವನ್ನು ಸಮಾನತೆ, ಸೌಹಾರ್ದತೆ ಮತ್ತು ಸಮೃದ್ದಿಯ ಬೆಳಕಿನೆಡೆಗೆ ಕೊಂಡೊಯ್ಯಲು ಸಾಧ್ಯ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com