ಮೇ 03 ರವರೆಗೆ ರೈಲು ಸೇವೆಗಳಿಲ್ಲ: ಮುಂದಿನ ಆದೇಶದವರೆಗೆ ಟಿಕೆಟ್ ಬುಕಿಂಗ್ ಬಂದ್! 

ಪ್ರಧಾನಿ ನರೇಂದ್ರ ಮೋದಿ ಮೇ 03 ವರೆಗೆ ಲಾಕ್ ಡೌನ್ ನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಈ ಅವಧಿಯ ವರೆಗೆ ಎಲ್ಲಾ ರೈಲು ಸೇವೆಗಳನ್ನು ರದ್ದುಗೊಳಿಸಿರುವುದಷ್ಟೇ ಅಲ್ಲದೇ ಟಿಕೆಟ್ ಬುಕಿಂಗ್ ನ್ನೂ ಬಂದ್ ಮಾಡಿದೆ. 
ಮೇ.03 ವರೆಗೆ ರೈಲು ಸೇವೆಗಳಿಲ್ಲ: ಮುಂದಿನ ಆದೇಶದವರೆಗೆ ಟಿಕೆಟ್ ಬುಕಿಂಗ್ ಬಂದ್!
ಮೇ.03 ವರೆಗೆ ರೈಲು ಸೇವೆಗಳಿಲ್ಲ: ಮುಂದಿನ ಆದೇಶದವರೆಗೆ ಟಿಕೆಟ್ ಬುಕಿಂಗ್ ಬಂದ್!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಮೇ 03 ವರೆಗೆ ಲಾಕ್ ಡೌನ್ ನ್ನು ವಿಸ್ತರಿಸಿರುವ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆ ಈ ಅವಧಿಯ ವರೆಗೆ ಎಲ್ಲಾ ರೈಲು ಸೇವೆಗಳನ್ನು ರದ್ದುಗೊಳಿಸಿರುವುದಷ್ಟೇ ಅಲ್ಲದೇ ಟಿಕೆಟ್ ಬುಕಿಂಗ್ ನ್ನೂ ಬಂದ್ ಮಾಡಿದೆ. 

ರೈಲ್ವೆ ಸಚಿವಾಲಯ ಪ್ರಯಾಣಿಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದು, ಪ್ರೀಮಿಯಂ ರೈಲು, ಎಕ್ಸ್ ಪ್ರೆಸ್ ಟ್ರೈನ್ ಗಳು, ಪ್ಯಾಸೆಂಜರ್ ರೈಲುಗಳು, ಸಬರ್ಬನ್ ರೈಲು, ಕೋಲ್ಕತ್ತಾ ಮೆಟ್ರೋ ರೈಲು, ಕೊಂಕಣ ರೈಲ್ವೆ ಸೇರಿದಂತೆ ಹಲವು ರೈಲುಗಳನ್ನು ಮೇ 03 ರ ವರೆಗೆ ರದ್ದುಗೊಳಿಸಲಾಗಿದೆ. 

ಎಲ್ಲಾ ಟಿಕೆಟ್ ಬುಕಿಂಗ್ ನ್ನೂ ಬಂದ್ ಮಾಡಲಾಗಿದೆ. ಇ-ಟಿಕೆಟ್ ಗಳು, ಟಿಕೆಟ್ ಕಾಯ್ದಿರಿಸುವುದನ್ನು ಮುಂದಿನ ಆದೇಶದವರೆಗೆ ತಡೆಹಿಡಿಯಲಾಗಿದೆ. ಆನ್ ಲೈನ್ ಟಿಕೆಟ್ ರದ್ದತಿ ಸೌಲಭ್ಯ ಯಥಾಸ್ಥಿತಿಯಲ್ಲಿ ಕಾರ್ಯನಿರ್ವಹಿಸಲಿದೆ. 

ಜೂ.21 ವರೆಗೆ ಕಾಯ್ದಿರಿಸಲಾಗಿದ್ದ ಟಿಕೆಟ್ ಗಳ ರದ್ದತಿಯ ಮರುಪಾವತಿಯನ್ನು ಪ್ರಯಾಣಿಕರು ಪಡೆಯಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com