ತಬ್ಲೀಘಿಗಳು
ದೇಶ
ತಬ್ಲೀಘಿ ಜಮಾತ್ ನಲ್ಲಿ ಭಾಗಿಯಾಗಿದ್ದ 46 ವಿದೇಶಿಗರು ಜೈಲಿಗೆ!
ದೆಹಲಿಯ ತಬ್ಲೀಘಿ ಜಮಾತ್ ನಲ್ಲಿ ಭಾಗಿಯಾಗಿದ್ದ ಕಿರ್ಗಿಸ್ತಾನ, ಮಲೇಶಿಯಾ ಮತ್ತು ಬಾಂಗ್ಲಾದೇಶದ 46 ಮಂದಿ ವಿರುದ್ದ ವೀಸಾ ಉಲ್ಲಂಘನೆ ಆರೋಪದ ಮೇಲೆ ಜೈಲಿಗೆ ಕಳುಹಿಸಲಾಗಿದೆ.
ಪಾಟ್ನಾ: ದೆಹಲಿಯ ತಬ್ಲೀಘಿ ಜಮಾತ್ ನಲ್ಲಿ ಭಾಗಿಯಾಗಿದ್ದ ಕಿರ್ಗಿಸ್ತಾನ, ಮಲೇಶಿಯಾ ಮತ್ತು ಬಾಂಗ್ಲಾದೇಶದ 46 ಮಂದಿ ವಿರುದ್ದ ವೀಸಾ ಉಲ್ಲಂಘನೆ ಆರೋಪದ ಮೇಲೆ ಜೈಲಿಗೆ ಕಳುಹಿಸಲಾಗಿದೆ.
ಪ್ರವಾಸಿ ವೀಸಾ ಪಡೆದು ನವದೆಹಲಿಯ ತಬ್ಲೀಘಿ ಜಮಾತ್ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಬಿಹಾರ್ ಗೆ ಆಗಮಿಸಿದ್ದರು ಇವರ ವಿರುದ್ಧ 1946ರ ವಿದೇಶಿ ಕಾಯ್ದೆ ಸೆಕ್ಷನ್ 14ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಇದೀಗ ಅವರನ್ನೆಲ್ಲಾ ಜೈಲಿಗೆ ಕಳುಹಿಸಲಾಗಿದೆ.
ಮಲೇಶಿಯಾದ 20 ಮಂದಿ ಸೇರಿದಂತೆ ಕಿರ್ಗಿಸ್ತಾನ್, ಬಾಂಗ್ಲಾದೇಶ ಮತ್ತು ಇಂಡೋನೇಷಿಯಾದ ಪ್ರಜೆಗಳ ವಿರುದ್ಧ ದೂರು ದಾಖಲಾಗಿದೆ.
ಬಿಹಾರದ ಅರಾರಿಯಾದಲ್ಲಿ 18, ಬಕ್ಸರ್ ಮತ್ತು ಪಾಟ್ನಾದಲ್ಲಿ ತಂಗಿದ್ದ ಇವರನ್ನು ಪೊಲೀಸರು ಬಂಧಿಸಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ