ಲಾಕ್ ಡೌನ್ ಪರಿಣಾಮ ದೇವನದಿ ಗಂಗೆಯ ನೀರಿನ ಗುಣಮಟ್ಟ ಸುಧಾರಣೆ: ಈಗ ಕುಡಿಯುವುದಕ್ಕೂ ಯೋಗ್ಯ!

ಕೊರೋನಾ ವೈರಸ್ ಲಾಕ್ ಡೌನ್ ನಿಂದ ದೇಶಕ್ಕೇ ದೇಶವೇ ಸ್ತಬ್ಧವಾಗಿದೆ. ಜನರು ಮನೆಯಲ್ಲೇ ಉಳಿದಿದ್ದು, ಕೈಗಾರಿಕೆಗಳು ಮುಚ್ಚಿವೆ. ಪರಿಣಾಮ ವನ್ಯಜೀವಿಗಳು ಸ್ವಚ್ಚಂದವಾಗಿ ಓಡಾಡುವುದೂ ಸೇರಿದಂತೆ ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳಾಗತೊಡಗಿದ್ದು ಈ ಸಾಲಿಗೆ ಈಗ ದೇವನದಿ ಗಂಗೆಯೂ ಸೇರ್ಪಡೆಯಾಗಿದೆ. 
ಲಾಕ್ ಡೌನ್ ಪರಿಣಾಮ ದೇವನದಿ ಗಂಗೆಯ ನೀರಿನ ಗುಣಮಟ್ಟ ಸುಧಾರಣೆ
ಲಾಕ್ ಡೌನ್ ಪರಿಣಾಮ ದೇವನದಿ ಗಂಗೆಯ ನೀರಿನ ಗುಣಮಟ್ಟ ಸುಧಾರಣೆ

ವಾರಣಾಸಿ/ಹರಿದ್ವಾರ: ಕೊರೋನಾ ವೈರಸ್ ಲಾಕ್ ಡೌನ್ ನಿಂದ ದೇಶಕ್ಕೇ ದೇಶವೇ ಸ್ತಬ್ಧವಾಗಿದೆ. ಜನರು ಮನೆಯಲ್ಲೇ ಉಳಿದಿದ್ದು, ಕೈಗಾರಿಕೆಗಳು ಮುಚ್ಚಿವೆ. ಪರಿಣಾಮ ವನ್ಯಜೀವಿಗಳು ಸ್ವಚ್ಚಂದವಾಗಿ ಓಡಾಡುವುದೂ ಸೇರಿದಂತೆ ಪ್ರಕೃತಿಯಲ್ಲಿ ಅನೇಕ ಬದಲಾವಣೆಗಳಾಗತೊಡಗಿದ್ದು ಈ ಸಾಲಿಗೆ ಈಗ ದೇವನದಿ ಗಂಗೆಯೂ ಸೇರ್ಪಡೆಯಾಗಿದೆ. 

ವಾರಾಣಸಿ-ಹರಿದ್ವಾರದ ಮೂಲಕ ಹರಿಯುವ ದೇವನದಿ ಗಂಗೆ ಲಾಕ್ ಡೌನ್ ಪರಿಣಾಮವಾಗಿ ಮತ್ತಷ್ಟು ಸ್ವಚ್ಛಗೊಂಡಿದ್ದು, ಗಾಂಗಾನದಿಯ ನೀರು ಹಿಂದೆಂದಿಗಿಂತಲೂ ಉತ್ತಮವಾಗಿದೆ. 
 
ಮಾ.24 ರಂದು ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಘೋಷಣೆ ಮಾಡಿದಾಗಿನಿಂದಲೂ ಕೈಗಾರಿಕೆಗಳು ಮುಚ್ಚುವೆ. ಲಾಕ್ ಡೌನ್ ನಿಂದಾಗಿ ಪ್ರತಿ ದಿನವೂ ಗಂಗಾ ನದಿಗೆ ಸೇರುತ್ತಿದ್ದ ತ್ಯಾಜ್ಯಗಳು ಈಗ ಸ್ಥಗಿತಗೊಂಡಿವೆ. ಇದರಿಂದ ಉಂಟಾಗಿರುವ ಪರಿಣಾಮವನ್ನು ವಿಜ್ಞಾನಿಗಳು ಗಮನಿಸಿದ್ದು, ಗಂಗಾ ನದಿ ನೀರಿನ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ಕುಡಿಯುವುದಕ್ಕೆ ಯೋಗ್ಯವಾಗಿದೆ ಎಂದು ಹೇಳಿದ್ದಾರೆ. 

ಹರಿದ್ವಾರದಲ್ಲಿ ಗಂಗಾ ನದಿಯ ಘಾಟ್ ಗಳನ್ನು ಸಾರ್ವಜನಿಕ ಪ್ರವೇಶದಿಂದ ನಿರ್ಬಂಧಿಸಲಾಗಿದ್ದು, ತ್ಯಾಜ್ಯ ಸುರಿಯುವುದು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿದ್ದು ಗಂಗಾ ನದಿಯಲ್ಲಿರುವ ಜಲಚರಗಳು ಕಣ್ಣಿಗೆ ಕಾಣುವಷ್ಟು ಸ್ವಚ್ಛವಾಗಿದೆ ಎನ್ನುತ್ತಾರೆ ವಿಜ್ಞಾನಿಗಳು. 

ಗಂಗಾ ನದಿಗೆ ಸೇರುವ 10 ನೇ ಒಂದರಷ್ಟು ತ್ಯಾಜ್ಯಗಳು ಕೈಗಾರಿಕೆಗಳಿಂದ, ಸ್ಥಳೀಯ ಹೊಟೇಲ್ ಗಳಿಂದ, ಬೇರೆ ಮೂಲಗಳಿಂದ ಬರುತ್ತಿದ್ದವು ಈಗ ಇವೆಲ್ಲವೂ ಬಂದ್ ಆಗಿದ್ದು, ಗಂಗಾ ನದಿಯ ಗುಣಮಟ್ಟ ಶೇ.40-50 ರಷ್ಟು ಏರಿಕೆಯಾಗಿದೆ. ಜೊತೆಗೆ ಗಂಗಾ ನದಿ ಹರಿಯುವ ಪ್ರದೇಶದಲ್ಲಿ ಮಳೆ ಬಂದಿದ್ದು, ನದಿಯ ನೀರು ಸ್ವಚ್ಛಗೊಳ್ಳುವುದಕ್ಕೆ ಇದೂ ಸಹಕಾರಿಯಾಗಿದೆ. ಗಂಗಾ ನದಿಯಷ್ಟೇ ಅಲ್ಲದೇ ಲಾಕ್ ಡೌನ್ ಪರಿಣಾಮವಾಗಿ ಯಮುನಾ ನದಿಯ ನೀರಿನ ಗುಣಮಟ್ಟವೂ ಸುಧಾರಣೆ ಕಂಡಿದೆ ಎನ್ನುತ್ತಿದ್ದಾರೆ ವಿಜ್ಞಾನಿಗಳು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com