
ನವದೆಹಲಿ: ಕೊರೋನಾ ಸೋಂಕು ಹಾಗೂ ದೇಶಾದ್ಯಂತ ಲಾಕ್ ಡೌನ್ ವಿಸ್ತರಣೆ ಮಾಡಲಾಗಿರುವ ಕಾರಣ ಆರೋಗ್ಯ, ಮೋಟಾರು ವಿಮಾ ಪಾಲಿಸಿ ಕಂತು ನವೀಕರಿಸಲು ಮೇ 15 ರ ತನಕ ಅವಕಾಶವಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕಳದೆ ಮಾರ್ಚ್ 25 ರಿಂದ ಮೇ 3 ರ ನಡುವೆ ಕಂತು ಪಾವತಿಸಬೇಕಿದ್ದ ಪಾಲಿಸಿಗಳಿಗೆ ಮಾತ್ರ ಈ ವಿನಾಯಿತಿ ಅನ್ವಯವಾಗಲಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಕಂತು ವಿನಾಯಿತಿ ಅವಧಿಯಲ್ಲೂ ವಿಮಾ ಕಂಪನಿಗಳು ಕ್ಲೇಮುಗಳ ಪ್ರಕ್ರಿಯೆಯನ್ನು ಎಂದಿನಂತೆ ನಡೆಸಬೇಕು ಎಂದು ಸೂಚಿಸಿದ್ದಾರೆ.
ಗೃಹ ಸೇರಿದಂತೆ ವಿವಿಧ ಸಾಲಗಳ ಕಂತು ಪಾವತಿಗೆ ಈ ಹಿಂದೆಯೇ ಕೇಂದ್ರ ಹಣಕಾಸು ಸಚಿವಾಲಯ ಮೂರು ತಿಂಗಳ ವಿನಾಯಿತಿ ಘೋಷಿಸಿತ್ತು.
Advertisement