ಲಾಕ್ ಡೌನ್ ಮಧ್ಯೆ ಶಾಲಾ ವಾರ್ಷಿಕ, ತ್ರೈಮಾಸಿಕ ಶುಲ್ಕ ಸಂಗ್ರಹದ ಮರುಪರಿಶೀಲನೆ ಮಾಡಿ: ಸಚಿವ ರಮೇಶ್ ಪೋಖ್ರಿಯಾಲ್

ಲಾಕ್ ಡೌನ್ ಸಮಯದಲ್ಲಿ ಶಾಲಾ ವಾರ್ಷಿಕ ಶುಲ್ಕ ಹೆಚ್ಚಳ ಮತ್ತು ತ್ರೈಮಾಸಿಕ ಶುಲ್ಕ ಸಂಗ್ರಹದ ಬಗ್ಗೆ ಮರುಪರಿಶೀಲನೆ ಮಾಡಬೇಕೆಂದು ಖಾಸಗಿ ಶಾಲೆಗಳನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೊಕ್ರಿಯಾಲ್ ನಿಶಾಂಕ್ ಒತ್ತಾಯಿಸಿದ್ದಾರೆ.
ರಮೇಶ್ ಪೋಖ್ರಿಯಾಲ್
ರಮೇಶ್ ಪೋಖ್ರಿಯಾಲ್

ನವದೆಹಲಿ: ಲಾಕ್ ಡೌನ್ ಸಮಯದಲ್ಲಿ ಶಾಲಾ ವಾರ್ಷಿಕ ಶುಲ್ಕ ಹೆಚ್ಚಳ ಮತ್ತು ತ್ರೈಮಾಸಿಕ ಶುಲ್ಕ ಸಂಗ್ರಹದ ಬಗ್ಗೆ ಮರುಪರಿಶೀಲನೆ ಮಾಡಬೇಕೆಂದು ಖಾಸಗಿ ಶಾಲೆಗಳನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಒತ್ತಾಯಿಸಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿರುವಾಗ ಪೋಷಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯ ಶಿಕ್ಷಣ ಇಲಾಖೆಗಳು ಈ ಸಂಬಂಧ ಗಮನಹರಿಸುವಂತೆ ಅವರು ಒತ್ತಾಯಿಸಿದ್ದಾರೆ.

ಲಾಕ್ ಡೌನ್ ಸಮಯದಲ್ಲಿ ಖಾಸಗಿ ಶಾಲೆಗಳು ಪ್ರತಿವರ್ಷ ಮಾಡುವ ಶುಲ್ಕ ಹೆಚ್ಚಳ ಮತ್ತು ತ್ರೈಮಾಸಿಕ ಶುಲ್ಕ ಸಂಗ್ರಹದ ಕುರಿತು ಕೆಲವು ರಾಜ್ಯಗಳು ಧನಾತ್ಮಕ ಕ್ರಮ ಕೈಗೊಂಡಿವೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com