ನವದೆಹಲಿ:ಕೋವಿಡ್-19 ರೋಗಿಗಳಿಂದ ಆಸ್ಪತ್ರೆ ವೈದ್ಯರು,ಸಿಬ್ಬಂದಿ ಮೇಲೆ ಹಲ್ಲೆ, ಬೆದರಿಕೆ ಆರೋಪ- ವಿಡಿಯೋ

ಸಿಎಟಿಎಸ್ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತಂದ ಕೋವಿಡ್-19 ರೋಗಿಗಳ ಗುಂಪೊಂದು ತಮ್ಮ ಮೇಲೆ ಬೆದರಿಕೆ ಹಾಕಿ, ದೈಹಿಕವಾಗಿ ಹಲ್ಲೆ ನಡೆಸಿದೆ ಎಂದು ಲೋಕ ನಾಯಕ್ ಜಯ ಪ್ರಕಾಶ್  ನಾರಾಯಣ ಆಸ್ಪತ್ರೆ ವೈದ್ಯರು ಆರೋಪಿಸಿದ್ದಾರೆ.
ಆಸ್ಪತ್ರೆ ಸಿಬ್ಬಂದಿ
ಆಸ್ಪತ್ರೆ ಸಿಬ್ಬಂದಿ

ನವದೆಹಲಿ: ಸಿಎಟಿಎಸ್ ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕರೆತಂದ ಕೋವಿಡ್-19 ರೋಗಿಗಳ ಗುಂಪೊಂದು ತಮ್ಮ ಮೇಲೆ ಬೆದರಿಕೆ ಹಾಕಿ, ದೈಹಿಕವಾಗಿ ಹಲ್ಲೆ ನಡೆಸಿದೆ ಎಂದು ಲೋಕ ನಾಯಕ್ ಜಯ ಪ್ರಕಾಶ್  ನಾರಾಯಣ ಆಸ್ಪತ್ರೆ ವೈದ್ಯರು ಆರೋಪಿಸಿದ್ದಾರೆ.

ಈ ಘಟನೆಯನ್ನು ವಿವರಿಸುತ್ತಾ ಆಸ್ಪತ್ರೆಯಲ್ಲಿ ಕೋವಿಡ್- 19 ರೋಗಿಗಳು ಅನುಚಿತ ವರ್ತನೆ ಬಗ್ಗೆ ಆಸ್ಪತ್ರೆ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲಾ ವೈದ್ಯರು ಬ್ಯುಸಿಯಾಗಿದ್ದರಿಂದ ಸ್ವಲ್ಪ ಹೊತ್ತು ಕಾಯುವಂತೆ ಸಿಎಟಿಎಸ್ ಅಂಬ್ಯುಲೆನ್ಸ್ ಮೂಲಕ ಕರೆತಂದ ರೋಗಿಗಳಿಗೆ ಹೇಳಿದ್ದೇವೆ. ಆದರೆ, ಅವರು ಕಾಯಲಿಲ್ಲ. ಮಾಸ್ಕ್ ಗಳನ್ನು ತೆಗೆದು ವೈದ್ಯರ ಬಳಿ ಬಂದು ಗಲಾಟೆ ಮಾಡಿದರು ಎಂದು ಪುರುಷ ಆರೋಗ್ಯ ಸೇವಾ ಸಿಬ್ಬಂದಿಯೊಬ್ಬರು ಹೇಳಿದರು. 

ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವೈದ್ಯರು ಹೇಳಿದಾಗ ಅವರೊಂದಿಗೆ ರೋಗಿಗಳು ವಾಗ್ವಾದಾಕ್ಕಿಳಿದಿದ್ದಾರೆ. ಒಂದು ವೇಳೆ ತಮ್ಮಲ್ಲಿ ಕೊರೋನಾ ಪತ್ತೆಯಾದರೆ ನೀವು ಕೂಡಾ ಸೋಂಕಿಗೆ ತುತ್ತಾಗಬೇಕಾಗುತ್ತದೆ ಎಂದು ಹೇಳಿದ್ದಾರೆ. ನಂತರ ರೋಗಿಗಳಿಂದ ದೂರ ಹೋಗಲು ವೈದ್ಯರು ಪ್ರಯತ್ನಿಸಿದಾಗ ವೈದ್ಯರೊಂದಿಗೆ ಆಕ್ರಮಣಕಾರಿ ಹಾಗೂ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಅವರು ತಿಳಿಸಿದರು. 

ಕೋವಿಡ್ -19 ರೋಗಿಗಳಿಗೆ ಚಿಕಿತ್ಸೆ ನೀಡುವ ಸಲುವಾಗಿ ಆಸ್ಪತ್ರೆ ಸಿಬ್ಬಂದಿ ಹಗಲು- ಇರುಳು ಶ್ರಮಿಸುತ್ತಿದ್ದಾರೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ಕೆಲಸ ಮಾಡಲು ಕಷ್ಟವಾಗುತ್ತಿದೆ ಎಂದು ಮಹಿಳಾ ಆರೋಗ್ಯ ಸೇವಾ ಸಿಬ್ಬಂದಿಯೊಬ್ಬರು ನೊಂದು ನುಡಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com