ಫೇಸ್ ಮಾಸ್ಕ್ ತಯಾರಿಸಿ ಹಂಚುತ್ತಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪತ್ನಿ ಸವಿತಾ ಕೋವಿಂದ್

ದೇಶದಲ್ಲಿ ಕೋವಿಡ್-19 ಸೋಂಕನ್ನು ಮಟ್ಟಹಾಕಲು ಸಮಾಜದ ವಿವಿಧ ವರ್ಗಗಳ ಜನರು ತಮ್ಮದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ಮಹಿಳೆಯರು, ಸ್ವಯಂ ಸೇವಾ ಸಂಸ್ಥೆಗಳು ಮಾಸ್ಕ್, ಗ್ಲೌಸ್ ಗಳನ್ನು ತಯಾರಿಸಿ ಅಗತ್ಯವಿರುವ ಕಡೆಗಳಿಗೆ ಪೂರೈಸುತ್ತಿದ್ದಾರೆ.
ಸವಿತಾ ಕೋವಿಂದ್
ಸವಿತಾ ಕೋವಿಂದ್

ನವದೆಹಲಿ: ದೇಶದಲ್ಲಿ ಕೋವಿಡ್-19 ಸೋಂಕನ್ನು ಮಟ್ಟಹಾಕಲು ಸಮಾಜದ ವಿವಿಧ ವರ್ಗಗಳ ಜನರು ತಮ್ಮದೇ ರೀತಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಲವು ಮಹಿಳೆಯರು, ಸ್ವಯಂ ಸೇವಾ ಸಂಸ್ಥೆಗಳು ಮಾಸ್ಕ್, ಗ್ಲೌಸ್ ಗಳನ್ನು ತಯಾರಿಸಿ ಅಗತ್ಯವಿರುವ ಕಡೆಗಳಿಗೆ ಪೂರೈಸುತ್ತಿದ್ದಾರೆ.

ದೇಶದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಪತ್ನಿ ಸವಿತಾ ಕೋವಿಂದ್ ಅವರು ಲಾಕ್ ಡೌನ್ ಸಮಯದಲ್ಲಿ ಸುಮ್ಮನೆ ಕುಳಿತಿಲ್ಲ.ರಾಷ್ಟ್ರಪತಿ ಎಸ್ಟೇಟ್ ನಲ್ಲಿರುವ ತಮ್ಮ ಶಕ್ತಿ ಹಟ್ ನಿವಾಸದಲ್ಲಿ ಹೊಲಿಗೆ ಯಂತ್ರದಲ್ಲಿ ಫೇಸ್ ಮಾಸ್ಕ್ ಗಳನ್ನು ಹೊಲಿದು ಅಗತ್ಯವಿರುವವರಿಗೆ ಪೂರೈಸುತ್ತಿದ್ದಾರೆ.

ಈ ಮಾಸ್ಕ್ ಗಳನ್ನು ದೆಹಲಿ ನಗರ ನಿರಾಶ್ರಿತ ಅಭಿವೃದ್ಧಿ ಮಂಡಳಿಯ ವಿವಿಧ ನಿರಾಶ್ರಿತ ಮನೆಗಳಿಗೆ ವಿತರಿಸಲಾಗುತ್ತದೆ. ಮಾಸ್ಕ್ ಗಳನ್ನು ಹೊಲಿಯುವಾಗ ಸವಿತಾ ಕೋವಿಂದ್ ಅವರು ತಮ್ಮ ಬಾಯಿಯನ್ನು ಮಾಸ್ಕ್ ನಿಂದ ಮುಚ್ಚಿಕೊಂಡಿದ್ದಾರೆ.

ಕೊರೋನಾ ವೈರಸ್ ಸಮಯದಲ್ಲಿ ಎಲ್ಲರೂ ಸಾರ್ವಜನಿಕ ಸ್ಥಳಗಳಲ್ಲಿ, ಕೆಲಸದ ಸ್ಥಳಗಳಲ್ಲಿ, ಜನಸಮೂಹಗಳಲ್ಲಿ, ಮದುವೆ ಸಮಾರಂಭಗಳಲ್ಲಿ, ಶವ ಸಂಸ್ಕಾರ ಸಮಯದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಗೃಹ ವ್ಯವಹಾರಗಳ ಸಚಿವಾಲಯ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com