ಭಾರತದಲ್ಲಿ ಮುಸ್ಲಿಂ ವಿರೋಧಿ ಮನೋಭಾವನೆ ಹೆಚ್ಚಿಸಲು ಕೊವಿಡ್- 19 ಬಳಕೆ-ಲ್ಯಾನ್ಸೆಟ್ 

ಕೋವಿಡ್-19 ಸೋಂಕು ತಡೆಗಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಕ್ರಮವನ್ನು ಟೀಕಿಸಿರುವ ವಿಶ್ವದ ಮುಂಚೂಣಿ ಮೆಡಿಕಲ್ ಜರ್ನಲ್ ಲ್ಯಾನ್ಸೆಟ್, ಲಾಕ್ ಡೌನ್ ನಿಂದಾಗಿ ದೇಶದ ಲಕ್ಷಾಂತರ ದುರ್ಬಲ ಜನರು ಹಸಿವಿನಿಂದ ನರಳುವಂತಾಗಿದ್ದು, ನೋವಿನಲ್ಲಿದ್ದಾರೆ ಎಂದು ಹೇಳಿದೆ
ತಬ್ಲೀಘಿ ಜಮಾತ್ ಸದಸ್ಯರು
ತಬ್ಲೀಘಿ ಜಮಾತ್ ಸದಸ್ಯರು
Updated on

ನವದೆಹಲಿ: ಕೋವಿಡ್-19 ಸೋಂಕು ತಡೆಗಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಕ್ರಮವನ್ನು ಟೀಕಿಸಿರುವ ವಿಶ್ವದ ಮುಂಚೂಣಿ ಮೆಡಿಕಲ್ ಜರ್ನಲ್ ಲ್ಯಾನ್ಸೆಟ್, ಲಾಕ್ ಡೌನ್ ನಿಂದಾಗಿ ದೇಶದ ಲಕ್ಷಾಂತರ ದುರ್ಬಲ ಜನರು ಹಸಿವಿನಿಂದ ನರಳುವಂತಾಗಿದ್ದು, ನೋವಿನಲ್ಲಿದ್ದಾರೆ ಎಂದು ಹೇಳಿದೆ

ತಬ್ಲೀಘಿ ಜಮಾತ್ ಸಮಾವೇಶವನ್ನು ಉದಾಹರಣೆಯಾಗಿಟ್ಟುಕೊಂಡು ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಮುಸ್ಲಿಂ ವಿರೋಧಿ ಮನೋಭಾವನೆ ಹೆಚ್ಚಿಸಲು ಬಳಸಲಾಗುತ್ತಿದೆ. ಭಯ,ಕಳಂಕ, ದೂಷಣೆ ಮೂಲಕ ತಪ್ಪು ಮಾಹಿತಿ ಹರಡಿ ಬೆದರಿಕೆ ಹಾಕಲಾಗುತ್ತಿದೆ ಎಂದು ಲ್ಯಾನ್ಸೆಟ್ ಸಂಪಾದಕೀಯದಲ್ಲಿ ಟೀಕಿಸಲಾಗಿದೆ. 

ಲಾಕ್ ಡೌನ್ ಸಮಯದಲ್ಲಿ ಇತ್ತೀಚಿಗಿನ ವಲಸೆ ಕಾರ್ಮಿಕರ ಸಾಮೂಹಿಕ ನಿರ್ಗಮನ ಅಂಶವನ್ನು ಉಲ್ಲೇಖಿಸಲಾಗಿದ್ದು, 
ಅಸಂಘಟಿತ ವಲಯದ ಕಾರ್ಮಿಕ ಹಸಿವಿನ ಬಗ್ಗೆ ಆತಂಕದ ಪ್ರಶ್ನೆ ಎತ್ತಲಾಗಿದೆ. ಯಾವುದೇ ಸಿದ್ಧತೆ ಮಾಡಿಕೊಳ್ಳದೆ ದಿಢೀರನೆ ಸರ್ಕಾರ ಲಾಕ್ ಡೌನ್ ಜಾರಿ ಮಾಡಿದ್ದರಿಂದ ದುರ್ಬಲ ಜನರಿಗೆ ತುಂಬಾ ಅನಾನುಕೂಲವಾಗಿದೆ ಎಂದು ಲ್ಯಾನ್ಸೆಟ್ ಹೇಳಿದೆ

ಇಂತಹ ಒತ್ತಡವನ್ನು ಪರಿಹರಿಸಲು ಸರ್ಕಾರ ಮಾಡುತ್ತಿರುವ ಹಣಕಾಸಿನ ನೆರವು ಮತ್ತು ಆಹಾರ ಸುರಕ್ಷತಾ ಕ್ರಮವನ್ನು ಹೈಲೈಟ್ ಮಾಡಿರುವ ಲ್ಯಾನ್ಸೆಟ್, ಸದ್ಯದ ಬೇಡಿಕೆಗೆ ಇದು ಸಾಕಾಗುವುದಿಲ್ಲ, ಆದರೆ, ಸಮಸ್ಯೆ ಬಗೆಹರಿಸಲು ಉತ್ತಮ ಯೋಜನೆ ಮತ್ತು ಸಂವಹನ ನೆರವಾಗಬಹುದು ಎಂದು ಸಲಹೆ ನೀಡಲಾಗಿದೆ. 

ಕೋವಿಡ್-19 ಸೇವೆಯೇತರ ಇತರ ಸೇವೆಗಳು ಅಸ್ತವ್ಯಸ್ತಗೊಂಡಿವೆ ಟೀಕಿಸಿರುವ ಲ್ಯಾನ್ಸೆಟ್, ದೇಶದಲ್ಲಿ ಶೇ. 65 ರಷ್ಟು ಮಂದಿ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದು, ಸೋಂಕಿನ ಪ್ರಕರಣಗಳು ಕಡಿಮೆ ಪ್ರಮಾಣದಲ್ಲಿವೆ. ಆದಾಗ್ಯೂ, ಲಾಕ್ ಡೌನ್ ನಿಂದ ಈಗಾಗಲೇ ವ್ಯತಿರಕ್ತ ಪರಿಣಾಮ ಬೀರಿದೆ ಎಂದು ಹೇಳಿದೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com