6 ತಿಂಗಳ ಬಳಿಕ ಬಾಗಿಲು ತೆಗೆದ ಕೇದಾರನಾಥ ದೇಗುಲ: ಪ್ರಧಾನಿ ಹೆಸರಿನಲ್ಲಿ ಮೊದಲ ಪೂಜೆ, ಭಕ್ತರ ಭೇಟಿಗೆ ನಿರ್ಬಂಧ

ಆರು ತಿಂಗಳ ಚಳಿಗಾಲದ ವಿರಾಮದ ನಂತರ ಕೇದಾರನಾಥ ದೇವಸ್ಥಾನದ ಬಾಗಿಲು ಬುಧವಾರ ಬೆಳಗ್ಗೆ 6 ಗಂಟೆ 10 ನಿಮಿಷಕ್ಕೆ ತೆರೆಯಿತು.
ದೇಗುಲಕ್ಕೆ ಚೆಂಡು ಹೂವುಗಳಿಂದ ಅಲಂಕಾರ
ದೇಗುಲಕ್ಕೆ ಚೆಂಡು ಹೂವುಗಳಿಂದ ಅಲಂಕಾರ

ಉತ್ತರಾಖಂಡ: ಆರು ತಿಂಗಳ ಚಳಿಗಾಲದ ವಿರಾಮದ ನಂತರ ಕೇದಾರನಾಥ ದೇವಸ್ಥಾನದ ಬಾಗಿಲು ಬುಧವಾರ ಬೆಳಗ್ಗೆ 6 ಗಂಟೆ 10 ನಿಮಿಷಕ್ಕೆ ತೆರೆಯಿತು.

ಲಾಕ್ ಡೌನ್ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಸಾರ್ವಜನಿಕ ಭೇಟಿಗೆ ನಿಷೇಧ ಹೇರಲಾಗಿದೆ. ಮಂಜುಗಡ್ಡೆಯಿಂದ ಆವೃತವಾಗಿರುವ ದೇವಸ್ಥಾನವನ್ನು 10 ಕ್ವಿಂಟಾಲ್ ಚೆಂಡು ಹೂವುಗಳಿಂದ ಅಲಂಕಾರ ಮಾಡಲಾಗಿತ್ತು.

ಕೇದಾರಧಾಮ ದೇವಸ್ಥಾನದ ಬಾಗಿಲು ತೆರೆಯುವ ಪ್ರಕ್ರಿಯೆ ಇಂದು ನಸುಕಿನ ಜಾವ 3 ಗಂಟೆಗೆ ಆರಂಭವಾಯಿತು. ದೇವಸ್ಥಾನದ ಪ್ರಧಾನ ಅರ್ಚಕ ಶಿವಶಂಕರ ಲಿಂಗ 6 ತಿಂಗಳ ಬಳಿಕ ದೇವಸ್ಥಾನದ ಬಾಗಿಲು ತೆಗೆದು ವಿಧಿವಿಧಾನಗಳನ್ನು ನೆರವೇರಿಸಿದರು. ಇಂದು ಬೆಳಗ್ಗೆ ಮೊದಲ ಪೂಜೆಯನ್ನು ದೇಶದ ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಮಾಡಿಸಲಾಯಿತು.

ಇಂದು ಬೆಳಗ್ಗೆ ಧಾರ್ಮಿಕ ವಿಧಿಗಳು ಮತ್ತು ಆರತಿ ನಡೆಯುವಾಗ ದೇವಸ್ವಂ ಮಂಡಳಿಯ ಪ್ರತಿನಿಧಿ ಬಿ ಡಿ ಸಿಂಗ್ ಮತ್ತು ಪಂಚಗೈಯ 20 ಮಂದಿ ನೌಕರರು ಹಾಜರಿದ್ದರು. ಅಲ್ಲದೆ ಸುಮಾರು 15 ಮಂದಿ ಪೊಲೀಸರು, ದೇವಸ್ಥಾನದ ಆಡಳಿತ ಅಧಿಕಾರಿಗಳು ಆರತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದರು ಎಂದು ದೇವಸ್ಥಾನದ ಆಡಳಿತ ಮಂಡಳಿ ಹೇಳಿಕೆಯಲ್ಲಿ ತಿಳಿಸಿದೆ.

ಈ ಸಂದರ್ಭದಲ್ಲಿ ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಭಕ್ತರು ಮತ್ತು ದೇವಸ್ಥಾನದ ಸಿಬ್ಬಂದಿಗೆ ಶುಭ ಹಾರೈಸಿದ್ದಾರೆ.

ಇಂದು ಕೇದಾರನಾಥ್ ದಾಮ ತೆರೆಯುವ ಮೂಲಕ ಉತ್ತರಾಖಂಡ್ ನ ನಾಲ್ಕು ದಾಮಗಳಲ್ಲಿ  ಗಂಗೋತ್ರಿ-ಯಮುನೋತ್ರಿ ದಾಮ ಮೊನ್ನೆ ಅಕ್ಷಯ ತೃತೀಯ ದಿನ, ಬದ್ರಿನಾಥ ದಾಮ ಮುಂದಿನ ತಿಂಗಳು 15ರಂದು ತೆರೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com