ಸೆಂಟ್ರಲ್ ವಿಸ್ಟಾ ಯೋಜನೆ ಸ್ಥಗಿತಗೊಳಿಸುವ ಅಗತ್ಯವಿಲ್ಲ; ಸುಪ್ರೀಂ ಕೋರ್ಟ್

ಕೇಂದ್ರ ಸರ್ಕಾರ ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿರುವ ‘ಸೆಂಟ್ರಲ್ ವಿಸ್ತಾ’ ಯೋಜನೆಯನ್ನು ಸ್ಥಗಿತಗೊಳಿಸುವಅಗತ್ಯವಿಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಕೇಂದ್ರ ಸರ್ಕಾರ ಅತ್ಯಂತ ಪ್ರತಿಷ್ಠೆಯಾಗಿ ಪರಿಗಣಿಸಿರುವ ‘ಸೆಂಟ್ರಲ್ ವಿಸ್ಟಾ’ ಯೋಜನೆಯನ್ನು ಸ್ಥಗಿತಗೊಳಿಸುವ ಅಗತ್ಯವಿಲ್ಲ ಎಂದು ಗುರುವಾರ ಸುಪ್ರೀಂ ಕೋರ್ಟ್ ಹೇಳಿದೆ.

ಸೆಂಟ್ರಲ್ ವಿಸ್ಟಾ ಯೋಜನೆ ವಿರುದ್ದ ಈಗಾಗಲೇ ಆರ್ಜಿಯೊಂದರ ವಿಚಾರಣೆ ನ್ಯಾಯಾಲಯದಲ್ಲಿ ಬಾಕಿ ಉಳಿದುಕೊಂಡಿದೆ. ಈಗ ಅಂತಹದೇ ಆರ್ಜಿ ಸಲ್ಲಿಸುವ ಅಗತ್ಯವಿಲ್ಲ. ಕೊವಿಡ್ -೧೯ರ ಸಂದರ್ಭದಲ್ಲಿ ಯಾರೂ ಯಾವುದೇ ಯೋಜನೆ ಕೈಗೆತ್ತಿಕೊಳ್ಳುವುದಿಲ್ಲ
ಎಂದು ಮುಖ್ಯನ್ಯಾಯಮೂರ್ತಿ ಎಸ್.ಎ. ಬೋಬ್ಡೆ ಹೇಳಿದ್ದಾರೆ.

ಕೇಂದ್ರ ದೆಹಲಿಯ ಲುಟೆಯನ್ಸ್ ವಲಯದಲ್ಲಿ ಹೊಸ ಸಂಸತ್ ಹಾಗೂ ಇತರ ಕೇಂದ್ರ ಸರ್ಕಾರಿ ಕಚೇರಿಗಳನ್ನು ನಿರ್ಮಿಸುವ
ಉದ್ದೇಶದಿಂದ ಸಿದ್ದಪಡಿಸಲಾಗುತ್ತಿರುವ ೨೦ ಸಾವಿರ ಕೋಟಿ ರೂಪಾಯಿ ವೆಚ್ಚದ ಸೆಂಟ್ರಲ್ ವಿಸ್ಟಾ ಯೋಜನೆಗೆ ತಡೆ ನೀಡಲು
ಸುಪ್ರೀಂ ಕೋರ್ಟ್ ಇಂದು ನಿರಾಕರಿಸಿದೆ.

ದೆಹಲಿ ಅಭಿವೃದ್ದಿ ಪ್ರಾಧಿಕಾರದ ಶಿಫಾರಸ್ಸಿನಂತೆ ಸೆಂಟ್ರಲ್ ವಿಸ್ತಾ ಅಭಿವೃದ್ದಿ ಯೋಜನೆಗೆ ಅಗತ್ಯವಾಗಿರುವ ಭೂಮಿ ಬದಲಾವಣೆಗೆ
ಕೇಂದ್ರ ಸರ್ಕಾರ ಈ ಮೊದಲು ಅನುಮೋದನೆ ನೀಡಿತ್ತು. ಅಲ್ಲದೆ, ಹೊಸ ಪಾರ್ಲಿಮೆಂಟ್ ಭವನ ನಿರ್ಮಾಣದ ಯೋಜನೆಗೂ ಕೂಡ
ಒಪ್ಪಿಗೆ ಸೂಚಿಸಿತ್ತು. ಪ್ರಸ್ತುತ ಇರುವ ಪಾರ್ಲಿಮೆಂಟ್ ಭವನ, ರಾಷ್ಟ್ರಪತಿ ಭವನ, ನಾರ್ತ್ ಸೌತ್ ಬ್ಲಾಕ್ ಭವನಗಳನ್ನು ೧೯೩೧ರಲ್ಲಿ
ನಿರ್ಮಿಸಿದ್ದರು. ಆದರೆ ಈ ವಿಸ್ಟಾ ಯೋಜನೆ ಪ್ರಕಾರ ಹೊಸ ಪಾರ್ಲಿಮೆಂಟ್ ಭವನ ನಿರ್ಮಿಸಬೇಕೆಂದು ಕೇಂದ್ರ ಸರ್ಕಾರ
ನಿರ್ಣಯಿಸಿದೆ.

ಪ್ರಸ್ತುತ ಪರಿಸ್ಥಿತಿಗಳಲ್ಲಿ, ದೆಹಲಿಯ ಹೃದಯಭಾಗದಲ್ಲಿ ೨೦,೦೦೦ ಕೋಟಿ ರೂ.ವೆಚ್ಚದ ಕೇಂದ್ರ ವಿಸ್ಟಾ ಅಭಿವೃದ್ಧಿ ಯೋಜನೆ
ಆರಂಭಿಸುವುದನ್ನು ತಡೆಹಿಡಿಯಬೇಕು ಆ ಹಣವನ್ನು ದೇಶದಲ್ಲಿ ಆಸ್ಪತ್ರೆಗಳಂತಹ ಮೂಲಸೌಕರ್ಯ ಒದಗಿಸಲು ಬಳಸಬೇಕು ಎಂದು
ಸೋನಿಯಾಗಾಂಧಿ ಪ್ರಧಾನಿ ಮೋದಿಗೆ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com