'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್: ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ

‘ರಕ್ಷಾ ಬಂಧನ’ ಸಂದರ್ಭದಲ್ಲಿ ಗಾನ ಕೋಗಿಲೆ ಲತಾ ಮಂಗೇಶ್ಕರ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಪ್ರಧಾನಿ ಕೂಡ ಭಾವೋದ್ವೇಗದ  ಉತ್ತರ ನೀಡಿದ್ದಾರೆ. 
'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್: ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ
'ರಾಖಿ’ ಕಳುಹಿಸಲಾಗಲಿಲ್ಲ ಎಂದ ಲತಾ ಮಂಗೇಷ್ಕರ್: ಪ್ರಧಾನಿ ಮೋದಿ ಭಾವೋದ್ವೇಗದ ಉತ್ತರ

ನವದೆಹಲಿ: ‘ರಕ್ಷಾ ಬಂಧನ’ ಸಂದರ್ಭದಲ್ಲಿ ಗಾನ ಕೋಗಿಲೆ ಲತಾ ಮಂಗೇಶ್ಕರ್, ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ವಿಡಿಯೋ ಸಂದೇಶ ಕಳುಹಿಸಿದ್ದಾರೆ. ಇದಕ್ಕೆ ಪ್ರಧಾನಿ ಕೂಡ ಭಾವೋದ್ವೇಗದ  ಉತ್ತರ ನೀಡಿದ್ದಾರೆ. 

‘ಪ್ರಧಾನಿ ನರೇಂದ್ರ ಭಾಯ್. ನೀವು ದೇಶಕ್ಕೆ ಬಹಳ ಒಳ್ಳೆಯ ಸೇವೆ ಮಾಡುತ್ತಿದ್ದೀರಿ, ಆದರೆ ಈ ವರ್ಷ “ರಕ್ಷಾ ಬಂಧನ” ಸಂದರ್ಭದಲ್ಲಿ ನಾನು ನಿಮಗೆ ‘ರಾಖಿ’ ಕಳುಹಿಸಲು ಸಾಧ್ಯವಾಗಲಿಲ್ಲ. ಇದಕ್ಕೆ ಕಾರಣ ಏನು ಎಂಬುದು  ನೀವೂ ಸೇರಿದಂತೆ ಇಡೀ ದೇಶಕ್ಕೆ ತಿಳಿದಿದೆ. ನನ್ನೊಂದಿಗೆ, ದೇಶದ ಲಕ್ಷಾಂತರ, ಕೋಟ್ಯಾಂತರ ಮಹಿಳೆಯರು  ಸಹ ನಿಮಗೆ ‘ರಾಖಿ’ ಕಟ್ಟಲು ಹಂಬಲಿಸುತ್ತಿದ್ದಾರೆ. ನಮ್ಮೆಲ್ಲರಿಗೂ  ಈ ಪರ್ವದಿನದಂದು ನೀವು ಒಂದು ಮಾತು ನೀಡಬೇಕು. ದೇಶವನ್ನು ಇನ್ನಷ್ಟು ಉನ್ನತ ಎತ್ತರಕ್ಕೆ ಕೊಂಡೊಯ್ಯುತ್ತೇನೆ ಹಾಗೂ ಅದಕ್ಕಾಗಿ ಶ್ರಮಿಸುತ್ತೇನೆ ಎಂದು ಪ್ರತಿಜ್ಞೆ ಮಾಡಬೇಕು ”ಎಂದು ಲತಾ ಮಂಗೇಶ್ಕರ್ ತಮ್ಮ ವಿಡಿಯೋ ಹಂಚಿಕೊಂಡಿದ್ದಾರೆ.

ವಿಡಿಯೋ ನೋಡಿದ ಪ್ರಧಾನಿ ನರೇಂದ್ರ ಮೋದಿ ಅವರು ಲತಾ ಮಂಗೇಶ್ಕರ್ ಅವರಿಗೆ ಹೃತ್ಪೂರ್ವಕ ಧನ್ಯವಾದ ಸಲ್ಲಿಸಿದ್ದಾರೆ. ‘ಲತಾ ದೀದಿ,  ರಕ್ಷಾ ಬಂಧನ ಕುರಿತು ನಿಮ್ಮ ಸಂದೇಶ ನನಗೆ ಅತ್ಯಂತ ಹೆಚ್ಚಿನ ಪ್ರೇರಣೆ ಹಾಗೂ  ಶಕ್ತಿಯನ್ನು ನೀಡುತ್ತಿದೆ. ದೇಶದ ಕೋಟ್ಯಾಂತರ ತಾಯಂದಿರು ಹಾಗೂ ಸಹೋದರಿಯರ ಆಶೀರ್ವಾದದಿಂದ ದೇಶ ಖಂಡಿತವಾಗಿಯೂ ಅತ್ಯುನ್ನತ ಶಿಖರವನ್ನು ತಲುಪಲಿದೆ. ಹೊಸ ಆವಿಷ್ಕಾರಗಳನ್ನು ನಡೆಸುತ್ತಿದೆ ಎಂದು ಮೋದಿ ಭಾವನಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ. ಇದಲ್ಲದೆ, ಲತಾ ಮಂಗೇಶ್ಕರ್ ಅವರಿಗೆ ದೀರ್ಘಾಯುಷ್ಯ, ಆರೋಗ್ಯ ಕರುಣಿಸಲಿ ಎಂದು ಮನಸ್ಸು ಪೂರ್ವಕವಾಗಿ ಕೋರುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com