ಪಿಗ್ಮಿ ಮಿಡತೆ ಪ್ರಭೇದಕ್ಕೆ ವಯನಾಡ್ ಸಂಶೋಧಕನ ಹೆಸರು!
ಪಿಗ್ಮಿ ಮಿಡತೆ ಪ್ರಭೇದಕ್ಕೆ ವಯನಾಡ್ ಸಂಶೋಧಕನ ಹೆಸರು!

ಪಿಗ್ಮಿ ಮಿಡತೆ ಪ್ರಭೇದಕ್ಕೆ ವಯನಾಡ್ ಸಂಶೋಧಕನ ಹೆಸರು! 

ಪಶ್ಚಿಮ ಘಟ್ಟಗಳ ಪಿಗ್ಮಿ ಮಿಡತೆಯ ವಿಷಯದಲ್ಲಿ ತಜ್ಞರಾಗಿರುವ ಕೇರಳದ ಧನೀಶ್ ಭಾಸ್ಕರ್ ಅವರ ಹೆಸರನ್ನು 116 ವರ್ಷಗಳಲ್ಲಿ ಅಪರೂಪವಾಗಿ ಕಂಡುಬಂದಿರುವ ಟ್ವಿಗ್ ಹಾಪರ್ ವರ್ಗದ ಮಿಡತೆಗಳಿಗೆ ಇಡಲಾಗಿದೆ. 
Published on

ಕೋಯಿಕ್ಕೋಡ್: ಪಶ್ಚಿಮ ಘಟ್ಟಗಳ ಪಿಗ್ಮಿ ಮಿಡತೆಯ ವಿಷಯದಲ್ಲಿ ತಜ್ಞರಾಗಿರುವ ಕೇರಳದ ಧನೀಶ್ ಭಾಸ್ಕರ್ ಅವರ ಹೆಸರನ್ನು 116 ವರ್ಷಗಳಲ್ಲಿ ಅಪರೂಪವಾಗಿ ಕಂಡುಬಂದಿರುವ ಟ್ವಿಗ್ ಹಾಪರ್ ವರ್ಗದ ಮಿಡತೆಗಳಿಗೆ ಇಡಲಾಗಿದೆ. 

ಝೂಟ್ಯಾಕ್ಸಾ ಜರ್ನಲ್ ನಲ್ಲಿ ಈ ವಿಶೇಷ ಪ್ರಭೇದದ ಮಿಡತೆಗಳ ಬಗ್ಗೆ ಐವರು ವಿದೇಶಿ ಸಂರಕ್ಷಣಾ ಜೀವಶಾಸ್ತ್ರಜ್ಞರು ಬರೆದಿದ್ದು ತಾವು ಕಂಡುಹಿಡಿದ ಮಿಡತೆ ಪ್ರಭೇದಕ್ಕೆ ಕ್ಲಾಡೋನೋಟಸ್ ಭಾಸ್ಕರಿ ಎಂಬ ನಾಮಕರಣ ಮಾಡಿದ್ದಾರೆ. ಇಷ್ಟು ಕಿರಿಯ ವಯಸ್ಸಿಗೆ ಸಂರಕ್ಷಣಾ ಜೀವಶಾಸ್ತ್ರಜ್ಞನೋರ್ವನ ಹೆಸರನ್ನು ಮಿಡತೆ ಪ್ರಭೇದಕ್ಕೆ ಇಡುತ್ತಿರುವುದು ವಿಶೇಷವಾಗಿದೆ. 

ಈ ಮೇಲಿನ ಪ್ರಭೇದದ ಮಿಡತೆಗಳು ಶ್ರೀಲಂಕಾದ ಸಿಂಹರಾಜ ಮಳೆಕಾಡಿನಲ್ಲಿ ಜರ್ಮನಿ ಮತ್ತು ಕ್ರೊಯೇಷಿಯಾದ ಸಂಶೋಧಕರು ಪತ್ತೆ ಮಾಡಿದ್ದಾರೆ. ಹೆಣ್ಣು ಮಿಡತೆ ಇದಾಗಿದ್ದು, ಅಪರೂಪದ ಪ್ರಭೇದದಲ್ಲಿ ಕಂಡುಬಂದಿರುವ ಮಿಡತೆ ಇದಾಗಿದೆ ಎಂದು ಧನೀಶ್ ಹೇಳಿದ್ದಾರೆ. 

ಬ್ರಿಟನ್ ಸಂಶೋಧಕರ ನಂತರ 2016 ರಿಂದ ಆರ್ಥೊಪ್ಟೆರಾ (ಮಿಡತೆಗಳ ಪ್ರಭೇದಗಳ ಅಧ್ಯಯನಕ್ಕೆ) ಕೊಡುಗೆ ನೀಡುತ್ತಿರುವ ಭಾರತೀಯ ವ್ಯಕ್ತಿಯಾಗಿದ್ದಾರೆ. ವಯಾನಾಡ್ ನ ಪಡಿಂಜರಥರದ ನಿವಾಸಿಯಾಗಿರುವ ಧನೀಶ್ ಭಾಸ್ಕರ್ ಕೇರಳ ಅರಣ್ಯ ಸಂಶೋಧನಾ ಇನ್ಸ್ಟಿಟ್ಯೂಟ್ ನಲ್ಲಿ ಡಾ. ಪಿ.ಎಸ್ ಈಸಾ ಅವರ ಮಾರ್ಗದರ್ಶನದಲ್ಲಿ ಈಗಷ್ಟೇ ಪಿಎಚ್ ಡಿ ಪದವಿ ಪಡೆದಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com