ನನ್ನ ನಿರುಪದ್ರವಿ ಭಿನ್ನಾಭಿಪ್ರಾಯವನ್ನು ದ್ರೋಹಿ ನಡೆಯ ರೀತಿ ನೋಡಲಾಯ್ತು: ಶಾ ಫಾಸಲ್

2009 ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೇ ಮೊದಲ ಸ್ಥಾನ ಪಡೆಯುವ ಮೂಲಕ ಜಮ್ಮು-ಕಾಶ್ಮೀರದಲ್ಲಿ ಯುವಕರಿಗೆ ಮಾದರಿಯಾಗಿದ್ದ ಶಾ ಫಾಸಲ್ ತಮ್ಮ ಪದವಿಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದರು. ಆದರೆ ಈಗ ರಾಜಕೀಯಕ್ಕೂ ರಾಜೀನಾಮೆ ನೀಡಿ ಹೊರಬಂದಿದ್ದಾರೆ. 
ಶಾ ಫಾಸಲ್
ಶಾ ಫಾಸಲ್
Updated on

ಶ್ರೀನಗರ: 2009 ರಲ್ಲಿ ಐಎಎಸ್ ಪರೀಕ್ಷೆಯಲ್ಲಿ ದೇಶಕ್ಕೇ ಮೊದಲ ಸ್ಥಾನ ಪಡೆಯುವ ಮೂಲಕ ಜಮ್ಮು-ಕಾಶ್ಮೀರದಲ್ಲಿ ಯುವಕರಿಗೆ ಮಾದರಿಯಾಗಿದ್ದ ಶಾ ಫಾಸಲ್ ತಮ್ಮ ಪದವಿಗೆ ರಾಜೀನಾಮೆ ನೀಡಿ ರಾಜಕೀಯ ಪ್ರವೇಶಿಸಿದ್ದರು. ಆದರೆ ಈಗ ರಾಜಕೀಯಕ್ಕೂ ರಾಜೀನಾಮೆ ನೀಡಿ ಹೊರಬಂದಿದ್ದಾರೆ. 

ಈ ಸಂದರ್ಭದಲ್ಲಿ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿರುವ ಶಾ ಫಾಸಲ್  ತಮ್ಮ ನಿರುಪದ್ರವಿ ಭಿನ್ನಮತ ವಿಶ್ವಾಸಘಾತುಕ, ದ್ರೋಹದ ರೀತಿ ಕಾಣಲಾರಂಭಿಸಿತು, ಇದರಿಂದಾಗಿ ಲಾಭವಾಗುವುದಕ್ಕಿಂತಲೂ ಹಾನಿಯೇ ಹೆಚ್ಚಾಯಿತು ಎಂದು ಹೇಳಿದ್ದಾರೆ. 

ಸಮಯದ ಜೊತೆ ನಾವೂ ವಿಕಾಸ ಹೊಂದಬೇಕು ಎಂದು ತಾವು ರಾಜಕೀಯ ತೊರೆಯುತ್ತಿರುವುದನ್ನು ಸಮರ್ಥಿಸಿಕೊಂಡಿದ್ದಾರೆ.

ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿ ರಾಜ್ಯದಲ್ಲಿ ಹೊಸ ರಾಜಕೀಯ ವಾಸ್ತವವನ್ನು ಹುಟ್ಟುಹಾಕಿತ್ತು. ಬಂಧನದಲ್ಲಿದ್ದಾಗ, ನಾನು ಕೆಲವೊಂದು ನಿರ್ಧಾರಗಳನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ ಎಂಬುದು ಅರಿವಾಯಿತು. 1949 ರ ರಾಷ್ಟ್ರೀಯ ಅಭಿಪ್ರಾಯ ಆರ್ಟಿಕಲ್ 370 ನ್ನು ಸಂವಿಧಾನದಲ್ಲಿ ಸೇರ್ಪಡೆಗೊಳಿಸಿತ್ತು.

2019 ರಲ್ಲಿ ರಾಷ್ಟ್ರೀಯ ಅಭಿಪ್ರಾಯ ಆರ್ಟಿಕಲ್ 370ಯನ್ನು ರದ್ದುಗೊಳಿಸುವುದರ ಪರವಾಗಿತ್ತು. ಇವೆಲ್ಲವನ್ನೂ ಬದಲಾವಣೆ ಮಾಡಿ ಸುಳ್ಳಿನ ಕನಸುಗಳನ್ನು ಜನರ ಮುಂದಿಟ್ಟು ನಾನು ರಾಜಕಾರಣ ಮಾಡುವುದಕ್ಕೆ ಸಾಧ್ಯವಿಲ್ಲ ಎಂಬುದು ನನಗೆ ಮನವರಿಕೆಯಾಗಿತ್ತು, ಇದರ ಬದಲಾಗಿ ರಾಜಕೀಯದಿಂದ ಹೊರಬರುವುದೇ ಉತ್ತಮ ಎಂದೆನಿಸಿತ್ತು ಎಂದು ಶಾ ಫಾಸಲ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com