ಶಾಸಕರು ಅಸಮಾಧಾನ ಹೊಂದುವುದು ಸ್ವಾಭಾವಿಕ, ಪ್ರಜಾಪ್ರಭುತ್ವ ರಕ್ಷಣೆಗೆ ನಮ್ಮ ಹೋರಾಟ: ಅಶೋಕ್ ಗೆಹ್ಲೋಟ್

ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿನ ನಮ್ಮ ಹೋರಾಟ ಮುಂದುವರಿಯಲಿದೆ, ನಮ್ಮೆಲ್ಲಾ ಶಾಸಕರು ದೀರ್ಘಕಾಲದಿಂದ ಒಟ್ಟಿಗಿದ್ದಾರೆ. ಇದು ರಾಜಸ್ತಾನ ಜನತೆಯ ಗೆಲುವು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
ಜೈಸಲ್ಮರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್
ಜೈಸಲ್ಮರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಅಶೋಕ್ ಗೆಹ್ಲೋಟ್

ನವದೆಹಲಿ/ಜೈಪುರ: ಪ್ರಜಾಪ್ರಭುತ್ವವನ್ನು ರಕ್ಷಿಸುವಲ್ಲಿನ ನಮ್ಮ ಹೋರಾಟ ಮುಂದುವರಿಯಲಿದೆ, ನಮ್ಮೆಲ್ಲಾ ಶಾಸಕರು ದೀರ್ಘಕಾಲದಿಂದ ಒಟ್ಟಿಗಿದ್ದಾರೆ. ಇದು ರಾಜಸ್ತಾನ ಜನತೆಯ ಗೆಲುವು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

ಬಂಡಾಯವೆದ್ದು ನಂತರ ವಾಪಸ್ ಬಂದಿರುವ ಸಚಿನ್ ಪೈಲಟ್ ಮತ್ತು 18 ಶಾಸಕರ ಬಗ್ಗೆ ಮಾತನಾಡಿದ ಅವರು, ರಾಜ್ಯದ ಜನತೆಯ ಸೇವೆ ಮಾಡುವುದು ನಮ್ಮ ಕರ್ತವ್ಯ. ಶಾಸಕರು ಅಸಮಾಧಾನಗೊಳ್ಳುವುದು ಸ್ವಾಭಾವಿಕ. ಕಳೆದೊಂದು ತಿಂಗಳಿನಿಂದ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ಶಾಸಕರು ನಮ್ಮ ಜೊತೆಗಿದ್ದು ಅವರ ಪ್ರಬುದ್ಧತೆ ತೋರಿಸಿದ್ದಾರೆ. ದೇಶಸೇವೆ ಮಾಡಲು ಕೆಲವೊಮ್ಮೆ ನಾವು ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಮತ್ತು ಸಹಿಸಬೇಕಾಗುತ್ತದೆ ಎಂದು ನಾನು ಶಾಸಕರಿಗೆ ಹೇಳಿದ್ದೇನೆ ಎಂದರು.

ಸಚಿನ್ ಪೈಲಟ್ ಅವರು ಬಂಡಾಯವೆದ್ದ ಬಗ್ಗೆ ಪ್ರತಿಕ್ರಿಯೆ ನೀಡಿದ ಗೆಹ್ಲೋಟ್, ತಮ್ಮ ಶಾಸಕರ ಕುಂದುಕೊರತೆಗಳನ್ನು ನಿವಾರಿಸುವುದು ಮುಖ್ಯಮಂತ್ರಿಯಾಗಿ ತಮ್ಮ ಕರ್ತವ್ಯವಾಗಿದೆ. ಅವರ ಸಮಸ್ಯೆಗಳನ್ನು ಆಲಿಸಿ ಅವುಗಳನ್ನು ಬಗೆಹರಿಸಲು ಶ್ರಮಿಸುವುದಾಗಿ ಹೇಳಿದರು.

ಸಚಿನ್ ಪೈಲಟ್ ಅವರು ಪಕ್ಷಕ್ಕೆ ವಾಪಸ್ಸಾಗಿ ಎರಡು ದಿನಗಳಾಗಿದ್ದು ಈಗ ಭಿನ್ನಮತಗಳೆಲ್ಲವೂ ಶಮನವಾಗಿದೆ, ಸಮಸ್ಯೆಗಳು ಬಗೆಹರಿದಿದೆ ಎಂದು ಗೆಹ್ಲೋಟ್ ಹೇಳಿದರು. ಅವರು ನಿನ್ನೆ ಜೈಸಲ್ಮರ್ ನ ಹೊಟೇಲ್ ನಲ್ಲಿ ಉಳಿದುಕೊಂಡಿರುವ ಕಾಂಗ್ರೆಸ್ ಶಾಸಕರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಲು ಬಂದಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com