ಉತ್ತರ ಪ್ರದೇಶದ ಆಜಂಘರ್ ನಲ್ಲಿ ಗ್ರಾಮದ ಮುಖ್ಯಸ್ಥನ ಹತ್ಯೆ: ಉದ್ರಿಕ್ತರ ಗುಂಪಿನಿಂದ ಪೊಲೀಸ್ ಪೋಸ್ಟ್  ವಾಹನಗಳಿಗೆ ಬೆಂಕಿ

ಗ್ರಾಮದ ಮುಖ್ಯಸ್ಥನನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಆಜಂ ಘರ್ ನ ಬಸ್ಗೌನ್ ನಲ್ಲಿ ಉದ್ರಿಕ್ತರ ಗುಂಪು ಪೊಲೀಸ್ ಪೋಸ್ಟ್, ವಾಹನಗಳಿಗೆ ಬೆಂಕಿ ಹಚ್ಚಿದೆ. 
ಉತ್ತರ ಪ್ರದೇಶದ ಆಜಂಘರ್ ಗ್ರಾಮದ ಮುಖ್ಯಸ್ಥನ ಹತ್ಯೆ: ಉದ್ರಿಕ್ತರ ಗುಂಪಿನಿಂದ ಪೊಲೀಸ್ ಪೋಸ್ಟ್  ವಾಹನಗಳಿಗೆ ಬೆಂಕಿ
ಉತ್ತರ ಪ್ರದೇಶದ ಆಜಂಘರ್ ಗ್ರಾಮದ ಮುಖ್ಯಸ್ಥನ ಹತ್ಯೆ: ಉದ್ರಿಕ್ತರ ಗುಂಪಿನಿಂದ ಪೊಲೀಸ್ ಪೋಸ್ಟ್  ವಾಹನಗಳಿಗೆ ಬೆಂಕಿ

ಆಜಂ ಘರ್: ಗ್ರಾಮದ ಮುಖ್ಯಸ್ಥನನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಆಜಂ ಘರ್ ನ ಬಸ್ಗೌನ್ ನಲ್ಲಿ ಉದ್ರಿಕ್ತರ ಗುಂಪು ಪೊಲೀಸ್ ಪೋಸ್ಟ್, ವಾಹನಗಳಿಗೆ ಬೆಂಕಿ ಹಚ್ಚಿದೆ. 

ಈ ಘಟನೆ ಹಿಂಸಾಚಾರಕ್ಕೆ ಕಾರಣವಾಗಿದ್ದು ಗುಂಪು ಘರ್ಷಣೆಗೆ ತಿರುಗಿದೆ. ಗ್ರಾಮದ ಮುಖ್ಯಸ್ಥನನ್ನು ಗುಂಡಿಕ್ಕಿ ಹತ್ಯೆ ಮಾಡಿದಾಗಲೇ ಪರಿಸ್ಥಿತಿ ಪ್ರಕ್ಷುಬ್ಧವಾಗಿತ್ತು. ಇಷ್ಟು ಸಾಲದೆಂಬಂತೆ ಈ ಘಟನೆ ಬೆನ್ನಲ್ಲೇ ಒಂದು ಮಗುವನ್ನು ಹತ್ಯೆ ಮಾಡಿದ್ದು ಪರಿಸ್ಥಿತಿ ವಿಕೋಪಕ್ಕೆ ಹೋಗುವಂತೆ ಮಾಡಿದೆ. 

ಸತ್ಯಮೇವ್ (42) ಗುಂಡಿನ ದಾಳಿಗೆ ಬಲಿಯಾಗಿರುವ ವ್ಯಕ್ತಿಯಾಗಿದ್ದು, ಆತನ ಬೆಂಬಲಿಗರು ಹಲ್ಲೆ ನಡೆಸಿ ಪೊಲೀಸ್ ಪೋಸ್ಟ್ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.  ಇದೇ ವೇಳೆಯಲ್ಲಿ ವಾಹನವೊಂದು ಮಗುವಿನ ಮೇಲೆ ಹರಿದಿದ್ದು ಮಗು ಸಹ ಸಾವನ್ನಪ್ಪಿದೆ. 

ಘಟನೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿರುವ ಸಿಎಂ ಯೋಗಿ ಆದಿತ್ಯನಾಥ್ ಅಲ್ಲಿನ ಎಸ್ಎಚ್ಒ ನ್ನು ಅಮಾನತುಗೊಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com