ಸಾಮಾಜಿಕ ಅಂತರ, ಬ್ಯಾಕ್ಟೀರಿಯಾ ನಿವಾರಕ ಉಪಕರಣ, 10 ಪರದೆಗಳು: ಸಂಸತ್ ಅಧಿವೇಶನಕ್ಕೆ ಸಿದ್ಧತೆ 

ಕೊರೋನಾ ಭೀತಿಯ ನಡುವೆಯೇ ಸಂಸತ್ ನ ಮುಂಗಾರು ಅಧಿವೇಶನಕ್ಕೂ ಸಿದ್ಧತೆ ನಡೆದಿದೆ. 
ಸಂಸತ್ತಿನ ಸಂಗ್ರಹ ಚಿತ್ರ
ಸಂಸತ್ತಿನ ಸಂಗ್ರಹ ಚಿತ್ರ

ನವದೆಹಲಿ: ಕೊರೋನಾ ಭೀತಿಯ ನಡುವೆಯೇ ಸಂಸತ್ ನ ಮುಂಗಾರು ಅಧಿವೇಶನಕ್ಕೂ ಸಿದ್ಧತೆ ನಡೆದಿದೆ. 

ಸಂಸತ್ ಭವನದಲ್ಲಿ ಅಧಿವೇಶನಕ್ಕೆ ಸಿದ್ಧತೆ ನಡೆಸಲಾಗಿದ್ದು, ಕೋವಿಡ್-19 ಪ್ರೊಟೋಕಾಲ್ ಅನುಸಾರವಾಗಿ ಸದಸ್ಯರಿಗೆ ಆಸನದ ವ್ಯವಸ್ಥೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಗುತ್ತಿದೆ. 

ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕಿರುವ ಹಿನ್ನೆಲೆಯಲ್ಲಿ ಸಂಸತ್ ಭವನ ಇದೇ ಮೊದಲ ಬಾರಿಗೆ ಹಲವು ಹೊಸ ಕ್ರಮಗಳಿಗೆ ಸಾಕ್ಷಿಯಾಗಲಿದೆ. 

ರಾಜ್ಯಸಭೆಯ ಕಾರ್ಯದರ್ಶಿಗಳು ನೀಡಿರುವ ಮಾಹಿತಿಯ ಪ್ರಕಾರ, ಮೇಲ್ಮನೆಯ ಸದಸ್ಯರು ಕಲಾಪದ ವೇಳೆಯಲ್ಲಿ ಚೇಂಬರ್ ಹಾಗೂ ಗ್ಯಾಲರಿಗಳಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. 

1952 ರ ನಂತರ ಇದೇ ಮೊದಲ ಬಾರಿಗೆ ಇಂತಹ ವ್ಯವಸ್ಥೆಯನ್ನು ಕಾಣುತ್ತಿದ್ದೇವೆ. 60 ಸದಸ್ಯರು ಚೇಂಬರ್ ನಲ್ಲಿ ಕುಳಿತರೆ 51  ಸದಸ್ಯರು ರಾಜ್ಯಸಭೆಯ ಗ್ಯಾಲರಿಯಲ್ಲಿ ಕುಳಿತುಕೊಳ್ಳಲಿದ್ದಾರೆ. ಉಳಿದ 132 ಸದಸ್ಯರು ಲೋಕಸಭಯ ಚೇಂಬರ್ ನಲ್ಲಿ ಕುಳಿತುಕೊಳ್ಳಲಿದ್ದಾರೆ. ಇದೇ ಮಾದರಿಯ ವ್ಯವಸ್ಥೆಯಲ್ಲಿ ಲೋಕಸಭೆಯಲ್ಲಿಯೂ ಜಾರಿಗೊಳಿಸಲಾಗುತ್ತದೆ ಎಂದು ಕಾರ್ಯದರ್ಶಿಗಳು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com