ರಾಜಸ್ಥಾನ ಹೈಕೋರ್ಟ್
ರಾಜಸ್ಥಾನ ಹೈಕೋರ್ಟ್

ಕಾಂಗ್ರೆಸ್ ಜತೆ ಬಿಎಸ್ ಪಿ ಶಾಸಕರ ವಿಲೀನ: ಬಿಜೆಪಿ ಅರ್ಜಿ ವಿಚಾರಣೆ ನಡೆಸುವಂತೆ ಸ್ಪೀಕರ್ ಗೆ ರಾಜಸ್ಥಾನ ಹೈ ಸೂಚನೆ

ಆಡಳಿತರೂಢ ಕಾಂಗ್ರೆಸ್ ಜೊತೆ ಬಿಎಸ್ ಪಿಯ ಆರು ಶಾಸಕರ ವಿಲೀನ ಪ್ರಕರಣಕ್ಕೆ ಸಂಬಂಧಿಸಿಂದಂತೆ ಬಿಜೆಪಿ ಶಾಸಕರು ಸಲ್ಲಿಸಿರುವ ಅರ್ಜಿಯನ್ನು ಆಧ್ಯತೆ ಆಧಾರದ ಮೇಲೆ ವಿಚಾರಣೆ ನಡೆಸುಂತೆ ರಾಜಸ್ಥಾನ ಹೈಕೋರ್ಟ್ ವಿಧಾನಸಭೆ ಸ್ಪೀಕರ್ ಗೆ ಸೋಮವಾರ ಸೂಚಿಸಿದೆ.

ಜೈಪುರ: ಆಡಳಿತರೂಢ ಕಾಂಗ್ರೆಸ್ ಜೊತೆ ಬಿಎಸ್ ಪಿಯ ಆರು ಶಾಸಕರ ವಿಲೀನ ಪ್ರಕರಣಕ್ಕೆ ಸಂಬಂಧಿಸಿಂದಂತೆ ಬಿಜೆಪಿ ಶಾಸಕರು ಸಲ್ಲಿಸಿರುವ ಅರ್ಜಿಯನ್ನು ಆಧ್ಯತೆ ಆಧಾರದ ಮೇಲೆ ವಿಚಾರಣೆ ನಡೆಸುಂತೆ ರಾಜಸ್ಥಾನ ಹೈಕೋರ್ಟ್ ವಿಧಾನಸಭೆ ಸ್ಪೀಕರ್ ಗೆ ಸೋಮವಾರ ಸೂಚಿಸಿದೆ.

ಬಿಎಸ್ ಪಿ ಶಾಸಕರ ವಿಲೀನ ಸಂಬಂಧ ಬಿಜೆಪಿ ಶಾಸಕ ಮದನ್ ದಿಲಾವರ್ ಅವರು ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಮಹೇಂದ್ರ ಕುಮಾರ್ ಗೋಯಲ್ ಅವರ ಏಕ ಸದಸ್ಯ ಪೀಠ, ಮೂರು ತಿಂಗಳೊಳಗೆ ಅರ್ಜಿಯ ವಿಚಾರಣೆ ನಡೆಸುವಂತೆ ಸ್ಪೀಕರ್ ಗೆ  ಸೂಚಿಸಿದೆ.

ಮಾರ್ಚ್ 16ರಂದು ಬಿಜೆಪಿ ಶಾಸಕರು ಸಲ್ಲಿಸಿದ ಅರ್ಜಿಯನ್ನು ಮೂರು ತಿಂಗಳಲ್ಲಿ ಆಧ್ಯತೆ ಆಧಾರದ ಮೇಲೆ ವಿಚಾರಣೆ ನಡೆಸಿ ಇತ್ಯರ್ಥಪಡಿಸಿ ಎಂದು ಹೈಕೋರ್ಟ್ ಸ್ಪೀಕರ್ ಗೆ ಆದೇಶಿಸಿರುವುದಾಗಿ ಸ್ಪೀಕರ್ ಪರ ವಕೀಲರು ತಿಳಿಸಿದ್ದಾರೆ.

ಸಂದೀಪ್ ಯಾದವ್, ವಾಜಿಬ್ ಅಲಿ, ದೀಪ್ ಚಂದ್ ಖಾರಿಯಾ, ಲಖನ್ ಮೀನಾ, ಜೋಗೇಂದ್ರ ಅಹ್ವಾನ ಮತ್ತು ರಾಜೇಂದ್ರ ಗುದಾ 2018 ರ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್ ಪಿ ಟಿಕೆಟ್ ನಿಂದ ಗೆಲುವು ಸಾಧಿಸಿದ್ದರು. ಅವರು ಸೆಪ್ಟೆಂಬರ್ 2019 ರಲ್ಲಿ ಕಾಂಗ್ರೆಸ್ ಜತೆ ವಿಲೀನವಾಗಿದ್ದರು.

ಬಿಎಸ್ ಪಿ ಶಾಸಕರ ವಿಲೀನ ರದ್ದುಗೊಳಿಸುವಂತೆ ಬಿಜೆಪಿ ಸ್ಪೀಕರ್ ಗೆ ಮನವಿ ಸಲ್ಲಿಸಿತ್ತು. ಆದರೆ ಇದುವರೆಗೂ ವಿಚಾರಣೆ ನಡೆಸದ ಸ್ಪೀಕರ್ ವಿರುದ್ಧ ಬಿಜೆಪಿ ಹೈಕೋರ್ಟ್ ಮೆಟ್ಟಿಲೇರಿತ್ತು.

Related Stories

No stories found.

Advertisement

X
Kannada Prabha
www.kannadaprabha.com