ಸುಪ್ರೀಂ ಕೋರ್ಟ್ ನಲ್ಲಿ ಕ್ಷಮೆ ಕೋರಲು ಪ್ರಶಾಂತ್ ಭೂಷಣ್ ನಕಾರ  

ಸಾಮಾಜಿಕ ಕಾರ್ಯಕರ್ತ, ವಕೀಲ ಪ್ರಶಾಂತ್ ಭೂಷನ್ ನ್ಯಾಯಾಂಗದ ವಿರುದ್ಧ ಮಾಡಿದ್ದ ಟ್ವೀಟ್ ಗೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಕುರಿತಂತೆ ಸುಪ್ರೀಂ ಕೋರ್ಟ್ ನ ಕ್ಷಮೆ ಕೋರಲು ನಿರಾಕರಿಸಿದ್ದಾರೆ. 
ಹಿರಿಯ ವಕೀಲ ಪ್ರಶಾಂತ್ ಭೂಷಣ್
ಹಿರಿಯ ವಕೀಲ ಪ್ರಶಾಂತ್ ಭೂಷಣ್

ನವದೆಹಲಿ: ಸಾಮಾಜಿಕ ಕಾರ್ಯಕರ್ತ, ವಕೀಲ ಪ್ರಶಾಂತ್ ಭೂಷನ್ ನ್ಯಾಯಾಂಗದ ಬಗ್ಗೆ ಮಾಡಿದ್ದ ಟ್ವೀಟ್, ನ್ಯಾಯಾಂಗ ನಿಂದನೆ ಕುರಿತಂತೆ ಸುಪ್ರೀಂ ಕೋರ್ಟ್ ನ ಕ್ಷಮೆ ಕೋರಲು ನಿರಾಕರಿಸಿದ್ದಾರೆ. 

ಒಂದು ವೇಳೆ ತಾವು ಬೇಷರತ್ ಅಥವಾ ಷರತ್ತು ಬದ್ಧ ಕ್ಷಮೆ ಯಾಚಿಸಿದರೆ, ತಮ್ಮ ಆತ್ಮಸಾಕ್ಷಿಗೆ ಅಪ್ರಾಮಾಣಿಕನಾಗುತ್ತೇನೆ ಎಂದು ಆ.24 ರಂದು ಪ್ರಶಾಂತ್ ಭೂಷಣ್ ಕೋರ್ಟ್ ಗೆ ಈ ರೀತಿ ಹೇಳಿದ್ದಾರೆ.

ತಾವು ನ್ಯಾಯಾಂಗದ ಕುರಿತು ಹೇಳಿದ್ದ ಹೇಳಿಕೆ, ವಿಶ್ವಾಸಾರ್ಹವಾದದ್ದು ಆದ ಕಾರಣ ಈಗಲೂ ತಮ್ಮ ಹೇಳಿಕೆಗೆ ಬದ್ಧರಾಗಿರುವುದಾಗಿ ಭೂಷಣ್ ತಿಳಿಸಿದ್ದಾರೆ. 

ನ್ಯಾಯಾಂಗಕ್ಕೆ ಸಂಬಂಧಪಟ್ಟ ಹೇಳಿಕೆಗೆ ನಾನು ಕ್ಷಮೆ ಯಾಚಿಸಿದರೆ ಅದು ನನ್ನ ಆತ್ಮಸಾಕ್ಷಿಗೆ ದ್ರೋಹ ಬಗೆದಂತಾಗುತ್ತದೆ ಎಂದು ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ. ಕೋರ್ಟ್ ನ ಅಧಿಕಾರಿಯಾಗಿ ಕೋರ್ಟ್ ದೋಷರಹಿತ ಚರಿತ್ರೆಯನ್ನು ಕಳೆದುಕೊಳ್ಳುತ್ತಿರುವಾಗ ಅದರ ಬಗ್ಗೆ ಧ್ವನಿ ಎತ್ತುವುದು ತಮ್ಮ ಕರ್ತವ್ಯವೆಂದು ಪ್ರಶಾಂತ್ ಭೂಷಣ್ ತಿಳಿಸಿದ್ದಾರೆ. 

ಸದುದ್ದೇಶದಿಂದ ನಾನು ನನ್ನ ಅಭಿಪ್ರಾಯವನ್ನು ಮಂಡಿಸಿದ್ದೇನೆ. ಬದಲಾಗಿ ಸುಪ್ರೀಂ ಕೋರ್ಟ್ ನ ಅಥವಾ ನಿರ್ದಿಷ್ಟ ನ್ಯಾಯಮೂರ್ತಿಗಳಿಗೆ ಮಸಿ ಬಳಿಯುವ ಉದ್ದೇಶದಿಂದಲ್ಲ ಎಂದು ಪ್ರಶಾಂತ್ ಭೂಷಣ್ ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com