ಮಾಜಿ ಸಚಿವ ಅರುಣ್ ಜೇಟ್ಲಿ ಮೊದಲ ಪುಣ್ಯ ಸ್ಮರಣೆ: ಪುತ್ರ ರೋಹನ್, ಪ್ರಧಾನಿ ಮೋದಿ ಸೇರಿ ಗಣ್ಯರ ನೆನಕೆ

ಮಾಜಿ ಕೇಂದ್ರ ಸಚಿವ, ದಿವಂಗತ ಅರುಣ್ ಜೇಟ್ಲಿಯವರ ಮೊದಲ ವರ್ಷದ ಪುಣ್ಯ ಸ್ಮರಣೆ ದಿನವಾದ ಇಂದು (ಆ.೨೪) ಜೇಟ್ಲಿ ಅವರ ಪುತ್ರ ರೋಹನ್ ತಮ್ಮ ತಂದೆಯವರ ನೆನಪು ಮಾಡಿಕೊಂಡಿದ್ದಾರೆ.
ಮಾಜಿ ಸಚಿವ ಅರುಣ್ ಜೇಟ್ಲಿ ಮೊದಲ ಪುಣ್ಯ ಸ್ಮರಣೆ: ಪುತ್ರ ರೋಹನ್, ಪ್ರಧಾನಿ ಮೋದಿ ಸೇರಿ ಗಣ್ಯರ ನೆನಕೆ
Updated on

ನವದೆಹಲಿ: ಮಾಜಿ ಕೇಂದ್ರ ಸಚಿವ, ದಿವಂಗತ ಅರುಣ್ ಜೇಟ್ಲಿಯವರ ಮೊದಲ ವರ್ಷದ ಪುಣ್ಯ ಸ್ಮರಣೆ ದಿನವಾದ ಇಂದು (ಆ.24) ಜೇಟ್ಲಿ ಅವರ ಪುತ್ರ ರೋಹನ್ ತಮ್ಮ ತಂದೆಯವರ ನೆನಪು ಮಾಡಿಕೊಂಡಿದ್ದಾರೆ.

"ನೀವು ನಮ್ಮನ್ನು ತೊರೆದು ಒಂದು ವರ್ಷವಾಗಿದೆ, ಅಪ್ಪ.. ನನಗಂತೂ ಇದು ನಿನ್ನೆ ಸಂಭವಿಸಿದಂತಿದೆ.  ನೋವು ಇನ್ನೂ ಹಸಿಯಾಗಿದೆ. . ಆದರೆ ನಿಮ್ಮ ಜೀವನ ಮೌಲ್ಯಗಳು , ತತ್ವಗಳು ಮತ್ತು ದೃಷ್ಟಿಗೆ ಅನುಗುಣವಾಗಿ ಬದುಕಬೇಕೆಂಬ ನನ್ನ ಸಂಕಲ್ಪ. ನೀವು ಯಾವಾಗಲೂ ನಮ್ಮೊಂದಿಗಿದ್ದೀರಿ.. ಸೋ ಮಿಸ್ಡ್.. ಸೋ ಲವ್ಡ್...!" ರೋಹನ್ ಟ್ವೀಟ್ ಮಾಡಿದ್ದಾರೆ. 

ಪ್ರಧಾನಿ ಮೋದಿ ಸ್ಮರಣೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಲವಾರು ನಾಯಕರು ದಿವಂಗತ ಅರುಣ್ ಜೇಟ್ಲಿ ಅವರ ಮೊದಲ ಪುಣ್ಯ ಸ್ಮರಣೆಯ ದಿನ ಅವರನ್ನು ನೆನೆದಿದ್ದಾರೆ.

“ಈ ದಿನ, ಕಳೆದ ವರ್ಷ, ನಾವುಅರುಣ್ ಜೇಟ್ಲೆ ಜೀ ಅವರನ್ನು ಕಳೆದುಕೊಂಡಿದ್ದೇವೆ. ನಾನು ನನ್ನ ಸ್ನೇಹಿತನನ್ನು ತುಂಬಾ  ಮಿಸ್ ಮಾಡಿಕೊಳ್ಳುತ್ತೇನೆ. ಅರುಣ್ ಜೀ  ಭಾರತಕ್ಕೆ ಶ್ರದ್ಧೆಯಿಂದ ಸೇವೆ ಸಲ್ಲಿಸಿದರು. ಅವರ ಬುದ್ಧಿಶಕ್ತಿ, ಕಾನೂನು ಕುಶಾಗ್ರಮತಿ ಮತ್ತು ವ್ಯಕ್ತಿತ್ವ ಮಹತ್ವದ್ದಾಗಿದೆ. ”ಎಂದು ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮದಲ್ಲಿ  ಹೇಳಿದ್ದಾರೆ.

ಕಳೆದ ವರ್ಷ ಈ ದಿನ ಪ್ರಧಾನಿ ಮೋದಿ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಗೆ ರಾಜ್ಯ ಪ್ರವಾಸದಲ್ಲಿದ್ದಾಗ ದೆಹಲಿಯಲ್ಲಿ ಅರುಣ್ ಜೇಟ್ಲಿ ನಿಧನರಾಗಿದ್ದರು.

ಇನ್ನು ಆಡಳಿತಾರೂಢ ಬಿಲೆಪಿಯ  ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜೇಟ್ಲಿಯವರ ಪುತ್ರಿ ಸೋನಾಲಿ ಜೇಟ್ಲಿ ಸೇರಿ ಅನೇಕರು ಅರುಣ್ ಜೇಟ್ಲಿ ಸ್ಮರಣೆ ಮಾಡಿದ್ದಾರೆ. 
 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com