ನವದೆಹಲಿ: ಪಕ್ಷದ ನಾಯಕತ್ವ ಸಂಬಂಧದ ಬಗ್ಗೆ ಕಾಂಗ್ರೆಸ್ ನಾಯಕರು ಬರೆದಿದ್ದ ಗೌಪ್ಯ ಪತ್ರ ಸೋರಿಕೆಯಾದ ಬಗ್ಗೆ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಬೆಳಗ್ಗೆ 11 ಗಂಟೆಗೆ ಆರಂಭವಾಯಿತು, ಆ ಸಮಯಕ್ಕಾಗಲೇ ಮಾಧ್ಯಮಗಳಲ್ಲಿ ಕಾಂಗ್ರೆಸ್ ನಾಯಕರ ಪತ್ರ ವೈರಲ್ ಆಗಿತ್ತು. ಅದರಲ್ಲಿ ಭಾಗವಹಿಸಿದ್ದ ಕೆಲವು ನಾಯಕರು ಪತ್ರವನ್ನು ಶೇರ್ ಮಾಡದಂತೆ ಮನವಿ ಮಾಡಿದ್ದರು.
ಹೀಗಾಗಿ ಪಕ್ಷದ 23 ನಾಯಕರು ಬರೆದ ಪತ್ರ ಸೋರಿಕೆಯಾಗಿರುವ ಚರ್ಚೆ ನಡೆಸಲಾಯಿತು.ಪತ್ರದಲ್ಲಿ ಬರೆದಿದ್ದ ವಿಷಯದ ಬಗ್ಗೆ ಸೋನಿಯಾಗಾಂಧಿ ಅಷ್ಟಾಗಿ ತಲೆಕೆಡಿಸಿಕೊಳ್ಳಲಿಲ್ಲ ಆದರೆ ಗೌಪ್ಯವಾಗಿರಬೇಕಾದ ಪತ್ರ ಸೋರಿಕೆಯಾದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ನಾಯಕತ್ವದ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು. ಇನ್ನೂ ಈ ಹಿಂದೆ ನಡೆದ ಘಟನೆಯಿಂದ ಪಾಠ ಕಲಿತಿದ್ದ ಕಾಂಗ್ರೆಸ್ ಜೂಮ್ ಮೀಟಿಂಗ್ ರದ್ದುಗೊಳಿಸಿ ವೆಬ್ ಎಕ್ಸ್ ನಲ್ಲಿ ಸಭೆ ನಡೆಸಿದರು.
“ಎಲ್ಲಾ ಮುಂಜಾಗ್ರತಾ ಕ್ರಮಗಳ ಹೊರತಾಗಿಯೂ, ಸಭೆಯಲ್ಲಿ ಭಾಗವಾಗಿದ್ದ ಪಕ್ಷದ ಮುಖಂಡರು ಸಭೆಯ ವಿವರಗಳನ್ನು ಬಹಿರಂಗಪಡಿಸಿದ್ದಾರೆ ಎಂದು ಪಕ್ಷದ ಕಾರ್ಯಕರ್ತರೊಬ್ಬರು
ತಿಳಿಸಿದ್ದಾರೆ.
Advertisement