ಇದು ಒಂದು ಹುದ್ದೆಯ ಪ್ರಶ್ನೆಯಲ್ಲ ಬದಲಿಗೆ ನನ್ನ ದೇಶದ ಪ್ರಶ್ನೆ: ಸೋನಿಯಾಗೆ ಬರೆದ ಪತ್ರದಲ್ಲಿ ಕಪಿಲ್ ಸಿಬಲ್

ನಾಯಕತ್ವ ಬದಲಾವಣೆ, ಪಕ್ಷದ ನೀತಿ ನಡವಳಿಕೆಗಳ ಕುರಿತು ಸೋನಿಯಾ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್ ನ 23 ನಾಯಕರಲ್ಲಿ ಒಬ್ಬರಾದ ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಮಂಗಳವಾರ "ಇದು ಒಂದು ಹುದ್ದೆಯ ಬಗ್ಗೆ ಲ್ಲದೆ ಇಡೀ  ದೇಶದ ಬಗ್ಗೆ ಹೆಚ್ಚು ಮಹತ್ವದ್ದಾಗಿದೆ " ಎಂದಿದ್ದಾರೆ.
ಕಪಿಲ್ ಸಿಬಲ್
ಕಪಿಲ್ ಸಿಬಲ್
Updated on

ನವದೆಹಲಿ: ನಾಯಕತ್ವ ಬದಲಾವಣೆ, ಪಕ್ಷದ ನೀತಿ ನಡವಳಿಕೆಗಳ ಕುರಿತು ಸೋನಿಯಾ ಗಾಂಧಿಗೆ ಪತ್ರ ಬರೆದ ಕಾಂಗ್ರೆಸ್ ನ 23 ನಾಯಕರಲ್ಲಿ ಒಬ್ಬರಾದ ಹಿರಿಯ ಕಾಂಗ್ರೆಸ್ ಮುಖಂಡ ಕಪಿಲ್ ಸಿಬಲ್ ಮಂಗಳವಾರ "ಇದು ಒಂದು ಹುದ್ದೆಯ ಬಗ್ಗೆ ಅಲ್ಲದೆ ಇಡೀ  ದೇಶದ ಬಗ್ಗೆ ಹೆಚ್ಚು ಮಹತ್ವದ್ದಾಗಿದೆ " ಎಂದಿದ್ದಾರೆ.

ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯ ಒಂದು ದಿನದ ನಂತರ, ಸಿಬಲ್ ನಿಗೂಢ ಟ್ವೀಟ್ ನಲ್ಲಿ ಈ ಹೇಳಿಕೆಗಳನ್ನು ನೀಡಿದ್ದಾರೆ.

"ಇದು ಒಂದು ಹುದ್ದೆಯ ಕುರಿತಾದ ಪ್ರಶ್ನೆಯಲ್ಲ ಬದಲಾಗಿ  ನನ್ನ ದೇಶದ ಬಗ್ಗೆ ಇದೆ" ಸಿಬಲ್ ಟ್ವೀಟ್ ಮಾಡಿದ್ದಾರೆ.

ಪಕ್ಷದ ಉನ್ನತ  ನಾಯಕತ್ವ ಕುರಿತು ನಿರ್ಧಾರ ತೆಗೆದುಕೊಳ್ಳುವ  ಏಳು ಗಂಟೆಗಳ ಸಭೆಯ ನಂತರ, ಸಿಐಡಬ್ಲ್ಯುಸಿ ಸೋನಿಯಾ ಗಾಂಧಿಯನ್ನು ಎಐಸಿಸಿ ಅಧಿವೇಶನ ನಡೆಯುವವರೆಗೂ ತನ್ನ ಮಧ್ಯಂತರ ಅಧ್ಯಕ್ಷ ಸ್ಥಾನದಲ್ಲೇ ಮುಂದುವರಿಯುವಂತೆ ಒತ್ತಾಯಿಸಿತು ಮತ್ತು ಪಕ್ಷ ಎದುರಿಸುತ್ತಿರುವ ಸವಾಲುಗಳನ್ನು ದಿಟ್ಟವಾಗಿ ಎದುರಿಸಲು  ಅಗತ್ಯವಾದ ಸಾಂಸ್ಥಿಕ ಬದಲಾವಣೆಗಳನ್ನು ಜಾರಿಗೆ ತರಲು ಅವರಿಗೆ ಅಧಿಕಾರ ನೀಡಿತು.

ಪಕ್ಷ ಮತ್ತು ಅದರ ನಾಯಕತ್ವವನ್ನು ದುರ್ಬಲಗೊಳಿಸಲು ಯಾರಿಗೂ ಅನುಮತಿ ನೀಡುವುದಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.ಸಿಡಬ್ಲ್ಯುಸಿ ಆಂತರಿಕ ಪಕ್ಷದ ಸಮಸ್ಯೆಗಳನ್ನು ಮಾಧ್ಯಮಗಳ ಮೂಲಕ ಅಥವಾ ಸಾರ್ವಜನಿಕ ವೇದಿಕೆಗಳಲ್ಲಿ ಚರ್ಚಿಸಲು ಸಾಧ್ಯವಿಲ್ಲ ಮತ್ತು ಅಂತಹ ಎಲ್ಲಾ ಸಮಸ್ಯೆಗಳನ್ನು ಪಕ್ಷದೊಳಗೆ "ಸ್ವಾಮ್ಯ ಮತ್ತು ಶಿಸ್ತಿನ ಹಿತದೃಷ್ಟಿಯಿಂದ" ಬಗೆಹರಿಸಿಕೊಳ್ಳಬೇಕು ಎಂದಿದೆ.

ಸಿಡಬ್ಲ್ಯುಸಿ ಸಭೆ ನಂತರ ಸಿಬಲ್ ಮತ್ತು ಶಶಿ ತರೂರ್ ಸೇರಿದಂತೆ ಕೆಲವು ಹಿರಿಯ ಕಾಂಗ್ರೆಸ್ ನಾಯಕರು ಸೋಮವಾರ ಸಂಜೆ ತಮ್ಮ ಹಿರಿಯ ಸಹೋದ್ಯೋಗಿ ಗುಲಾಮ್ ನಬಿ ಆಜಾದ್ ಅವರ ಮನೆಯಲ್ಲಿ ಸಭೆ ನಡೆಸಿದ್ದರು. ಸಭೆಯಲ್ಲಿ ಮುಕುಲ್ ವಾಸ್ನಿಕ್ ಮತ್ತು ಮನೀಶ್ ತಿವಾರಿ ಅವರು ಭಾಗವಹಿಸಿದ್ದರು ಈ ಸಭೆಯಲ್ಲಿ ಸಿಡಬ್ಲ್ಯುಸಿ ಸಭೆಯಲ್ಲಿ ಅಂಗೀಕರಿಸಿದ ನಿರ್ಣಯದ ಬಗ್ಗೆ ನಾಯಕರು ಚರ್ಚಿಸಿದರು.

ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಮತ್ತು ಪಕ್ಷದ ಕಚೇರಿಗಳಲ್ಲಿ "ಗೋಚರಿಸುವ" "ಪೂರ್ಣ ಪ್ರಮಾಣದ" ನಾಯಕತ್ವವನ್ನು ಹೊಂದಿರುವುದು, ರಾಜ್ಯ ಘಟಕಗಳಿಗೆ ಅಧಿಕಾರ ಹಂಚಿಕೆ ಮತ್ತು ಪಕ್ಷದ ಸಂವಿಧಾನಕ್ಕೆ ಅನುಗುಣವಾಗಿ ಸಿಡಬ್ಲ್ಯೂಸಿಯನ್ನು ಪರಿಷ್ಕರಿಸುವುದು, ಸಂಘಟನೆಯನ್ನು ಪುನರುಜ್ಜೀವನಗೊಳಿಸುವಂತೆ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿಗೆ ಬರೆದ ಪತ್ರದಲ್ಲಿ  23 ಹಿರಿಯ ಕಾಂಗ್ರೆಸ್ ನಾಯಕರು ನೀಡಿದ ಬಹುದೊಡ್ಡ ಸಲಹೆಗಳಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com