ಪ್ರಧಾನಿ ಮೋದಿ, ಶಿಂಜೊ ಅಬೆ
ದೇಶ
ಆಪ್ತ ಸ್ನೇಹಿತ ಶಿಂಜೊ ಅಬೆಗೆ ಅನಾರೋಗ್ಯ, ಮರುಗಿದ ಪ್ರಧಾನಿ ಮೋದಿ
ಜಪಾನ್ ಪ್ರಧಾನಿ ಶಿಂಜೊ ಅಬೆ ಅನಾರೋಗ್ಯಕ್ಕೀಡಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೋವನ್ನು ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಜಪಾನ್ ದೇಶಗಳ ನಡುವಣ ಬಲವಾದ ಸದೃಢ ಸಂಬಂಧ ಇರುವಂತೆ ಮಾಡುವಲ್ಲಿ ಶಿಂಜೊ ಅಬೆ ಅವರ ದಿಟ್ಟ ನಾಯಕತ್ವ ಹಾಗೂ ವೈಯಕ್ತಿಕ ಬದ್ಧತೆಯನ್ನು ಶ್ಲಾಘಿಸಿದ್ದಾರೆ.
ನವದೆಹಲಿ: ಜಪಾನ್ ಪ್ರಧಾನಿ ಶಿಂಜೊ ಅಬೆ ಅನಾರೋಗ್ಯಕ್ಕೀಡಾಗಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೋವನ್ನು ವ್ಯಕ್ತಪಡಿಸಿದ್ದಾರೆ. ಭಾರತ ಮತ್ತು ಜಪಾನ್ ದೇಶಗಳ ನಡುವಣ ಬಲವಾದ ಸದೃಢ ಸಂಬಂಧ ಇರುವಂತೆ ಮಾಡುವಲ್ಲಿ ಶಿಂಜೊ ಅಬೆ ಅವರ ದಿಟ್ಟ ನಾಯಕತ್ವ ಹಾಗೂ ವೈಯಕ್ತಿಕ ಬದ್ಧತೆಯನ್ನು ಶ್ಲಾಘಿಸಿದ್ದಾರೆ.
ಜಪಾನಿನ ಧೀರ್ಘವಾಧಿಯ ಪ್ರಧಾನಿಯಾಗಿ ಸೇವೆ ಸಲ್ಲಿಸಿರುವ ಶಿಂಜೊ ಅಬೆ, ಅನಾರೋಗ್ಯದ ಕಾರಣ ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದರು.
ಆಪ್ತ ಸ್ನೇಹಿತ ಶಿಂಜೊ ಅಬೆ ಅನಾರೋಗ್ಯಕ್ಕೀಡಾಗಿರುವುದು ನೋವು ತಂದಿದೆ. ಇತ್ತೀಚಿನ ವರ್ಷಗಳಲ್ಲಿ ಅವರ ದಿಟ್ಟ ನಾಯಕತ್ವ ಮತ್ತು ವೈಯಕ್ತಿಕ ಬದ್ಧತೆಯಿಂದ ಉಭಯ ದೇಶಗಳ ನಡುವಣ ಸಂಬಂಧ ಗಟ್ಟಿಯಾಗಿತ್ತು. ಅವರು ಬೇಗನೆ ಗುಣಮುಖರಾಗಲಿ ಎಂದು ಪ್ರಾರ್ಥಿಸುವುದಾಗಿ ಮೋದಿ ಟ್ವೀಟ್ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ