ದೇಶದಲ್ಲಿ 4 ಕೋಟಿ ಗಡಿಯತ್ತ ಕೋವಿಡ್-19 ಪರೀಕ್ಷೆಗಳು

ದೇಶದಲ್ಲಿ  ಕಳೆದ ಎರಡು ವಾರಗಳಲ್ಲಿ 1 ಕೋಟಿಗೂ ಹೆಚ್ಚು ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದ್ದು,  ಒಟ್ಟಾರೇ,  3 ಕೋಟಿ 94 ಲಕ್ಷದ 77 ಸಾವಿರದ 848 ಕೋವಿಡ್- 19 ಪರೀಕ್ಷೆ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಸಾಂದದರ್ಭಿಕ ಚಿತ್ರ
ಸಾಂದದರ್ಭಿಕ ಚಿತ್ರ

ನವದೆಹಲಿ: ದೇಶದಲ್ಲಿ  ಕಳೆದ ಎರಡು ವಾರಗಳಲ್ಲಿ 1 ಕೋಟಿಗೂ ಹೆಚ್ಚು ಮಾದರಿಗಳ ಪರೀಕ್ಷೆಗಳನ್ನು ನಡೆಸಲಾಗಿದ್ದು,  ಒಟ್ಟಾರೇ,  3 ಕೋಟಿ 94 ಲಕ್ಷದ 77 ಸಾವಿರದ 848 ಕೋವಿಡ್- 19 ಪರೀಕ್ಷೆ ನಡೆಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಪ್ರತಿ ಮಿಲಿಯನ್ ಗೆ  ಒಂದು ಪರೀಕ್ಷೆ , 28, 607 ಗೆ ಹೆಚ್ಚಾಗಿದೆ ಆಗಿರುವುದು ಮಹತ್ವದ ವಿಷಯವಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ. 

ತ್ವರಿತಗತಿಯ ಕೋವಿಡ್- 19 ಪರೀಕ್ಷೆ, ಪತ್ತೆ ಹಾಗೂ ಚಿಕಿತ್ಸೆ ಕಾರ್ಯದ ಕಡೆಗೆ ಗಮನ ಹರಿಸಲಾಗಿದ್ದು, ಸತತ ಎರಡನೇ ದಿನವೂ 9 ಲಕ್ಷ ಮಾದರಿಗಳ  ಪರೀಕ್ಷೆ ನಡೆಸಿರುವುದಾಗಿ ಸರ್ಕಾರ ತಿಳಿಸಿದೆ.

ಒಂದು ದಿನಕ್ಕೆ 10 ಲಕ್ಷ ಪರೀಕ್ಷೆ ಸಾಮರ್ಥ್ಯವನ್ನು ದೇಶ ಈಗಾಗಲೇ ಹೊಂದಿದ್ದು, ಗುರುವಾರ ಒಂದೇ ದಿನ 9,01,338 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಕಳೆದ ಎರಡು ವಾರಗಳಲ್ಲಿ 1 ಕೋಟಿ ಗೂ ಹೆಚ್ಚು ಮಾದರಿಗಳ ಪರೀಕ್ಷೆ ನಡೆಸಿರುವುದಾಗಿ ಮಾಹಿತಿ ನೀಡಲಾಗಿದೆ. 

ಪ್ರತಿ ಮಿಲಿಯನ್ ಗೆ 28, 607 ಪರೀಕ್ಷೆ ನಡೆಸುತ್ತಿರುವುದರಿಂದ ಕೊರೋನಾ ಸೋಂಕನ್ನು ಆರಂಭದಲ್ಲಿಯೇ ಪತ್ತೆ ಮಾಡಿ, ಸರಿಯಾದ ವೇಳೆಗೆ ಪರಿಣಾಮಕಾರಿ ಚಿಕಿತ್ಸೆ ನೀಡಲು ಸಾಧ್ಯವಾಗಿದೆ ಎಂದು  ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com