ಭಾರತದಲ್ಲಿ ನಾಲ್ಕು ಕೋಟಿ ದಾಟಿದ ಕೋವಿಡ್-19 ಪರೀಕ್ಷೆಗಳು

ದೇಶದಲ್ಲಿ ಶನಿವಾರದ ವೇಳೆಗೆ 4 ಕೋಟಿಗೂ ಹೆಚ್ಚು ಕೊವಿಡ್ -19 ಪರೀಕ್ಷೆಗಳನ್ನು ನಡೆಸುವ ಮೂಲಕ ಹೊಸ ಎತ್ತರಕ್ಕೇರಲಾಗಿದೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ದೇಶದಲ್ಲಿ ಶನಿವಾರದ ವೇಳೆಗೆ 4 ಕೋಟಿಗೂ ಹೆಚ್ಚು ಕೊವಿಡ್ -19 ಪರೀಕ್ಷೆಗಳನ್ನು ನಡೆಸುವ ಮೂಲಕ ಹೊಸ ಎತ್ತರಕ್ಕೇರಲಾಗಿದೆ. 

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕೇಂದ್ರೀಕೃತ ಮತ್ತು ಸಂಘಟಿತ ಪ್ರಯತ್ನಗಳಿಂದ ದೇಶದಲ್ಲಿ 4,04,06,609 ಜನರನ್ನು ಪರೀಕ್ಷಿಸುವ ಮೂಲಕ ಹೊಸ ಮೈಲಿಗಲ್ಲು ಸ್ಥಾಪಿಸಲಾಗಿದೆ ಎಂದು ಐಸಿಎಂಆರ್ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 9,28,761   ಪರೀಕ್ಷೆಗಳನ್ನು ನಡೆಸಲಾಗಿದ್ದು,  ಒಂದೇ ದಿನದಲ್ಲಿ ಗರಿಷ್ಠ ಪ್ರಮಾಣ ಇದಾಗಿದೆ. ಪ್ರತಿ ಹತ್ತುಲಕ್ಷ ಜನರಲ್ಲಿ ಪರೀಕ್ಷೆ ಪ್ರಮಾಣ(ಟಿಪಿಎಂ) 29,280 ಕ್ಕೆ ಏರಿದೆ. 

ಪರೀಕ್ಷೆ ಪ್ರಮಾಣವನ್ನು ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಹೆಚ್ಚಿಸಿರುವುದರಿಂದ ದೃಢಪಟ್ಟ ಪ್ರಕರಣಗಳ ಪ್ರಮಾಣವು ಅಂತಿಮವಾಗಿ ಕುಸಿಯಲಿದೆ.

2020 ರ ಜನವರಿಯಲ್ಲಿ ಪುಣೆಯ ಪ್ರಯೋಗಾಲಯದಲ್ಲಿ ಕೇವಲ ಒಂದು ಪರೀಕ್ಷೆ ನಡೆಸಿದ್ದು, ಇಂದು 4 ಕೋಟಿ ಪರೀಕ್ಷೆಗಳ ಮೈಲಿಗಲ್ಲು ತಲುಪುವಲ್ಲಿ ಭಾರತ ಬಹಳ ದೂರ ಕ್ರಮಿಸಿದೆ. ವಿಸ್ತೃತ ಪ್ರಯೋಗಾಲಯಗಳ ಜಾಲ ಮತ್ತು ಹಲವಾರು ನೀತಿ ಕ್ರಮಗಳ ಮೂಲಕ ದೇಶಾದ್ಯಂತ ಪರೀಕ್ಷಾ ಪ್ರಮಾಣ ಹೆಚ್ಚಾಗುತ್ತಿದೆ. ದೇಶದಲ್ಲಿ 1,576 ಪ್ರಯೋಗಾಲಯಗಳಿದ್ದು, ಇವುಗಳಲ್ಲಿ ಸರ್ಕಾರಿ ವಲಯದ   1,002, ಮತ್ತು  ಖಾಸಗಿ 574 ಪ್ರಯೋಗಾಲಯಗಳು ಸೇರಿವೆ.

ಇವುಗಳಲ್ಲಿ 806 ರಿಯಲ್-ಟೈಮ್ ಆರ್ ಟಿ ಪಿಸಿಆರ್ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು (462 ಸರ್ಕಾರಿ ಮತ್ತು 344 ಖಾಸಗಿ), 650 ಟ್ರೂನಾಟ್ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು (506 ಸರ್ಕಾರಿ ಮತ್ತು 144 ಖಾಸಗಿ) ಮತ್ತು 120   ಸಿಬಿಎನ್ಎಟಿ ಆಧಾರಿತ ಪರೀಕ್ಷಾ ಪ್ರಯೋಗಾಲಯಗಳು (34 ಸರ್ಕಾರಿ ಮತ್ತು 86 ಖಾಸಗಿ) ಸೇರಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com