ವಾಟ್ಸಪ್ ಮೇಲೆ ಬಿಜೆಪಿ ಹಿಡಿತವಿದೆ: ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಕಿಡಿಕಾರಿದ ರಾಹುಲ್ ಗಾಂಧಿ
ನವದೆಹಲಿ: ಫೇಸ್‌ಬುಕ್ ಮೇಲೆ ಬಿಜೆಪಿ ಹಿಡಿತ ಸಾಧಿಸಿದೆ ಎಂಬ ಹೇಳಿಕೆ ಬಳಿಕ ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಸಿದ್ದ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸಪ್ ಬಗೆಗೆ ಮಾತನಾಡಿದ್ದಾರೆ. ವಾಟ್ಸಪ್ ಮೇಲೆ ಬಿಜೆಪಿಗೆ ಹಿಡಿತವಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶನಿವಾರ ಆರೋಪಿಸಿದ್ದಾರೆ ಮತ್ತು ಭಾರತದಲ್ಲಿ ವಾಟ್ಸಪ್ ತನ್ನ ಪಾವತಿ ಸೇವೆಗಳನ್ನು ಪ್ರಾರಂಭಿಸಲು ಕೇಂದ್ರ ಸರ್ಕಾರದ ಅನುಮೋದನೆ ಬೇಕಿದೆ ಎಂದು ಹೇಳಿದ್ದಾರೆ.
"ಅಮೆರಿಕದ ಟೈಮ್ ನಿಯತಕಾಲಿಕೆಯು ವಾಟ್ಸಪ್-ಬಿಜೆಪಿ ಸಂಪರ್ಕವನ್ನು ಬಹಿರಂಗಪಡಿಸುತ್ತದೆ: 40 ಕೋಟಿ ಭಾರತೀಯರು ಇದನ್ನು ಬಳಸುತ್ತಿದ್ದಾರೆ. ಮೋದಿ ಸರ್ಕಾರದ ಅನುಮೋದನೆ ಸಿಕ್ಕೊಡನೆ ವಾಟ್ಸಪ್ ಭಾರತದಲ್ಲಿ ತನ್ನ ಪಾವತಿ ಸೇವೆ ಪ್ರಾರಂಭಕ್ಕೆ ಮುಂದಾಗಲಿದೆ. ಅಲ್ಲದೆ ಸರ್ಕಾರ ಮುಂದಿನ ದಿನಗಳಲ್ಲಿ ಸರ್ಕಾರದ ಅನುಮೋದನೆ ಅಗತ್ಯವಿರುವ ಪಾವತಿಗಳನ್ನು ಮಾಡಲು ವಾಟ್ಸಪ್ ಬಳಸಬೇಕೆಂದು ಬಯಸಿದೆ. ಹೀಗಾಗಿ, ವಾಟ್ಸಪ್ ಮೇಲೆ ಬಿಜೆಪಿಗೆ ಹಿಡಿತವಿದೆ" ಎಂದು ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಗಾಂಧಿ ಟ್ವೀಟ್ ಮಾಡಿದ್ದಾರೆ .
ವಾಟ್ಸಪ್ ಫೇಸ್‌ಬುಕ್ ಇಂಕ್ ಸಂಸ್ಥೆಯ ಅಂಗವಾಗಿದೆ.
ಈ ಹಿಂದೆ ಆಗಸ್ಟ್ 16 ರಂದು ಕಾಂಗ್ರೆಸ್ ಮಾಜಿ ಅಧ್ಯಕ್ಷ ದೇಶದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಫೇಸ್‌ಬುಕ್ ಮತ್ತು ವಾಟ್ಸಪ್ ಅನ್ನು ನಿಯಂತ್ರಿಸುತ್ತಿದೆ ಎಂದು ಆರೋಪಿಸಿದ್ದರು. ಮತದಾರರ ಮೇಲೆ ಪ್ರಭಾವ ಬೀರಲು ಅವರು ಈ ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ನಕಲಿ ಸುದ್ದಿ ಮತ್ತು ದ್ವೇಷ ಸಂದೇಶ ಹರಡುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಹೇಳಿದ್ದರು.
"ಬಿಜೆಪಿ ಮತ್ತು ಆರ್‌ಎಸ್‌ಎಸ್ ಭಾರತದಲ್ಲಿ ಫೇಸ್‌ಬುಕ್ ಮತ್ತು ವಾಟ್ಸಪ್ ಅನ್ನು ನಿಯಂತ್ರಿಸುತ್ತದೆ. ಅವರು ಅದರ ಮೂಲಕ ನಕಲಿ ಸುದ್ದಿ ಮತ್ತು ದ್ವೇಷದ ಸಂದೇಶ ಹರಡುತ್ತಾರೆ ಮತ್ತು ಅದನ್ನು ಮತದಾರರ ಮೇಲೆ ಪ್ರಭಾವ ಬೀರಲು ಬಳಸುತ್ತಾರೆ. ಅಂತಿಮವಾಗಿ, ಅಮೆರಿಕಾದ ಮಾಧ್ಯಮಗಳು ಫೇಸ್‌ಬುಕ್ ಬಗ್ಗೆ ಸತ್ಯವನ್ನು ಹೊರಹಾಕಿದೆ"ವರು ಈ ಹಿಂದೆ ಮಾಧ್ಯಮ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ