ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆ: ಮತದಾನ ಪ್ರಗತಿಯಲ್ಲಿ, ಪ್ರಮುಖ ನಾಯಕರಿಂದ ಹಕ್ಕು ಚಲಾವಣೆ

ಹಲವು ಮತಗಟ್ಟೆಗಳಲ್ಲಿ ಜನರು ಸರದಿ ಸಾಲಿನಲ್ಲಿ ನಿಲ್ಲುವುದರೊಂದಿಗೆ ತೀವ್ರ ಭದ್ರತೆ ಮಧ್ಯೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್(ಜಿಹೆಚ್ ಎಂಸಿ) ಗೆ ಮತದಾನ ಮಂಗಳವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. 
ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಪ್ರಗತಿಯಲ್ಲಿ
ಹೈದರಾಬಾದ್ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಪ್ರಗತಿಯಲ್ಲಿ
Updated on

ನವದೆಹಲಿ: ಹಲವು ಮತಗಟ್ಟೆಗಳಲ್ಲಿ ಜನರು ಸರದಿ ಸಾಲಿನಲ್ಲಿ ನಿಲ್ಲುವುದರೊಂದಿಗೆ ತೀವ್ರ ಭದ್ರತೆ ಮಧ್ಯೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್(ಜಿಹೆಚ್ ಎಂಸಿ) ಗೆ ಮತದಾನ ಮಂಗಳವಾರ ಬೆಳಗ್ಗೆ 7 ಗಂಟೆಗೆ ಆರಂಭವಾಗಿದೆ. 

74 ಲಕ್ಷಕ್ಕೂ ಹೆಚ್ಚು ಮತದಾರರು ಇಂದು ಮತ ಚಲಾಯಿಸುತ್ತಿದ್ದು 150 ವಲಯಗಳಲ್ಲಿ 1,122 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಗ್ರೇಟರ್ ಹೈದರಾಬಾದ್ ನಗರ ಪಾಲಿಕೆ ಚುನಾವಣೆಯನ್ನು ರಾಷ್ಟ್ರೀಯ ಪಕ್ಷಗಳು ಕೂಡ ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಬಿಜೆಪಿಯಿಂದ ಸ್ವತಃ ಅಮಿತ್ ಶಾ, ಯೋಗಿ ಆದಿತ್ಯನಾಥ್, ಕರ್ನಾಟಕದಿಂದ ಸಂಸದ ತೇಜಸ್ವಿ ಸೂರ್ಯ ಹೋಗಿ ಪ್ರಚಾರ ಮಾಡಿದ್ದರು.

ಎಲ್ಲಾ ರಾಜಕೀಯ ಪಕ್ಷಗಳ ನಾಯಕರು ಅಬ್ಬರದ ಪ್ರಚಾರ, ಆರೋಪ-ಪ್ರತ್ಯಾರೋಪ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹೈದರಾಬಾದ್ ಗೆ ಏನು ಮಾಡಲಿದೆ ಎಂದೆಲ್ಲ ಪ್ರಚಾರದ ವೇಳೆ ಹೇಳಿಕೊಂಡಿದ್ದರು. 

ಕೇಂದ್ರ ಗೃಹ ವ್ಯವಹಾರಗಳ ರಾಜ್ಯ ಸಚಿವ ಜಿ ಕಿಶನ್ ರೆಡ್ಡಿ, ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಒವೈಸಿ, ತೆಲಂಗಾಣ ಸಚಿವ ಹಾಗೂ ಟಿಆರ್ ಎಸ್ ನಾಯಕ ಕೆ ಟಿ ರಾಮ ರಾವ್ ಮೊದಲಾದವರು ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com