ದೇಶಿಯ ವಿಮಾನಗಳ ಸಂಚಾರ ಮಿತಿ ಶೇ. 70 ರಿಂದ 80ಕ್ಕೆ ಹೆಚ್ಚಿಸಿದ ಕೇಂದ್ರ

ಕೇಂದ್ರ ಸರ್ಕಾರ ಗುರುವಾರ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸಿಹಿ ಸುದ್ದಿ ನೀಡಿದ್ದು, ಕೋವಿಡ್ ನಂತರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದ್ದ ದೇಶೀಯ ವಿಮಾನಗಳ ಸಂಖ್ಯೆಯನ್ನು ಶೇ. 70 ರಿಂದ ಶೇ. 80ಕ್ಕೆ ಹೆಚ್ಚಿಸಲಾಗಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಕೇಂದ್ರ ಸರ್ಕಾರ ಗುರುವಾರ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಸಿಹಿ ಸುದ್ದಿ ನೀಡಿದ್ದು, ಕೋವಿಡ್ ನಂತರ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದ್ದ ದೇಶೀಯ ವಿಮಾನಗಳ ಸಂಖ್ಯೆಯನ್ನು ಶೇ. 70 ರಿಂದ ಶೇ. 80ಕ್ಕೆ ಹೆಚ್ಚಿಸಲಾಗಿದೆ.

ಕೊರೋನಾ ವೈರಸ್ ಸಾಂಕ್ರಾಮಿಕದ ನಡುವೆಯೂ ದೇಶಿಯ ಪ್ರಯಾಣಿಕ ವಿಮಾನಗಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ನವೆಂಬರ್ 11ರಂದು ಶೇ. 70 ರಷ್ಟು ವಿಮಾನಗಳ ಕಾರ್ಯಾಚರಣೆಗೆ ಅನುಮತಿ ನೀಡಲಾಗಿತ್ತು. ಇದೀಗ ಅದನ್ನು ಶೇ. 80ಕ್ಕೆ ಹೆಚ್ಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪುರಿ ಅವರು, "ಮೇ 25 ರಂದು 30 ಸಾವಿರ ಪ್ರಯಾಣಿಕರೊಂದಿಗೆ ದೇಶೀಯ ವಿಮಾನಯಾನ ಪುನರಾರಂಭಗೊಂಡಿತ್ತು. ಈಗ ಅದು 2.52 ಲಕ್ಷಕ್ಕೆ ತಲುಪಿದೆ ಎಂದು ಹೇಳಿದ್ದಾರೆ.

ಕೊರೋನಾ ವೈರಸ್ ಲಾಕ್ ಡೌನ್ ನಂತರ ಮೇ 25 ರಂದು ದೇಶಿಯ ವಿಮಾನ ಸಂಚಾರ ಪುನರಾರಂಭಗೊಂಡಾಗ ಶೇ. 33 ರಷ್ಟು ವಿಮಾನಗಳ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಜೂನ್ ಶೇ.45ಕ್ಕೆ, ಸೆಪ್ಟೆಂಬರ್ ನಲ್ಲಿ ಶೇ. 60ಕ್ಕೆ ಹಾಗೂ ನವೆಂಬರ್ ನಲ್ಲಿ ಶೇ. 70ಕ್ಕೆ ಹೆಚ್ಚಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com