

ನವದೆಹಲಿ: ರಾಷ್ಟ್ರ ರಾಜಧಾನಿಯ ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಯನ್ನು ಶಾಹೀನ್ ಬಾಗ್ ರೀತಿಯಲ್ಲಿ ಅರಾಜಕತೆ ಸೃಷ್ಠಿಸಲು 'ಟುಕ್ಡೆ ಟುಕ್ಡೆ ಗ್ಯಾಂಗ್' ಪ್ರಯತ್ನಿಸುತ್ತಿದೆ ಎಂದು ದೆಹಲಿ ಬಿಜೆಪಿ ಸಂಸದ ಮನೋಜ್ ತಿವಾರಿ ಆರೋಪಿಸಿದ್ದಾರೆ.
ಪ್ರತಿಭಟನಾ ಸ್ಥಳದಲ್ಲಿ ಕೇಳಿ ಬಂದಿರುವ ಖಲಿಸ್ತಾನ ಪರ ಘೋಷಣೆಗಳು ಹಾಗೂ ಕೆಲ ಪ್ರತಿಭಟನಾಕಾರರಿಂದ ಪ್ರಧಾನಿಗೆ ಬಂದಿರುವ ಬೆದರಿಕೆ ಕರೆಗಳನ್ನು ಗಮನಿಸಿದಾಗ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಇದೊಂದು ಪೂರ್ವಯೋಜಿತ ಸಂಚು ಎಂಬಂತೆ ಭಾಸವಾಗುತ್ತಿದೆ ಎಂದು ತಿವಾರಿ ಗಂಭೀರ ಆರೋಪ ಮಾಡಿದ್ದಾರೆ.
ಶಾಹೀನ್ ಬಾಗ್ ನಲ್ಲಿ ಸಿಎಎ ಹಾಗೂ ಎನ್ಆರ್ಸಿ ವಿರೋಧಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದವರು ರೈತರ ಪ್ರತಿಭಟನೆಯಲ್ಲಿ ಹಾಜರಿರುವುದನ್ನು ಗಮನಿಸಿದರೆ ಟುಕ್ಡೆ ಟುಕ್ಡೆ ಗ್ಯಾಂಗ್ ನವರು ಶಾಹೀನ್ ಬಾಗ್ 2.0 ಸೃಷ್ಟಿಸಲು ಹಾಗೂ ರೈತರ ಪ್ರತಿಭಟನೆಯ ನೆಪದಲ್ಲಿ ಅರಾಜಕತೆ ಸೃಷ್ಟಿಸಲು ಹೊರಟಿದ್ದಾರೆ ಎಂದು ಅವರು ದೂರಿದರು.
ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ನಿಜವಾದ ರೈತರು ಈ ಸತ್ಯ ಅರಿತು ಈ `ಟುಕ್ಡೆ ಟುಕ್ಡೆ' ಗ್ಯಾಂಗಿನ ಉದ್ದೇಶಗಳು ವಿಫಲವಾಗುವಂತೆ ನೋಡಿಕೊಳ್ಳಬೇಕು ದೆಹಲಿಯ ಹಿಂಸಾಚಾರದ ಸಂಚುಕೋರರು ಇದೀಗ ರೈತರ ಹೆಸರಿನಲ್ಲಿ ದೇಶವ್ಯಾಪಿ ಹಿಂಸಾಚಾರ ಪ್ರಚೋದಿಸಲು ಸಂಚು, ಹುನ್ನಾರ ಮಾಡುತ್ತಿದ್ದಾರೆ ಎಂದೂ ಅವರು ದೂರಿದರು.
Advertisement